May 5, 2024

Chitradurga hoysala

Kannada news portal

ಮತ ಹಾಕದಂತೆ ಧಮ್ಕಿ ಹಾಕಿದರೆ, ಕಾನೂನು ಕ್ರಮ: ಸಹಾಯಕ ಚುನಾವಣಾ ಅಧಿಕಾರಿ ಮಹೇಂದ್ರ ಕುಮಾರ್ ಎಚ್ಚರಿಕೆ

1 min read

ಮತ ಹಾಕದಂತೆ ಧಮ್ಕಿ ಹಾಕಿದರೆ, ಕಾನೂನು ಕ್ರಮ:

ಸಹಾಯಕ ಚುನಾವಣಾ ಅಧಿಕಾರಿ ಮಹೇಂದ್ರ ಕುಮಾರ್ ಎಚ್ಚರಿಕೆ

 ವರದಿ :ಕಾವೇರಿ ಮಂಜಮ್ಮನವರ್,

ಚಿತ್ರದುರ್ಗ ಹೊಯ್ಸಳ:

ಹೊಸದುರ್ಗ:

ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎಂದು ಯಾರಾದರೂ ನಿಮಗೆ ಒತ್ತಡ ಅಥವಾ ಧಮ್ಕಿ ಹಾಕಿದರೆ, ಇಲ್ಲವೇ ಮತ ಹಾಕದಂತೆ ಭಯ ಹುಟ್ಟಿಸಿದರೆ, ನಿರ್ಭಿತಿಯಿಂದ ನಮಗೆ ಅಂತವರ ಮಾಹಿತಿ ನೀಡಿ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಹಾಯಕ ಚುನಾವಣಾ ಅಧಿಕಾರಿ ಮಹೇಂದ್ರ ಕುಮಾರ್ ಹೇಳಿದರು.

ತಾಲೂಕಿನ ಮಾಡದಕೆರೆ ಹೋಬಳಿಯ ಲಕ್ಕಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಮಾತನಾಡಿದರು.

ಲಕ್ಕಿಹಳ್ಳಿ ಗ್ರಾಮದಲ್ಲಿ ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶೇ.65ರಷ್ಟು ಮಾತ್ರ ಮತದಾನ ಮಾಡಲಾಗಿದೆ. ಇನ್ನುಳಿದ 35.ರಷ್ಟು ಮತದಾರರು ಮತದಾನ ಮಾಡದಿರಲು ಕಾರಣವೇನು? ಮತದಾನ ಮಾಡಲು ನಿಮಗೇನಾದರೂ ಸಮಸ್ಯೆ ಇದೆಯೇ? ಮತದಾನ ಮಾಡದಂತೆ ಯಾರದ್ದಾದರೂ ಒತ್ತಡ ಮತ್ತು ಭಯವಿದೆಯೇ? ಹಾಗೇನಾದರೂ ಇದ್ದರೆ, ಯಾವುದೇ ಭಯವಿಲ್ಲದೇ ನಮಗೆ ಮಾಹಿತಿ ನೀಡಿ. ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. 85 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಅವರ ಮನೆಗಳಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಉದ್ಯೋಗ ಹರಸಿಕೊಂಡು ನಗರಗಳತ್ತ ತೆರಳಿರುವ ಮತದಾರರನ್ನು ಕರೆಸಿಕೊಂಡು ಮತದಾನ ಮಾಡಿಸಿ. ಮತದಾನದ ದಿನದಂದು ನಿರ್ಭಿತಿಯಾಗಿ ಮತದಾನ ಮಾಡುವಂತಹ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ವೇಳೆ ತಹಶೀಲ್ದಾರ್ ತಿರುಪತಿ ಪಾಟೀಲ್, ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಣ್ಣ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭೀಮನಗೌಡ ಪಾಟೀಲ್, ರಾಜಸ್ವ ನಿರೀಕ್ಷಕ ನಟರಾಜ್, ಲಕ್ಕಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ, ಗ್ರಾಮಾಡಳಿತಾಧಿಕಾರಿ ಬಾಬು ದಳವಾಯಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಗುತ್ತಿಕಟ್ಟೆ ಪ್ರಕಾಶ್ ಸೇರಿದಂತೆ ಗ್ರಾ.ಪಂ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮದ ನೂರಾರು ಜನರಿದ್ದರು.

About The Author

Leave a Reply

Your email address will not be published. Required fields are marked *