April 29, 2024

Chitradurga hoysala

Kannada news portal

ಆದಿಜಾಂಬವ ಬೃಹನ್ಮಠದ ಶ್ರೀ ಮಾರ್ಕಾಂಡೇಯ ಮುನಿ ಸ್ವಾಮೀಜಿ ವಿಧಿವಶ. ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ, ವಿವಿಧ ಮಠಧೀಶರು ಹಾಗು ಗಣ್ಯರು ಸಂತಾಪ

1 min read


ಆದಿಜಾಂಬವ ಬೃಹನ್ಮಠದ ಶ್ರೀ ಮಾರ್ಕಾಂಡೇಯ ಮುನಿ ಸ್ವಾಮೀಜಿ ವಿಧಿವಶ

ಹಿರಿಯೂರು:
ಆದಿಜಾಂಬವ ಮಹಾಸಂಸ್ಥಾನ ಮಠದ ಹಿರಿಯ ಸ್ವಾಮೀಜಿ ಶ್ರೀಮಾರ್ಕಾಂಡೇಯಮುನಿ ಸ್ವಾಮೀಜಿ ಗುರುವಾರ ಸಂಜೆ ನಿಧನರಾಗಿದ್ದಾರೆ. ಆದಿಜಾಂಬವ ಮಹಾಸಂಸ್ಥಾನದ ಮೂಲ ಮಠವು ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿದೆ. ಅವದೂತ ಪರಂಪರೆಯ ಈ ಮಠಕ್ಕೆ ಅನೇಕ ಶ್ರೀಗಳು ಮಠಾಧೀಶರಾಗಿ ಹೋಗಿದ್ದಾರೆ.ಪ್ರಸ್ತುತ ಕೋಡಿಹಳ್ಳಿಯ ಪೀಠಾಧಿಪತಿಗಳಾಗಿ ಶ್ರೀ ಮಾರ್ಕಾಂಡೇಯಮುನಿ ಸ್ವಾಮೀಜಿ ಮಠವನ್ನು ಮುನ್ನೆಡಿಸುತ್ತಿದ್ದರು. ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದ ಶ್ರೀಗಳು ಮಠದಲ್ಲಿ ವಿಶ್ರಾಂತಿ ಪಡೆಯತ್ತಿದ್ದರು. ಗುರುವಾರ ಸಂಜೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಶ್ರೀಗಳನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು ಆದರೆ ಚಿಕಿತ್ಸೆ ಫಲಿಸದೆ ಮಾರ್ಕಾಂಡೇಯಮುನಿ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ.
ಶ್ರೀಗಳಿಗೆ ಸುಮಾರು ೭೧ ವರ್ಷ ವಯಸ್ಸಾಗಿತ್ತು. ಕೋಡಿಹಳ್ಳಿ ಗ್ರಾಮ ಮತ್ತು ಸುತ್ತಲಿನ ಬಡಜನರ ಅನುಕೂಲಕ್ಕಾಗಿ ಪ್ರತಿವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ಗ್ರಾಮದಲ್ಲಿ ನಡೆಯುತ್ತಿದ್ದ ರೇಣುಕಾದೇವಿ ಜಾತ್ರೆಯಲ್ಲಿ ಅನ್ನಸಂತರ್ಪಣೆ ಏರ್ಪಡಿಸುತ್ತಿದ್ದರು. ನೇರ, ನಡೆ-ನುಡಿಗೆ ಹೆಸರಾಗಿದ್ದರು. ಅತ್ಯಂತ ಪ್ರಖರ ಭಾಷಣಗಳಿಂದ ದಲಿತ ಸಮುದಾಯದ ಅಭಿವೃದ್ದಿಗೆ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದರು. ಕಳೆದ ವರ್ಷದ ಹಿಂದೆ ಹೃದಯದ ತೊಂದರೆಗೆ ಒಳಗಾಗಿದ್ದರು ಶ್ರೀಗಳಿಗೆ ಸ್ಟಂಟ್ ಸಹ ಅಳವಡಿಕೆ ಮಾಡಲಾಗಿತ್ತು. ಶ್ರೀಗಳ ನಿಧನಕ್ಕೆ ಆದಿಚುಂಚನಗಿರಿ ಶ್ರೀ ನಿರ್ಮಲನಂದನಾಥ ಶ್ರೀಗಳು, ಡಾ. ಶಿವಮೂರ್ತಿ ಮುರುಘಶರಣರು, ಶ್ರೀ ಶಿವಲಿಂಗಾನಂದ ಶ್ರೀಗಳು , ಬಸವಮೂರ್ತಿ ಶ್ರೀ ಮಾದಾರಚನ್ನಯ್ಯ ಸ್ವಾಮೀಜಿ,ಷಡಕ್ಷರಮುನಿ ಶ್ರೀಗಳು, ನಿರಂಜನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಹರಳಯ್ಯ ಸ್ವಾಮೀಜಿ,ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ,ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ಡಾ.ಬಸವಕುಮಾರ ಸ್ವಾಮೀಜಿ,ಬಸವ ಕೇತೇಶ್ವರಸ್ವಾಮೀಜಿ, ಸಮಾಜದ ನಾಯಕರು,ಮತ್ತು ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ,ಸಮಾಜಕಲ್ಯಾಣ ಇಲಾಖೆಯ ಮಾಜಿ ಸಚಿವರಾದ ಹೆಚ್ ಆಂಜನೇಯ,ಹಿರಿಯೂರು ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಮತ್ತು ಯಾದವ ಮುಖಂಡ ಡಿಟಿ ಶ್ರೀನಿವಾಸ್ , ಮಾಜಿ ಸಂಸದರಾದ ಕೆ ಹೆಚ್ ಮುನಿಯಪ್ಪ, ಚಂದ್ರಪ್ಪ ,ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್,ಡಿ ಸುಧಾಕರ್ , ಗೋವಿಂದಪ್ಪ, ಉಮಾಪತಿ, ಜಿಪಂ ಮಾಜಿ ಅಧ್ಯಕ್ಷ ಸೌಭಾಗ್ಯ ಬಸವರಾಜನ್ ಬಿ.ಎಸ್.ಪುರೂಷತ್ತಮ್ಮ ನಿವೃತ್ತ ಕೆ.ಎ.ಎಸ್.ಆಧಿಕಾರಿ, ನಿಂಗಪ್ಪ ನಿವೃತ್ತ ಕೆ.ಇ.ಬಿ.ಆಧಿಕಾರಿ, ವಿಜಯಕುಮಾರ್ ತೂಡರನಾಳ್ ಸಾಹಿತಿ ಸೇರಿದಂತೆ ಮತ್ತಿತರರು ಅತೀವ ಶೋಕ ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *