May 5, 2024

Chitradurga hoysala

Kannada news portal

ಅಹಂಕಾರ, ಕಲ್ಮಶವನ್ನು ಹೊರ ಹಾಕಬೇಕು. ಅಂಧಕಾರದಿಂದ ಬೆಳಕಿನೆಡೆಗೆ ಸಾಗಲು ಬುದ್ದ — ಅಂಬೇಡ್ಕರ್ ದಾರಿದೀಪ. ಹಿರಿಯ ಸಾಹಿತಿ ಪ್ರೋ.ಲಿಂಗಪ್ಪ

1 min read



ಉಸಿರಾಟವೊಂದೇ ಮನುಷ್ಯನ ನಿಜವಾದ ಆಸ್ತಿ. ಉಸಿರಾಟವೇ ನಿತ್ಯ,ಉಸಿರಾಟವೇ ಸತ್ಯ, ಉಸಿರಾಟವೇ ಅಂತ್ಯ : ಬುದ್ದ ಪ್ರತಿಷ್ಠಾನ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ.

ಅಹಂಕಾರ, ಕಲ್ಮಶವನ್ನು ಹೊರ ಹಾಕಬೇಕು. ಅಂಧಕಾರದಿಂದ ಬೆಳಕಿನೆಡೆಗೆ ಸಾಗಲು ಬುದ್ದ — ಅಂಬೇಡ್ಕರ್ ದಾರಿದೀಪ. ಹಿರಿಯ ಸಾಹಿತಿ ಪ್ರೋ.ಲಿಂಗಪ್ಪ.

ಚಿತ್ರದುರ್ಗ:

