April 29, 2024

Chitradurga hoysala

Kannada news portal

ಕನ್ನಡ ನಾಡು,ನುಡಿಗೆ ದುಡಿಯುವ ಚನ್ನೆಗೌಡರನ್ನು ಗೆಲ್ಲಿಸಲು ಮನವಿ ಮಾಡಿದ ದಾವಣಗೆರೆ ಚಿದಾನಂದ್

1 min read


ಕನ್ನಡ ನಾಡು,ನುಡಿಗೆ ದುಡಿಯುವ ಚನ್ನೆಗೌಡರನ್ನು ಗೆಲ್ಲಿಸಲು ಮನವಿ ಮಾಡಿದ ದಾವಣಗೆರೆ ಚಿದಾನಂದ್

ದಾವಣಗೆರೆ :

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ದಿನಾಂಕ ೨೧.೧೧.೨೦೨೧ ರಂದು ನಡೆಯುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವ.ಚ. ಚನ್ನೆಗೌಡರನ್ನು ಗೆಲ್ಲಿಸಬೇಕೆಂದು ದಾವಣಗೆರೆ ಚಿದಾನಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವ.ಚ.ಚನ್ನೆಗೌಡ್ರು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು ಸುಮಾರು ಮೂವತೈದು ವರ್ಷಗಳಿಂದ ಕನ್ನಡ ನೆಲ,ಜಲ, ಭಾಷೆಗಾಗಿ ಮತ್ತು ಕಾವೇರಿ ಚಳುವಳಿಯಿಂದ ಇಂದಿನವರೆಗೂ ಎಲ್ಲಾ ತರಹದ ಕನ್ನಡ ಪರ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ.ಹಾಗೂ ಬೆಂಗಳೂರು ಮತ್ತು ಸುತ್ತಮುತ್ತಲಿನ ಹಲವು ಜಿಲ್ಲೆಗಳಲ್ಲಿ ಚಿರಪರಿಚಿತರಾಗಿದ್ದು, ಸಾಹಿತ್ಯ ರಂಗದಲ್ಲಿ ಬಹಳ ಆಸಕ್ತಿ ಹೊಂದಿದ್ದು,ಇವರು ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 1988 ರಲ್ಲಿ ಕನ್ನಡ ಕ್ರಿಯ ಸಮಿತಿ ರಚಿಸಿ ಇಪತ್ತು ಸಾವಿರ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ನೋಂದಣಿ ಮಾಡಿಸಿದ್ದಾರೆ,ಅಲ್ಲದೆ ಹಿಂದಿನ ಸಾಹಿತ್ಯ ಪರಿಷತ್ತಿನ ಹಲವರು ಅಧ್ಯಕ್ಷರನ್ನು ಗೆಲ್ಲಿಸಿದ ಕೀರ್ತಿ ಇವರಿಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕನ್ನಡ ಜಾರಿಗೆ ತರುವಲ್ಲಿ ಕಾರಣ ಕರ್ತರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅವರಿಗೆ ಇರುವ ಕಾಳಜಿ ಅಪಾರವಾಗಿದ್ದು, ಇವರು ಈ ಎಲ್ಲ ಕಾರ್ಯಗಳನ್ನು ಪ್ರತಿಫಲಾಫೇಕ್ಷೆ ಇಲ್ಲದೆ ಮಾಡಿರುತ್ತಾರೆ. ಈ ರೀತಿಯಲ್ಲಿ ಕನ್ನಡಕ್ಕಾಗಿ ದುಡಿಯುವವರು ಮನಸ್ಸಿರುವವರಲ್ಲಿ ಚನ್ನೆಗೌಡರು ಮೊದಲಿಗರು. 