April 26, 2024

Chitradurga hoysala

Kannada news portal

ಆಸ್ಕರ್ ಅಣ್ಣನಿಗೆ ಅಶೃತರ್ಪಣ : ಹೆಚ್.ಆಂಜನೇಯ ಮಾಜಿ ಸಚಿವರು

1 min read

ಆಸ್ಕರ್ ಅಣ್ಣನಿಗೆ ಅಶೃತರ್ಪಣ

ಪಕ್ಷ ಸಂಘಟನೆಯಲ್ಲಿ ನಿಷ್ಠೆಯಿಂದ ತೊಡಗಿಕೊಂಡವರನ್ನು ಗುರುತಿಸಲು ಗರುಡ ದೃಷ್ಟಿ ಇರಬೇಕು. ಅಂತಹವರು ಮಾತ್ರ ನಾಯಕರಾಗಲು ಸಾಧ್ಯ ಎಂಬ ನಾಣ್ಣುಡಿಗೆ ಅಸ್ಕರ್ ಅಣ್ಣನವರು
ಉತ್ತಮ ಉದಾಹರಣೆ ಆಗಿದ್ದರು.

ದೇಶದ ಯಾವುದೋ ಮೂಲೆಯಲ್ಲಿರುವ ನಿಷ್ಠಾವಂತ ಕಾರ್ಯಕರ್ತರನ್ನು ಗರುಡನ ದೃಷ್ಟಿ ರೀತಿ ಗುರುತಿಸಿ ಅವರಿಗೆ ಸ್ಥಾನಮಾನ ಕೊಡಿಸುತ್ತಿದ್ದ ಆಸ್ಕರ್ ಅಣ್ಣ ಇನ್ನಿಲ್ಲ ಎಂಬುದು ಬಹಳ ದುಃಖಕರ ವಿಷಯ.

ಕೆಪಿಸಿಸಿ ಅಧ್ಯಕ್ಷರಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಅವರನ್ನು ಉನ್ನತ ಪದವಿಗಳು ಹುಡುಕಿಕೊಂಡು ಬರುತ್ತಿದ್ದವು. ಕೇಂದ್ರ ಸಚಿವರಾಗಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಅವರ ಸೇವೆ ಸ್ಮರಣೀಯ.

ಇಂದಿರಾಗಾಂಧಿ ಅವರೊಂದಿಗೆ ಒಡನಾಟ ಹೊಂದಿದ್ದ ಅವರು, ಪಕ್ಷ ನಿಷ್ಠೆಗೆ ಮತ್ತೊಂದು ಹೆಸರು ಆಸ್ಕರ್ ಫರ್ನಾಂಡೀಸ್ ಎಂಬಂತೆ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶ್ರಮಿಸಿದರು.

ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ರಾಜೀವ್ ಗಾಂಧಿ ಬಳಿ ಕರೆದುಕೊಂಡು ಹೋಗಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದರು. ನಿಷ್ಠಾವಂತರಿಗೆ ಪಕ್ಷದಲ್ಲಿ
ಸ್ಥಾನಮಾನ ಕೊಟ್ಟು ಅವರಿಂದ ಪಕ್ಷ ಬಲಿಷ್ಠಗೊಳಿಸುವ ಕಾರ್ಯ ಮಾಡಿಸಬೇಕು ಎಂದು ಹೇಳಿ,ಅದರಂತೆ ನನ್ನಿಂದ ಮಾಡಿಸಿದರು
ನನ್ನ ರಾಜಕೀಯ ಶ್ರೇಯೋಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ. ಈ ಕಾರಣಕ್ಕೆ ಅವರು ನನ್ನಂತ ಸಾವಿರಾರು ಮಂದಿಗೆ ರಾಜಕೀಯ ಗುರುಗಳಾಗಿದ್ದರು. ನನ್ನನ್ನಷ್ಟೇ ಅಲ್ಲದೇ ದೇಶದಲ್ಲಿ ಲಕ್ಷಾಂತರ ಕೆಳಹಂತದ ಕಾರ್ಯಕರ್ತರನ್ನು ಹುಡುಕಿ
ಅವರಿಗೆ ಸ್ಥಾನಮಾನ ಕೊಡಿಸಿದ ಹೆಗ್ಗಳಿಕೆ ಅವರದ್ದಾಗಿದೆ.

ಸಾಮಾನ್ಯ ಕಾರ್ಯಕರ್ತರಿಗೆ ಲೋಕಸಭೆ, ವಿಧಾನಸಭೆ ಟಿಕೆಟ್ ಕೊಡಿಸಿ ಹುಬ್ಬೇರಿಸುವಂತೆ ಮಾಡಿದ್ದು ಮಾದರಿ ಕಾರ್ಯ ಆಗಿತ್ತು.ಪಕ್ಷದಲ್ಲಿ ಸ್ಥಾನಮಾನ, ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಮುಖ ಹುದ್ದೆಗಳು ಸಾಮಾನ್ಯ ಕಾರ್ಯಕರ್ತರಿಗೆ ಲಭಿಸುವಂತೆ ಬಹಳಷ್ಟು ಶ್ರಮಿಸುತ್ತಿದ್ದರು.

ಕೊನೆ ಸಾಲಿನಲ್ಲಿ ಕುಳಿತ ನಿಷ್ಠಾವಂತರನ್ನು ಗುರುತಿಸಿ ಅವರನ್ನು ಮೊದಲ ಸಾಲಿನ ನಾಯಕರಾಗಿ ರೂಪಿಸುವ ಅವರ ಹೃದಯ ವೈಲ್ಯತೆ ನಿಜಕ್ಕೂ ನಮ್ಮೆಲ್ಲರಿಗೂ ಮಾದರಿ ಆಗಿದೆ.ಎಷ್ಟೇ ಉನ್ನತ ಸ್ಥಾನಕ್ಕೆ ಅವರು ಹೋಗಿದ್ದರೂ ಸಾಮಾನ್ಯರಂತೆ ಎಲ್ಲರೊಂದಿಗೆ
ಬೆರೆಯುತ್ತಿದ್ದರು.

ನಮ್ಮಂತಹವರ ಅವರನ್ನು ನಮ್ಮ ಕುಟುಂಬದ ಹಿರಿಯ ಅಣ್ಣನಂತೆ ನಮ್ಮ ಬೆಳವಣಿಗೆಗೆ ಶ್ರಮಿಸುತ್ತಿದ್ದರು. ಅವರನ್ನು ಕಳೆದುಕೊಂಡ ಪಕ್ಷ, ನಾಡು, ನನ್ನಂತ ಕಾರ್ಯಕರ್ತರು, ಅಭಿಮಾನಿಗಳು, ಅದರಲ್ಲೂ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ. ಅವರ ಆತ್ಮಕ್ಕೆ ಶಾಂತಿ
ದೊರೆಯಲಿ.ಹೆಚ್.ಆಂಜನೇಯ ಮಾಜಿ ಸಚಿವರು.

About The Author

Leave a Reply

Your email address will not be published. Required fields are marked *