May 7, 2024

Chitradurga hoysala

Kannada news portal

ನಂಬಿಸಿ ಮೋಸ ಮಾಡುತ್ತಿದ್ದ 3 ಜನ ಆರೋಪಿಗಳ ಬಂಧನ: ಚಳ್ಳಕೆರೆ ಪೊಲೀಸ. ಕಾರ್ಯವನ್ನು , ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರ ಶ್ಲಾಘ್ಯನೀಯ

1 min read


ಚಳ್ಳಕೆರೆ ಪೊಲೀಸ ರಿಂದ ನಂಬಿಸಿ ಮೋಸ ಮಾಡುತ್ತಿದ್ದ 3 ಜನ ಆರೋಪಿಗಳ ಬಂಧನ.

ಚಿತ್ರದುರ್ಗ:                                               ದಿನಾಂಕ:01-09-2021 ರಂದು ಪಿರ್ಯಾದಿ ಚಳ್ಳಕೆರೆ ಟೌನ್‍ನ ವಾಸಿಯಾದ ಪಿರ್ಯಾದಿಯವರು ಬಳಸುತ್ತಿದ್ದ

ಮೊಬೈಲ್ ನಂಬರಿಗೆ ಆರೋಪಿತರು ಕಾಲ್ ಮಾಡಿ ನೀವು ದೇವಿ ಪೂಜೆ ಮಾಡಿಸಿದರೆ ಬೇಗ ಒಳ್ಳೆಯದಾಗುತ್ತದೆ ಎಂದು
ತಿಳಿಸಿ ನಿಮ್ಮ ಮನೆಯಲ್ಲಿರುವ ಬಂಗಾರದ ಒಡವೆಗಳನ್ನು ಪೂಜೆ ಮಾಡಿದರೆ ಬಹಳ ಒಳ್ಳೆಯದಾಗುತ್ತದೆ ಈ ದಿವಸ
ಚಳ್ಳಕೆರೆಗೆ ಬರುತ್ತಿದ್ದೇವೆ ನಿಮ್ಮ ಮನೆಯಲ್ಲಿರುವ ಬಂಗಾರದ ಒಡವೆಗಳನ್ನು ತಂದು ಕೊಡಿ ಅವುಗಳನ್ನು ಪೂಜೆ ಮಾಡಿ
ವಾಪಾಸ್ ಕೊಡುತ್ತೇವೆ ಎಂದು ನಂಬಿಸಿದ್ದರಿಂದ ಪಿರ್ಯಾದಿಯು ಅವರ ಮನೆಯಲ್ಲಿದ್ದ ಸುಮಾರು 17 ತೊಲ ತೂಕದ
ಸುಮಾರು 6,80,000/- ಬೆಲೆಯ ಬಂಗಾರದ ಒಡವೆಗಳನ್ನು ತೆಗೆದುಕೊಂಡು ದಿನಾಂಕ:08-09-2021 ರಂದು ಚಳ್ಳಕೆರೆ
ಟೌನ್ ಚರ್ಚ್ ಸ್ಕೂಲ್ ಬಳಿ ಬಂದಂತಹ ಆರೋಪಿತರಿಗೆ ನೀಡಿದ್ದು, ಬಹಳ ದಿವಸವಾದರೂ ಆರೋಪಿತರಿಂದ
ಪಿರ್ಯಾದಿಗೆ ಮಾಹಿತಿ ಮತ್ತು ಬಂಗಾರದ ಒಡವೆಗಳು ಸಿಗದೆ ಇದ್ದುದರಿಂದ ಠಾಣೆಗೆ ಬಂದು ದೂರು ನೀಡಿದ್ದು ಈ ಬಗ್ಗೆ
ಚಳ್ಳಕೆರೆ ಠಾಣೆಯಲ್ಲಿ ಮೊ ನಂ 501/2021 ಕಲಂ: 417, 420, ರೆ/ವಿ 34 ಐಪಿಸಿ ಪ್ರಕಾರ ಕೇಸು ದಾಖಲಾಗಿರುತ್ತದೆ,
ಸದರಿ ಪ್ರಕರಣದ ಆರೋಪಿತರ ಪತ್ತೆಯ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯ ಪೆÇಲೀಸ್ ನಿರೀಕ್ಷಕರಾದ
ಜೆ,ಎಸ್, ತಿಪ್ಪೇಸ್ವಾಮಿ ಇವರ ನೇತೃತ್ವದಲ್ಲಿ ಮಹೇಶ್ ಗೌಡ,ಎ,ಎಸ್, ಪಿಎಸ್‍ಐ, ಹಾಗೂ ಸಿಬ್ಬಂದಿಯವರ
ತಂಡವನ್ನು ರಚಿಸಿದ್ದು, ಸದರಿ ತಂಡದವರು ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ:07-12-2021 ರಂದು ಹುಬ್ಬಳ್ಳಿ ನಗರದಲ್ಲಿ
ಮೇಲ್ಕಂಡ ಪ್ರಕರಣದ ಆರೋಪಿತರಾದ ಎ-1] ಭೀಮರಾವ್ ಬಂಡೆಪ್ಪ ವಾಸ್ಟರ್ ತಂದೆ ಬಂಡೆಪ್ಪ ವಾಸ್ಟರ್, 24 ವರ್ಷ,
