May 5, 2024

Chitradurga hoysala

Kannada news portal

ಹೀಟರ್ ನಲ್ಲಿ ಸ್ನಾನಕ್ಕಾಗಿ ನೀರು ಕಾಯಿಸುತ್ತಿದ್ದ ವೇಳೆ ಸ್ವಿಚ್ ಆಫ್ ಮಾಡದೆಯೇ ಯುವತಿ ನೀರಿಗೆ ಕೈ ಹಾಕಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವು..

1 min read



ರಾಯಚೂರು:
ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಜನರು ಬಿಸಿ ನೀರಿನ ಸ್ನಾನಕ್ಕೆ ಹೆಚ್ಚನ ಒತ್ತು ನೀಡುತ್ತಾರೆ. ಗೀಸರ್, ಹೀಟರ್ ಗಳಂತಹ ವಿದ್ಯುತ್ ಉಪಕರಣಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಇವುಗಳ ಅಪಾಯವನ್ನು ಮೊದಲು ತಿಳಿದುಕೊಳ್ಳಲೇ ಬೇಕಿದೆ. ಚಳಿಗಾಲದ ಆರಂಭದಲ್ಲಿಯೇ ಹೀಟರ್(ನೀರು ಬಿಸಿ ಮಾಡುವ ಸಾಧನ)ನಿಂದ ವಿದ್ಯುತ್ ಪ್ರವಾಹಿಸಿ ಯುವತಿಯೋರ್ವಳು ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರಿನಲ್ಲಿ ನಡೆದಿದೆ.
ಕೃಪೆ ಮ
ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಹೀಟರ್ ನಲ್ಲಿ ಸ್ನಾನಕ್ಕಾಗಿ ನೀರು ಕಾಯಿಸುತ್ತಿದ್ದ ವೇಳೆ ಸ್ವಿಚ್ ಆಫ್ ಮಾಡದೆಯೇ ಯುವತಿ ನೀರಿಗೆ ಕೈ ಹಾಕಿದ್ದು, ಪರಿಣಾಮವಾಗಿ ಆಕೆಗೆ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಲಿಂಗಸಗೂರು ತಾಲೂಕಿನ ಕಸಬಾ ಲಿಂಗಸೂರಿನ 23 ವರ್ಷ ವಯಸ್ಸಿನ ರೇಣುಕಮ್ಮ ಮೃತಪಟ್ಟ ಯುವತಿಯಾಗಿದ್ದಾರೆ. ವಿದ್ಯುತ್ ಪ್ರವಾಹಿಸಿದ ಬಳಿಕ ಕೂಡಲೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆಗಾಗಲೇ ಯುವತಿ ಸಾವನ್ನಪ್ಪಿದ್ದಾಳೆ.

ಸ್ನಾನಕ್ಕೆ ನೀರು ಬಿಸಿ ಮಾಡಲು ಗೀಸರ್, ಹೀಟರ್ ಬಳಸುವ ವೇಳೆ ಜನರು ಬಹಳ ಜಾಗೃತರಾಗಿರಬೇಕು. ಬಹಳಷ್ಟು ಜನರು ಇದರಿಂದಾಗಿ ಸಾವನ್ನಪ್ಪಿದ್ದಾರೆ. ಸ್ನಾನ ಮಾಡುವ ವೇಳೆ ಗೀಸರ್ ಆಫ್ ಮಾಡಿಯೇ ಸ್ನಾನ ಮಾಡಬೇಕು. ಹೀಟರ್ ನಲ್ಲಿ ನೀರು ಬಿಸಿ ಮಾಡಲು ಇಟ್ಟಿದ್ದರೆ, ಸ್ವಿಚ್ ಆಫ್ ಮಾಡಿಯೇ ನೀರನ್ನು ಮುಟ್ಟಬೇಕು. ಇಲ್ಲವಾದರೆ ವಿದ್ಯುತ್ ಶಾಕ್ ಹೊಡೆಯುವ ಅಪಾಯವಿದೆ.ಕೃಪೆಮಹಾನಾಯಕ

About The Author

Leave a Reply

Your email address will not be published. Required fields are marked *