May 2, 2024

Chitradurga hoysala

Kannada news portal

ಶ್ರದ್ದಾಭಕ್ತಿ ಶಾಂತಿ ಸೌಹಾರ್ದತೆಯಿಂದ ಪವಿತ್ರ ರಂಜಾನ್, ಯುಗಾದಿ ಹಬ್ಬ ಆಚರಿಸಿ : ಠಾಣಾಧಿಕಾರಿ ಕೆ.ಕುಮಾರ್

1 min read

 

ಶ್ರದ್ದಾಭಕ್ತಿ ಶಾಂತಿ ಸೌಹಾರ್ದತೆಯಿಂದ ಪವಿತ್ರ ರಂಜಾನ್, ಯುಗಾದಿ ಹಬ್ಬ ಆಚರಿಸಿ : ಠಾಣಾಧಿಕಾರಿ ಕೆ.ಕುಮಾರ್

ಚಿತ್ರದುರ್ಗ ಹೊಯ್ಸಳ:

ಚಳ್ಳಕೆರೆ:

ಪ್ರತಿ ವರ್ಷದಂತೆ ಈ ವರ್ಷವೂ ಯುಗಾದಿ ಮತ್ತು ರಂಜಾನ್ ಹಬ್ಬವು ಏಕ ಕಾಲಕ್ಕೆ ಬಂದಿರುವುದರಿಂದ ಎಲ್ಲಾ ಹಿಂದು ಮತ್ತು ಮುಸ್ಲಿಂ ಭಾಂಧವರು,ಪವಿತ್ರ ರಂಜಾನ್ ಹಾಗೂ ಯುಗಾದಿ ಹಬ್ಬವನ್ನು ಶ್ರದ್ಧಾ ಭಕ್ತಿ ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕೆಂದು ಶಾಂತಿ ಸಭೆಯಲ್ಲಿ ಠಾಣಾಧಿಕಾರಿ ಕೆ.ಕುಮಾರ್ ಹೇಳಿದರು.

ನಗರದ ಪೋಲಿಸ್ ಠಾಣೆಯಲ್ಲಿ ಹಿಂದು-ಮುಸ್ಲಿಂ ಧರ್ಮದ ಜನಾಂಗದವರೂಂದಿಗೆ, ಪವಿತ್ರ ರಂಜಾನ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಚಳ್ಳಕೆರೆಯ ಬಳ್ಳಾರಿ ರಸ್ತೆಯಲ್ಲಿರುವ ಜಾಮಿಯಾ ಮಸೀದಿಗೆ ಬಂದು ಸೇರಿ ಬೆಂಗಳೂರು ರಸ್ತೆಯಲ್ಲಿರುವ ಈದ್ದಾ ಮೈದಾನಕ್ಕೆ ಮೆರವಣಿಗೆ ಮುಖಾಂತರ ಹೋಗುವಾಗ ಯಾವುದೇ ಅಡಚಣೆ ಉಂಟಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಸುಗಮಗೊಳಿಸಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಅತ್ಯುತ್ತಮ ಸಹಕಾರ ನೀಡುತ್ತಾ ಬಂದಿದ್ದು ಬರುವ ರಂಜಾನ್ ಹಾಗೂ ಚಂದ್ರಮಾನ ಯುಗಾದಿ. ಹಬ್ಬವನ್ನು ಅದೇ ರೀತಿಯಲ್ಲಿ ಶಾಂತಿಯುತವಾಗಿ ಆಚರಿಸಬೇಕು.ಅದಕ್ಕೆ ಬೇಕಾದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಸಲಹೆ ನೀಡಿದರು.

ಡಿವೈಎಸ್ಪಿ ಟಿ.ಬಿ.ರಾಜಣ್ಣ ಮಾತಾನಾಡಿ ಬೆಂಗಳೂರು ರಸ್ತೆಯ ಈದ್ದಾ ಮೈದಾನವರೆಗೆ ಒಂದು ಭಾಗದ ಕಡೆಯ ರಸ್ತೆಯನ್ನು ಬಿಡುವು ಮಾಡಿಕೊಂಡು ಸಂಚಾರಿಸಿ ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂಧವರು ಅವರವರ ಹಬ್ಬಗಳನ್ನು ಶಾಂತಿ ರೀತಿಯಿಂದ ಆಚರಿಸಿಕೊಳ್ಳಲು ಎಲ್ಲರೂ ಸಹಕರಿಸಬೇಕು. ಹಬ್ಬದ ದಿನಗಳಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಜೂಜಾಟಗಳು ನಡೆಯದಂತೆ ಪಟ್ಟಣದಲ್ಲಿ ಮತ್ತು ಹೊರವಲಯಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಅಲ್ಲದೇ ಈ ವಿಚಾರದಲ್ಲಿ ಮಾಹಿತಿ ತೆಗೆದು ಕ್ರಮ ಕೈಗೊಂಡಲ್ಲಿ ಅದಕ್ಕೆ ತಮ್ಮ ಸಹಕಾರ ನೀಡಬೇಕು. ಎಂದು ಹಾಜರಿದ್ದ ಎಲ್ಲಾ ಕೋಮಿನವರ ಜನಾಂಗದವರಿಗೆ ತಿಳಿಸಿದರು .

ಈ ಸಂದರ್ಭದಲ್ಲಿ ಹಿಂದೂ,ಮುಸ್ಲಿಂ ಸಮುದಾಯದ ಮುಖಂಡರು. ವಿವಿಧ ಸಂಘಟನೆಯ ಮುಖಂಡರು. ಪಿಎಸ್ ಐ ಗಳಾದ ಸತೀಶ್ ನಾಯ್ಕ.ಶಿವರಾಜ್. ಧರೆಪ್ಪ ಇತರರಿದ್ದರು.

About The Author

Leave a Reply

Your email address will not be published. Required fields are marked *