ಗ್ರಾಮೀಣ ಹಳ್ಳಿಗಳ ಅಕ್ರಮ ಮಧ್ಯ ಮಾರಾಟದ ಅಂಗಡಿ ಮೇಲೆ ಪೊಲೀಸರ ದಾಳಿ ಪ್ರಕರಣ ದಾಖಲು
1 min read
ಗ್ರಾಮೀಣ ಹಳ್ಳಿಗಳ ಅಕ್ರಮ ಮಧ್ಯ ಮಾರಾಟದ ಅಂಗಡಿ ಮೇಲೆ ಪೊಲೀಸರ ದಾಳಿ ಪ್ರಕರಣ ದಾಖಲು
ಚಳ್ಳಕೆರೆ :
ಪೋಲಿಸ್ ಇಲಾಖೆಯವರು ನಗರ ಹಾಗೂ ವಿವಿಧ ಹಳ್ಳಿಗಳ ಮೇಲೆ ಗುರುವಾರ ದಾಳಿ ನಡೆಸಿ ಅಕ್ರಮ ಮಧ್ಯವನ್ನು ಪೋಲಿಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾಪರಹಳ್ಳಿ ಗ್ರಾಮದಲ್ಲಿ ಶಿವರಾಜ ತಂದೆ ಚಿಕ್ಕಪ್ಪ 55 ವರ್ಷ ಚಿಲ್ಲರೆ ಅಂಗಡಿಯಲ್ಲಿ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಆರೋಪದ ಮೇಲೆ ಪಿಎಸ್ಐ ಸತೀಶ್ ನಾಯಕ್ ದಾಳಿ ನಡೆಸಿ ಒಟ್ಟು 1651 ರೂ ಬೆಲೆಯ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ.
ಚಳ್ಳಕೆರೆಯ ಸೈಯದ್ ಯೂಸುಫ್ ತಂದೆ ಸೈಯದ್ ಫಾರೂಕ್ ಸುಮಾರು 48 ವರ್ಷ ಮುಸ್ಲಿಂ ಜನಾಂಗ ಚಿಲ್ಲರೆ ಅಂಗಡಿಯಲ್ಲಿ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು ಎಂಬ ಖಚಿತ ಮಾಹಿತಿಯ ಮೇಲೆ ಪಿಎಸ್ಐ ಸತೀಶ್ ನಾಯಕ್ ದಾಳಿ ಮಾಡಿ ಒಟ್ಟು 1065 ರೂ ಬೆಲೆಯ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ.
ಸಂಜೆ 7 ಗಂಟೆಗೆ ತಾಲೂಕಿನ ವೀರದಿಮ್ಮನಹಳ್ಳಿ ಗ್ರಾಮದ ಭಾಗ್ಯಮ್ಮ ತಂದೆ ಮೂರ್ತಿ ನಾಯಕ್ 35 ವರ್ಷ ವೀರದಿಮ್ಮನಹಳ್ಳಿ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಶಿವರಾಜ್ ದಾಳಿ ನಡೆಸಿದ್ದಾರೆ.
ದೊಡ್ಡೇರಿ ಗ್ರಾಮದ ವಿಶ್ವನಾಥ್ ತಂದೆ ಕೃಷ್ಣಪ್ಪ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮಧ್ಯವನ್ನು ತೆಗೆದುಕೊಂಡು ಬಂದು ಮಾರಾಟ ಮಾಡುತ್ತಿದ್ದು ಪಿಎಸ್ಐ ಸತೀಶ್ ನಾಯಕ್ ದಾಳಿ ನಡೆಸಿ 09 ಲೀಟರ್ ಮಧ್ಯವನ್ನು ವಶಕ್ಕೆ ಪಡೆದಿದ್ದಾರೆ.
ವೀರಪ್ಪನಕುಂಟೆ ಗ್ರಾಮದ ಹನುಮಂತ ರಾಯ ತಂದೆ ತಿಪ್ಪೇಸ್ವಾಮಿ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡುತ್ತಿದ್ದು ಈ ವೇಳೆಯಲ್ಲಿ ಪಿಎಸ್ಐ ಸತೀಶ್ ನಾಯ್ಕ್ ದಾಳಿ ಮಾಡಿ ಒಟ್ಟು 30.5 ಲೀಟರ್ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ.
ಸಿದ್ದಾಪುರ ಗ್ರಾಮದ ಭೀಮಣ್ಣ ತಂದೆ ಹನುಮಂತಪ್ಪ ಇವರ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಶಿವರಾಜ ಪಿಎಸ್ಐ ದಾಳಿ ಮಾಡಿ 12.9 ಲೀಟರ್ ಮಧ್ಯವನ್ನು ವಶಪಡಿಸಿಕೊಂಡು ಈ ಎಲ್ಲಾ ಪ್ರಕರಣಗಳನ್ನು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚಳ್ಳಕೆರೆ ಠಾಣಾಧಿಕಾರಿ ಕೆ ಕುಮಾರ್ ತಿಳಿಸಿದ್ದಾರೆ.