Recent Posts

October 16, 2021

Chitradurga hoysala

Kannada news portal

ನಾಳೆ ಏಕತಾ ಹಿಂದೂ ಮಾಹಗಣಪತಿ ವಿಸರ್ಜನೆ.

1 min read

*ನಾಳೆ ಏಕತಾ  ಹಿಂದೂ ಮಾಹಗಣಪತಿ ವಿಸರ್ಜನೆ.*

ಚಿತ್ರದುರ್ಗ:                                                      ರಾಜ್ಯ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಜಿಲ್ಲಾಡಳಿತದ ಸೂಚನೆಯಂತೆ ಏಕತಾ ಹಿಂದೂ ಮಹಾಗಣಪತಿ ಯನ್ನು ಸೆ.16 ರ ಗುರುವಾರ ವಿಸರ್ಜನೆ ಮಾಡಲಾಗುವುದು ಎಂದು ಏಕತಾ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಗರುಡಕೇಸರಿ ಕುಮಾರ್ ಹೇಳಿದರು.

ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಡಿ.ಎಸ್.ಸುರೇಶ್ ಬಾಬು ಅವರ ನೇತೃತ್ವದಲ್ಲಿ ಸ್ಥಾಪನೆ ಮಾಡಿರುವ ಏಕತಾ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಏರ್ಪಡಿಸಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ಗಣಪತಿ ಮಹೋತ್ಸವ ಎಂದರೆ ನಮಗದೆ ಹಬ್ಬ ಆದರೆ ಕೊರೋನಾ ಸಂದರ್ಭದಲ್ಲಿ ನಾವು ಎಚ್ಚರಿಕೆಯಿಂದ ಇರಬೇಕಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಹೇಳಿದಂತೆ ನಾವು ಪಾಲಿಸಿಕೊಂಡು ವಿಸರ್ಜನೆ ಮಾಡುತ್ತೇವೆ ಎಂದರು.

ಏಕತಾ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಉಪಾಧ್ಯಕ್ಷ ಎಸ್.ಟಿ. ನವೀನ್ ಕುಮಾರ್ ಮಾತನಾಡಿ, ಏಕತಾ ಹಿಂದೂ ಮಹಾಗಣಪತಿ ಶಿವತಾಂಡವ ನೃತ್ಯ ಮಾಡುತ್ತಿರುವ ಮೂರ್ತಿಯಾಗಿದ್ದು ಅತ್ಯಂತ ಮನಮೋಹಕವಾಗಿದೆ ಜನಾಕರ್ಷಣೆಯಾಗಿದೆ. ದುರ್ಗದ ಜನರು ಮೆರವಣಿಗೆ ವೇಳೆ ದರ್ಶನ ಪಡೆಯಬೇಕು ಎಂದರು.

ಆರಂಭದಿಂದಲೂ ನಮ್ಮ ಪ್ರತಿಷ್ಠಾಪನಾ ಸ್ಥಳದಲ್ಲಿ
ವಾಕ್ಸಿನೇಷನ್ ಮಾಡಿದ್ದು ನಮ್ಮ ಹೆಮ್ಮೆ. ಇಲಾಖೆಯ ಸಹಕಾರದಿಂದ ಇಲ್ಲಿವವರೆಗೂ ಸಾವಿರಕ್ಕೂ ಹೆಚ್ಚು ಲಸಿಕೆ ಹಾಕಿಸಲಾಗಿದೆ. ವಿಸರ್ಜನೆ ವೇಳೆ ವಿವಿಧ ಮಠಾಧೀಶರು ಮತ್ತುಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಮೆರವಣಿಗೆ ಮಾರ್ಗ: ಜೋಗಿಮಟ್ಟಿ ರಸ್ತೆಯಲ್ಲಿ ಹೊರಟ ಏಕತಾ ಹಿಂದೂ ಮಹಾಗಣಪತಿ ಸ್ಟೇಡಿಯಂ ತಲುಪಿ ನಂತರ ಅಪ್ಪಾಜಿ ಪರಿಸರ ಬಿಲ್ಡಿಂಗ್ ಪಕ್ಕದ ಮೂಲಕ ಯೋಧ ಚೈತನ್ಯ ವೃತ್ತದ ತಲುಪುವುದು. ನಂತರ ಜಿಲ್ಲಾಸ್ಪತ್ರೆ ಮುಂಭಾಗದಿಂದ ಮದಕರಿ ನಾಯಕ ವೃತ್ತ, ನಗರಸಭೆ ಮುಂಭಾಗದ ಅಂಬೇಡ್ಕರ್ ವೃತ್ತ, ಪ್ರವಾಸಿ ಮಂದಿರ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ,ಮಹಾತ್ಮ ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿ ಅದೇ ರೀತಿ ಕನಕ ವೃತ್ತದ ಮೂಲಕ ಸಂಚರಿಸಿ ಚಂದ್ರವಳ್ಳಿಯಲ್ಲಿ ವಿಸರ್ಜನೆ ಮಾಡಲಾಗುವುದು‌.

ಸುದ್ದಿಗೋಷ್ಟಿಯಲ್ಲಿ ಏಕತಾ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಖಜಾಂಚಿ ಸಂತೋಷ್, ಸಮಿತಿ ಉಸ್ತುವಾರಿ ಸಂಚಾಲಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಸಮಿತಿ ಕಾರ್ಯದರ್ಶಿ ಮಂಜುನಾಥ್, ಮುಖಂಡರಾದ ಪೃಥ್ವಿರಾಜ್, ಚಂದನ್ ಪಾಟೀಲ್, ಸಾಯಿ ಇತರರು ಹಾಜರಿದ್ದರು.

More Stories

Leave a Reply

Your email address will not be published. Required fields are marked *

You may have missed