April 29, 2024

Chitradurga hoysala

Kannada news portal

ಕೋವಿಡ್ ಲಸಿಕಾ ಮಹಾಮೇಳ ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮತ್ತು ತಂಡ ಬೇಟಿ, ಕೋವಿಡ್ ಲಸಿಕೆ ಪ್ರಗತಿ ಪರಿಶೀಲನೆ

1 min read

ಕೋವಿಡ್ ಲಸಿಕಾ ಮಹಾಮೇಳ

ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮತ್ತು ತಂಡ ಬೇಟಿ, ಕೋವಿಡ್ ಲಸಿಕೆ ಪ್ರಗತಿ ಪರಿಶೀಲನೆ

ಚಿತ್ರದುರ್ಗ:

ತಾಲ್ಲೂಕಿನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಲ್ಲೇನಹಳ್ಳಿ , ಗ್ರಾಮಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮತ್ತು ತಂಡ ಶುಕ್ರವಾರ ಬೇಟಿ ನೀಡಿ ಕೋವಿಡ್ ಲಸಿಕೆ ಪ್ರಗತಿ ಪರಿಶೀಲಿಸಿ ಗ್ರಾಮ ನಿಗಾವಣಾ ತಂಡದೊಂದಿಗೆ ಚರ್ಚಿಸಿ, ಹಿಂಜರಿಕೆಯ ಮನೆ ಮನೆಗಳ ಭೇಟಿ ಮಾಡಿ ಅಂತರ್ ವೈಯ್ಯಕ್ತಿಕ ಸಮಾಲೋಚನೆ ನಡೆಸಿ ದೇಶದಲ್ಲಿ ಈಗ 100 ಕೋಟಿ ಜನರು ಲಸಿಕೆ ಪಡೆದಿದ್ದಾರೆ ಇದು ಹೆಮ್ಮೆಯ ವಿಷಯ, ಅಲ್ಲದೇ ಲಸಿಕೆ ಪಡೆಯುವುದು ನಿಮ್ಮ ವೈಯ್ಯಕ್ತಿಕ ಸುರಕ್ಷೆಗಾಗಿ ಲಸಿಕೆ ಬಗ್ಗೆ ಯಾವುದೇ ತಪ್ಪು ಗ್ರಹಿಕೆ ಇದ್ದರೆ ವಿಚಾರ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸುತ್ತೇವೆ ತಾವು ಲಸಿಕೆ ಪಡೆದುಕೊಳ್ಳಿ ಈವರೆವಿಗೂ ಪಡೆಯದವರನ್ನು ಕರೆ ತನ್ನಿ ಕಲ್ಲೇನಹಳ್ಳಿ ಗ್ರಾಮದಲ್ಲಿ ಅತಿ ಕಡಿಮೆ 470 ಜನರ ಗುರಿ ಇದೆ ಈಗಾಗಲೇ 256 ಜನರು ಲಸಿಕೆ ಪಡೆದಿದ್ದೀರ ಬಾಕಿ ಉಳಿದ 214 ಜನರಿಗೆ ಲಸಿಕೆ ಹಾಕಿಸಿ ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ ಈ ದಿನ ಸಂಜೆಯ ತನಕ ಲಸಿಕಾ ಸತ್ರ ಕೆಲಸ ನಿರ್ವಹಿಸುತ್ತದೆ ಹೊಲ ಗದ್ದೆಗಳಿಗೆ ಹೋಗಿದ್ದರೆ ಅವರು ಬರುವ ವರೆಗೂ ಕಾಯುತ್ತಾರೆ, ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು ಯಾವುದೇ ಅಂಜಿಕೆ ಇಲ್ಲದೇ ಪಡೆಯಬಹುದಾಗಿದೆ. ಪಡೆದವರು ಮಾಸ್ಕ್ ಧರಿಸುವುದು ಕೈಗಳನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು ಸಾಮಾಜಿಕ ಅಂತರ ಕಾಪಾಡುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಳಿತ ವೈದ್ಯಾಧಿಕಾರಿಗಳಾದ ಡಾ. ನಳಿನಾಕ್ಷಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯರ್ರಿಸ್ವಾಮಿ, ತಾಲ್ಲೂಕು ಕೋವಿಡ್ ಲಸಿಕಾ ಮೇಲ್ವಿಚಾರಕರಾದ ಗಂಗಾಧರ್, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ಡಿ, ಗ್ರಾಮ ಪಂಚಾಯತಿ ಸದಸ್ಯರಾದ ರಾಘವೇಂದ್ರ, ಸಮುದಾಯ ಅರೋಗ್ಯ ಅಧಿಕಾರಿ ಮಂಜುಶ್ರೀ, ಅರೋಗ್ಯ ಸುರಕ್ಷತಾ ಅಧಿಕಾರಿ ನಿರ್ಮಲಾ, ಸ. ಹಿ.ಪ್ರಾ. ಶಾಲೆಯ ಶಿಕ್ಷಕರಾದ ಕೃಷ್ಣಪ್ಪ, ಅಶಾ ಕಾರ್ಯಕರ್ತೆಯರಾದ ಮಹದೇವಿ, ಜಮುನಾ, ಸವಿತಾ, ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *