May 6, 2024

Chitradurga hoysala

Kannada news portal

ರಾಜಸ್ಥಾನದ ಪಾಲಿ ಜಿಲ್ಲೆಯ ಇಂದಿರಾನಗರದಲ್ಲಿ ಮಂಗಳವಾರ ಶ್ರೀ ಹಂಸರಾಮ್ ಜೀ ಓಡ್ ಅವರ ಅಮೃತ ಶಿಲೆಯ ಕಲಾಕೃತಿ ಲೋಕಾರ್ಪಣೆ: ಭೋವಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ .

1 min read



ಶಿಕ್ಷಣಕ್ಕೆ ಬದುಕು ಬದಲಾವಣೆ ಮಾಡುವ ಶಕ್ತಿಯಿದೆ ಹಾಗಾಗಿ ಹೆಚ್ಚು ಸಮಯ ಕಲಿಕೆಗೆ ನೀಡಬೇಕು: ಇಮ್ಮಡಿ ಶ್ರೀ.

ಚಿತ್ರದುರ್ಗ:
ಮಾನವ ಬದುಕಿನಲ್ಲಿಹೆಸರುಳಿಸುವಂತ ಕೆಲಸ ಮತ್ತು ಸಾಧನೆ ಮಾಡಬೇಕು ಎಂದು ಭೋವಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ರಾಜಸ್ಥಾನದ ಪಾಲಿ ಜಿಲ್ಲೆಯ ಇಂದಿರಾನಗರದಲ್ಲಿ ಮಂಗಳವಾರ ಶ್ರೀ ಹಂಸರಾಮ್ ಜೀ ಓಡ್ ಅವರ ಅಮೃತ ಶಿಲೆಯ ಕಲಾಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಜೀವನದಲ್ಲಿ ಹಿರಿಯರು ಉಳಿಸಿದ ಹೆಸರುನ್ನು ಅವರ ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಂಡು ಬೆಳೆಸಿಕೊಳ್ಳಬೇಕು. ಸಂಸ್ಕಾರವಂತ ಕುಟುಂಬಗಳಿಂದ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಬುನಾದಿಯಗುತ್ತದೆ.
ತಂದೆ ಮತ್ತು ಅಜ್ಜನ ಹೆಸರಿನ ಆಚೆ ಕುಟುಂಬ ಕಲ್ಯಾಣಕ್ಕೆ ಗುಣ ಸದ್ಗುಣಗಳು ಧಾರೆಯೆರೆದ ಸಂತತಿಯನ್ನು ನೆನೆಪಿಪನಲ್ಲಿ ಚಿರಾಸ್ಥಾಯಿಯಾಗಿ ಉಳಿಯಲು ಈ ರೀತಿ ಸ್ಮರಣ ಮಂದಿರಗಳಿಂದ ಸಾಧ್ಯ.ಕೇವಲ ಪುತ್ಥಳಿಯಾಗದೆ ವಂಶಸ್ಥರಿಗೆ ಸದ್ಗುಣಗಳು ಎಚ್ಚರಿಸುವ ಮಂದಿರಗಳಿಗಿದ್ದಾವೆ.ವೃದ್ದಾಶ್ರಮ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ, ಹಿರಿಯರ ಸ್ಮರಣಾರ್ಥ ಮಂದಿರಗಳನ್ನು ನಿರ್ಮಿಸುತ್ತಿರುವ ಮಕ್ಕಳು ಜಗತ್ತಿಗೆ ಆದರ್ಶ. ಮಗನಿಂದ ಜಗತ್ತಿನಲ್ಲಿ ಅಮರತ್ವ ಪಡೆಯುವ ತಂದೆಯರುಗಳು ಪುಣ್ಯವಂತರು.

ಶಿಕ್ಷಣಕ್ಕೆ ಬದುಕು ಬದಲಾವಣೆ ಮಾಡುವ ಶಕ್ತಿಯಿದೆ ಹಾಗಾಗಿ ಹೆಚ್ಚು ಸಮಯ ಕಲಿಕೆಗೆ ನೀಡಬೇಕು.ಓಡ್ ಸಮುದಾಯ ಇನ್ನೂ ಶಿಕ್ಷಣಕಡೆ ಗಮನ ಹರಿಸದೆ ಕೂಲಿಯಿಂದ ಜೀವನ ನಡೆಸುವ ಹಳ್ಳಿಗಳಯ ಜನತೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮುಂದಿನ ಪೀಳಿಗೆಯ ಯುವಕರ ಭವಿಷ್ಯದ ದೃಷ್ಟಿಯಿಂದ ಕಡ್ಡಾಯವಾಗಿ ವಿದ್ಯಾವಂತರಾಗಿ ಎಂದು ಒತ್ತಾಯಿಸಿದರು.
ಗುರುಗಳು ಶರೀರಿಕವಾಗಿ ಇಲ್ಲದಿದ್ದರೂ ಒಳ್ಳೆಯ ಶಿಷ್ಯ ಇದ್ದರೆ ಗುರುವಿನ ಚಿಂತನೆ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುತ್ತಾನೆ. ಅಂತಹ ಶಿಷ್ಯರು ಇದ್ದರೆ ಗುರುವಿನ ಅಸ್ತಿತ್ವದಲ್ಲಿ ಇದ್ದಂತೆ. ಹೆಸರು ಉಳಿಸಲು ಸಾಧನೆ ಮಾಡಬೇಕು.ಹೆಸರು ಬೆಳೆಸಲು ಅತ್ಯುತ್ತಮ ಸಾಧಕರ ವರ್ಗಬೇಕು.ಗುರುವಿನ ಸಾಧನೆಗಳನ್ನು ಒಂದು ಕಾಲಘಟ್ಟದಿಂದ ಮತ್ತೊಂದು ಕಾಲಘಟ್ಟಕ್ಕೆ ತಲುಪಿಸಲು ಅತ್ಯುತ್ತಮ ಉತ್ತರಾಧಿಕಾರಿಗಳ ಶಿಷ್ಯೋತ್ತಮರಿಂದ ಮಾತ್ರ ಸಾಧ್ಯ. ಹಾಗಾಗಿ ಬುದ್ಧ ಬಸವ ಅಂಬೇಡ್ಕರ್ ಪೆರಿಯಾರ್ ಅವರ ವಿಚಾರಗಳನ್ನು ಕಾಲ ಕಾಲಕ್ಕೆ ಪಸರಿಸುತ್ತ ಬಂದ ಶಿಷ್ಯರಿಂದ ಸರ್ವೋತ್ತಮರಲ್ಲಿ ಸರ್ವೋತ್ಕೃಷ್ಠರಾಗಿ ಕಾಣುತ್ತಾರೆ ಎಂದು ತಿಳಿಸಿದರು.

ಶಾಸಕ ಜೋದ ರಾಮ್ ಮಾತನಾಡಿ, ಓಡ್ ಸಮುದಾಯ ಸಂಘಟಿತವಾಗಿ ಒಗ್ಗೂಡಬೇಕು.ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಒಳ್ಳೆಯ ಕುಟುಂಬ, ಸುಸಜ್ಜಿತ ಗ್ರಾಮಗಳ ನಿರ್ಮಾಣ ಮಾಡಿಕೊಳ್ಳಿ.ಇಲ್ಲಿನ ಮಕ್ಕಳು ಅಡ್ಡದಾರಿ ಹಿಡಿಯುತ್ತಿದ್ದಾರೆ ಎಂಬ ವಿಚಾರ ತಿಳಿಯಿತ್ತು, ಅಂತಹವರು ಒಳ್ಳೆಯ ದಾರಿಯಲ್ಲಿ ನಡೆಯಬೇಕು. ಒಳ್ಳೆಯ ಜೀವನ ನಡೆಸಿರಿ ಎಂದು ಹೇಳಿದರು.

ಸಮಾರಂಭದಲ್ಲಿ OCCI ರಾಷ್ಟ್ರೀಯ ಅಧ್ಯಕ್ಷರಾದ ಡಾ. ಹೆಚ್.ರವಿ ಮಾಕಳಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲಾಲ್ ಚಂದ್,ಹರಿಯಾಣದ ಸುರೇಶ್ ಓಡ್,ಗುಜರಾತ್ ಲಾಲ್ ಚಂದ್ ದೆಹಲಿ

ದಕ್ಷಿಣ ಭಾರತದ ಅಧ್ಯಕ್ಷರಾದ ಜಯಶಂಕರ, ಕರ್ನಾಟಕ ರಾಜ್ಯಾಧ್ಯಕ್ಷರಾದ ಆನಂದಪ್ಪ ಹೆಚ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ,ರಾಜ್ಯ ಖಜಾಂಚಿಗಳಾದ ಮುನಿವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಲಯನ್ ಶ್ರೀಧರ, ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಂಜುನಾಥ.ಕೆ,BEO ಸಿ.ಎಸ್.ವೆಂಕಟೇಶಪ್ಪ, ಭೋವಿ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಹನುಮಂತಪ್ಪ. ವಿ ಚಿತ್ರದುರ್ಗ ಜಿಲ್ಲಾ ಭೋವಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಡಿ.ತಿಮ್ಮಣ್ಣ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷರಾದ ಡಿ.ಸಿ.ಮೋಹನ ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ಟಿ.ಚಂದ್ರಶೇಖರ,ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರಾದ ಆಂಜನೇಯ.ಹೆಚ್,ಎಸ್.ಜೆ.ಎಸ್ ಜ್ಞಾನಪೀಠದ ನಿರ್ದೇಶಕರಾದ ಪ್ರಕಾಶ. ವೈ,ಶಿಕ್ಷಕ ವೆಂಕಟಪತಿ.ವೈ, ಹನುಮಂತಪ್ಪ.ವಿ,ಸಮಾಜ ಕಲ್ಯಾಣ ಇಲಾಖೆಯ ದೇವರಾಜ ಭೋವಿ ಗುರುಪೀಠದ CEO ಗೌನಹಳ್ಳಿ ಗೋವಿಂದಪ್ಪ ಉಪಸ್ಥಿತಿಯಿದ್ದರು.

About The Author

Leave a Reply

Your email address will not be published. Required fields are marked *