2007ರಲ್ಲಿ ಬ್ಯಾಂಕ್ ನಲ್ಲಿ ಠೇವಣೆ ಇರಿಸುವ ಮೂಲಕ ಅದರಿಂದ ಬರುವ ಬಡ್ಡಿ ಹಣದಿಂದ ಏಳು ಲಕ್ಷ ದ ಒಂದು ರೂಪಾಯಿ ಮೊತ್ತದ ಹಣವನ್ನು ನುರಿತ ಹಿರಿಯ ಸಾಹಿತಿಗಳಿಗೆ ನೀಡುವ ನೃಪತುಂಗ ಪ್ರಶಸ್ತಿಗೆ ಬಳಸಿಕೊಳ್ಳಲು ಅನುವು ಮಾಡಿದ್ದು ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತದೆ. ಜೊತೆಗೆ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿ ಅಲ್ಲಿ ಬಂದ 7 ಲಕ್ಷ ದ 20 ಸಾವಿರ ಸಂಬಳವನ್ನು ಪಡೆಯದೆ ಆ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿ ಹಣದಿಂದ ಹತ್ತು ಯುವ ಸಾಹಿತಿಗಳಿಗೆ, ರಂಗ ಕಲಾವಿದರಿಗೆ , ಹತ್ತು ಸಾವಿರ ರೂಗಳ ಪ್ರಶಸ್ತಿಯನ್ನು ನೀಡಲು ಸಹಾಯ ಮಾಡಿದ್ದಾರೆ,ಅವರ ಮುಂದಿನ ಯೋಜನೆಗಳು, ಸಾಧನೆ, ಸಾಕಷ್ಟಿವೆ ಅವರ ಮುಂದಾಲೋಚನೆಯಲ್ಲಿ ಸಾಹಿತ್ಯ ಪರಿಷತ್ ನಲ್ಲಿ ನಿಘಂಟ ವಿಭಾಗ, ಸಾಹಿತ್ಯ ಬೆಳವಣಿಗೆ, ಕನ್ನಡ ಶಾಲೆಗಳ ಉಳುವಿಗಾಗಿ ಸಬಲಿಕರಣ ಸಮಿತಿ , ಅನುಷ್ಠಾನ ಮತ್ತು ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣ, ಕನ್ನಡ ಸಾಹಿತ್ಯವನ್ನು ಇತರೆ ಭಾಷೆಗಳಿಗೆ ಅನುವಾದ ಹಾಗು ಹೊಸ ಸಾಹಿತಿಗಳನ್ನು ಬೆಳೆಸುವುದು, ನಿರುದ್ಯೋಗಿ ಕನ್ನಡದ ಯುವಕ ಯುವತಿಯರಿಗೆ ತರಬೇತಿ,ಎಲ್ಲಾ ಪ್ರಕ್ರಿಯಗಳನ್ನು ಆನ್ ಲೈನ್ ಲ್ಲಿ ನಡೆಯುವಂತೆ ಡಿಜಿಟಲಿಕರಣ ಮಾಡುವುದು,ಇನ್ನು ಮುಂತಾದ ಹೊಸ ಯೋಜನೆಗಳು ಅವರಲ್ಲಿವೆ. ಈಗಾಗಲೆ ರಾಜ್ಯಾದ್ಯಂತ ದಿನನಿತ್ಯ ಪ್ರವಾಸ ಮಾಡಿ ದೂರವಾಣಿ, ಸಾಮಾಜಿಕ ಮಾಧ್ಯಮ ಬಳಸಿಕೊಂಡು ಮತದಾರರನ್ನು ತಲುಪಿದ್ದಾರೆ .ಇವರ ಆದರ್ಶ ವ್ಯಕ್ತಿತ್ವ ಮತ್ತು ಅವರ ನಿಲುವು,ಆಲೋಚನೆಗಳು,ನಿರ್ಧಾರಗಳು ತೀರ್ಪುಗಳು,ಕನ್ನಡ ಪರವಾಗಿ ಇದ್ದು ಇವರ ಸೇವೆ ಕನ್ನಡ ನಾಡಿಗೆ ಅಗತ್ಯವಾಗಿರುತ್ತದೆ. ಸ್ವಾಭಿಮಾನಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳು ಮಾತದಾನ ಮಾಡುವುದರ ಮೂಲಕ ಅತಿ ಹೆಚ್ಚಿನ ಬಹುಮತ ಮತದಿಂದ ಗೆಲ್ಲಿಸಬೇಕೆಂದು ದಾವಣಗೆರೆ ಚಿದಾನಂದ್ ಪ್ರಾರ್ಥಿಸಿದ್ದಾರೆ.

About The Author

Leave a Reply

Your email address will not be published. Required fields are marked *