ಗೌತಂ ಬುದ್ದ ಪ್ರತಿಷ್ಠಾನ ವಿಪಶ್ಶನ ಧ್ಯಾನ ಕೇಂದ್ರ ಚಿತ್ರದುರ್ಗ

ಉಸಿರಾಟವೊಂದೇ ಮನುಷ್ಯನ ನಿಜವಾದ ಆಸ್ತಿ. ಉಸಿರಾಟವೇ ನಿತ್ಯ, ಉಸಿರಾಟವೇ ಸತ್ಯ, ಉಸಿರಾಟವೇ ಅಂತ್ಯ ಎಂದು ಗೌತಮ ಬುದ್ದ ಪ್ರತಿಷ್ಠಾನ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ರಮಾಬಾಯಿ ಅಂಬೇಡ್ಕರ್ ಬಡಾವಣೆಯ ಯಂಗಮ್ಮನಕಟ್ಟೆಯ ಗೌತಮ ಬುದ್ದ ಪ್ರತಿಷ್ಠಾನದ ಕೋಟೆ ನಾಡು-ಬೌದ್ಧ ವಿಹಾರದ ವಿಪಶ್ಯನ ಧ್ಯಾನ ಕೇಂದ್ರ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಸಿರಾಟವು ಜಾತ್ಯಾತೀತವಾಗಿದ್ದು, ಎಲ್ಲಾ ಧರ್ಮ, ಜಾತಿ, ಪಂಥ, ಪಂಗಡಗಳ ಜನರಿಗೆ ಉಸಿರಾಟ ಸ್ವಂತದಾಗಿದೆ. ಇದನ್ನು ಅರಿತಾಗ ಮನುಷ್ಯನ ಅಹಂ ನಾಶವಾಗಿ ಮಾನವ ಪ್ರೀತಿ ಬೆಳೆಯುತ್ತದೆ. ಪ್ರಕೃತಿ ಪ್ರೇಮಿಯಾಗುತ್ತಾನೆಂದು ವಿಪಶ್ಯನ ಧ್ಯಾನದ ಮೂಲಕ ಭಗವಾನ್ ಬುದ್ದರು ತೋರಿಸಿದ್ದಾರೆ. ಬೌದ್ಧ ಧರ್ಮದ ಮೈಲುಗಲ್ಲುಗಳಾದ ಪ್ರಜ್ಞೆ ಹಾಗೂ ಕರುಣೆ ವಿಚಾರಗಳನ್ನು ಮೆಚ್ಚಿ ಬಾಬಾಸಾಹೇಬರು ಬೌದ್ಧಧರ್ಮ ಸ್ವೀಕರಿಸಿದರು. ಆ ನಿಟ್ಟಿನಲ್ಲಿ ನಮ್ಮ ಧ್ಯಾನ ಕೇಂದ್ರವು ಪ್ರತಿ ಭಾನುವಾರ ನಿರಂತರವಾಗಿ ಬೆಳಿಗ್ಗೆ ೧೦.೩೦ ರಿಂದ ೧೧.೩೦ರವರೆಗೆ ಕಾರ್ಯಕ್ರಮಗಳು ನಡೆಯುತ್ತವೆ. ಬೌದ್ಧಾಸಕ್ತರು ಭಾಗವಹಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಹಿರಿಯ ಸಾಹಿತಿ ಪ್ರೋ.ಲಿಂಗಪ್ಪ ಮಾತನಾಡಿ ಬುದ್ದನ ಸಂದೇಶ, ವಿಚಾರಗಳು ಹಾಗೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ನಾವುಗಳು ಮೊದಲು ಅಹಂಕಾರ, ಕಲ್ಮಶವನ್ನು ಹೊರ ಹಾಕಬೇಕು. ಅಂಧಕಾರದಿಂದ ಬೆಳಕಿನೆಡೆಗೆ ಸಾಗಲು ಬುದ್ದ, ಅಂಬೇಡ್ಕರ್ ಅವರ ದಾರಿದೀಪ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಲ್ಲಾಡಿಹಳ್ಳಿ ಪಿಯು ಕಾಲೇಜ್ ಪ್ರಾಂಶುಪಾಲ ಸಿದ್ದಲಿಂಗಮ್ಮ ಮಾತನಾಡಿ ನೆಮ್ಮದಿಯುತ ಬದುಕಿಗೆ ಬುದ್ದನ ಮಾರ್ಗವೇ ಅಂತಿಮ ಎಂದರು. ನಗರಸಭೆ ಸದಸ್ಯೆ ಮಂಜುಳಾ ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ ನಾವು ಬೌದ್ಧ ಧಮ್ಮ ದೀಕ್ಷೆ ಪಡೆದ ದಿನದಿಂದ ಮೌಡ್ಯ ರಹಿತ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕೋಟೆ ನಾಡು ಬೌದ್ಧವಿಹಾರ ಧ್ಯಾನ ಕೇಂದ್ರದ ಅಭಿವೃಧ್ದಿ ಕಾರ್ಯಗಳಿಗೆ ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಪಿ.ಪ್ರೇಮನಾಥ್ ಅವರು ಒಂದು ಲಕ್ಷ ಕೊಡುವುದಾಗಿ ಘೋಷಿಸಿ, ೫೦ಸಾವಿರ ನಗದು ದಾನ ನೀಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಮುದೂರು ತೇಜ ಅವರು ೫೦ಸಾವಿರ ಹಾಗೂ ಬಾಳೆಕಾಯಿ ಶ್ರೀನಿವಾಸ್ ಅವರು ೫೦ಸಾವಿರ ಧಾನ ನೀಡುವುದಾಗಿ ಘೋಷಿಸಿದರು.
ಉಪನ್ಯಾಸಕ ಆರ್.ರಾಮಣ್ಣ, ಚಂದ್ರಪ್ಪ, ಪೆನ್ನಪ್ಪ, ಶಿಕ್ಷಕರಾದ ಹನುಮಂತಪ್ಪ, ಜಗದೀಶ್, ರಾಮಚಂದ್ರಪ್ಪ, ರಾಮಶೇಖರ್, ಇಂಜಿನಿಯರ್ ಎನ್.ಪಾತಪ್ಪ, ಸಾಹಿತಿ ಶಶಿಧರ್, ಕೃಷ್ಣಪ್ಪ, ಉಪನ್ಯಾಸಕ ಪಿ.ಆರ್.ಮಲ್ಲೇಶ್, ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ, ಶಿವಕುಮಾರ್, ವಕೀಲ ಕುಮಾರ್, ಸಿದ್ದಲಿಂಗಮ್ಮ, ಮೀನಾಕ್ಷಮ್ಮ, ಓಂಕಾರಮ್ಮ, ಶಕುಂತಲಮ್ಮ, ಇತರರಿದ್ದರು

About The Author

Leave a Reply

Your email address will not be published. Required fields are marked *