ಶಾಸ್ತ್ರ ಕೆಲಸ, ಲಿಂಗರಾಜ ನಗರ ಪಕ್ಕದ ಹನುಮಂತ ನಗರ, ಕುಮಾರವಾಸನ್ ಪಾರ್ಕ್ ಹತ್ತಿರ, ಹುಬ್ಬಳ್ಳಿ ಟೌನ್,
ದಾರವಾಡ ಜಿಲ್ಲೆ, ಎ-2] ಬಂಡೆಪ್ಪ ಹನುಮಂತಪ್ಪ ವಾಸ್ಟರ್ ತಂದೆ ಹನುಮಂತಪ್ಪ ವಾಸ್ಟರ್, 58 ವರ್ಷ, ಶಾಸ್ತ್ರ ಕೆಲಸ,
ಲಿಂಗರಾಜ ನಗರ ಪಕ್ಕದ ಹನುಮಂತ ನಗರ, ಕುಮಾರವಾಸನ್ ಪಾರ್ಕ್ ಹತ್ತಿರ, ಹುಬ್ಬಳ್ಳಿ ಟೌನ್, ದಾರವಾಡ ಜಿಲ್ಲೆ,
ಎ-3] ಗಣೇಶ್ @ ಗಣೇಶ್ ಶಾಸ್ತ್ರಿ ತಂದೆ ಲೇಟ್ ಶಿವಾಜಿ ವಾಸ್ಟರ್, 24 ವರ್ಷ, ಶಾಸ್ತ್ರಿ ಕೆಲಸ, ಅಲಂಪುರ ಪೇಟೆ, 7 ನೇ
ವಾರ್ಡ್, ದರ್ಗಾ ಹತ್ತಿರ, ಇಳಕಲ್ ಟೌನ್, ಬಾಗಲಕೋಟೆ ಜಿಲ್ಲೆ, ಇವರುಗಳನ್ನು ಪತ್ತೆ ಮಾಡಿ ವಿಚಾರಣೆ ಮಾಡಿದಾಗ
ಸದರಿ 3 ಜನ ಆರೋಪಿತರು ಕೇಸಿನ ಪಿರ್ಯಾದಿ ರವರಿಗೆ ನಂಬಿಸಿ ಅವರಿಂದ ಬಂಗಾರದ ಒಡವೆಗಳನ್ನು ಪಡೆದುಕೊಂಡು
ಹೋಗಿರುವುದಾಗಿ ಮತ್ತು ಇದೇ ರೀತಿ ಬೇರೆ ಬೇರೆ ಸುಮಾರು ಹುಡುಗಿಯರಿಗೆ ಮತ್ತು ಇತರೆ ಜನರಿಗೆ ನಂಬಿಸಿ
ಅವರಿಂದ ಹಣವನ್ನು ಮತ್ತು ಬಂಗಾರದ ಒಡವೆಗಳನ್ನು ತೆಗೆದುಕೊಂಡಿರುತ್ತಾರೆ. 3 ಜನ ಆರೋಪಿತರು ಕೃತ್ಯಕ್ಕೆ ಬಳಸಿದ
ಮೊಬೈಲ್ ಪೆÇೀನ್ ಗಳನ್ನು ಹಾಜರು ಪಡಿಸಿದ್ದು ಪರಿಶೀಲಿಸಲಾಗಿ ಬೇರೆ ಬೇರೆ ಹುಡುಗಿಯರಿಗೆ ನಂಬಿಸಿ ಅವರಿಂದ
ಅಶ್ಲೀಲ ಪೆÇೀಟೋಗಳನ್ನು ವಾಟ್ಸ್ ಆಪ್ ಮೂಲಕ ತರಿಸಿಕೊಂಡಿರುವುದು ಕಂಡುಬಂದಿದ್ದು ಇವುಗಳನ್ನು ಮುಂದಿನ
ಕ್ರಮಕ್ಕಾಗಿ ಜಪ್ತು ಮಾಡಿಕೊಂಡಿರುತ್ತದೆ. ಹಾಲಿ 3 ಜನ ಆರೋಪಿತರು ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಕೃತ್ಯದ ಹಿನ್ನೆಲೆ:- ಆರೋಪಿತರು ಬೇರೆ ಬೇರೆ ಹುಡುಗಿಯರಿಗೆ ನಿಮಗೆ ಐ,ಎ,ಎಸ್, ಐ,ಪಿ,ಎಸ್, ಆಫೀಸರ್ ಆಗುವ
ಯೋಗ ಇದೆ ನಿಮಗೆ ಒಳ್ಳೆ ಅದೃಷ್ಟ ಬರುತ್ತದೆ ನೀವು ದೇವಿ ಪೂಜೆ ಮಾಡಿಸಿದರೆ ಬೇಗ ಒಳ್ಳೆಯದಾಗುತ್ತದೆ ಎಂದು
ಪೋನ್ ಕರೆ ಮಾಡಿ ಮೋಸ ಮಾಡುತ್ತಿರುತ್ತಾರೆ ಹಾಗೂ ಭವಿಷ್ಯವನ್ನು ಮತ್ತು ಶಾಸ್ತ್ರವನ್ನು ಹೇಳುವುದಾಗಿ
ಇನ್ಸ್ಟಾಗ್ರಾಮ್ ಮತ್ತು ಫೇಸ್‍ಬುಕ್‍ಗಳಲ್ಲಿ ಪ್ರಕಟಣೆಗಳನ್ನು ನೀಡಿ ಮೋಸ ಮಾಡುತ್ತಿರುತ್ತಾರೆ.
ಸದರಿ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು
ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

About The Author

Leave a Reply

Your email address will not be published. Required fields are marked *