April 26, 2024

Chitradurga hoysala

Kannada news portal

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೈ ಪರ ಜನರ ಒಲವು ನಾಯಕನಹಟ್ಟಿ ಪಪಂ ಚುನಾವಣೆ ಕಾರ್ಯಕರ್ತರ ಶ್ರಮಕ್ಕೆ ಸಂದ ಗೆಲುವು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ

1 min read



ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೈ ಪರ ಜನರ ಒಲವು

ನಾಯಕನಹಟ್ಟಿ ಪಪಂ ಚುನಾವಣೆ ಕಾರ್ಯಕರ್ತರ ಶ್ರಮಕ್ಕೆ ಸಂದ ಗೆಲುವು
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ

ಚಿತ್ರದುರ್ಗ:
ರಾಜ್ಯದಲ್ಲಿ ಇತ್ತೀಚೆಗೆ ಜರುಗಿದ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತ ಪಕ್ಷ ನಡೆಸಿದ ಹಣ, ಜಾತಿ, ಆಡಳಿತ ಯಂತ್ರದ ದುರ್ಬಳಕೆ ಮಧ್ಯೆಯೂ ಸಮಬಲವಾಗಿ ಸ್ಥಾನಗಳಿಸಿದ್ದ ಕಾಂಗ್ರೆಸ್ ಪಕ್ಷ, ನಾಯಕನಹಟ್ಟಿ ಪಪಂ ಸೇರಿದಂತೆ ರಾಜ್ಯದ ವಿವಿಧೆಡೆ ಜರುಗಿದ ಗ್ರಾಮ ಪಂಚಾಯತ್ ಸದಸ್ಯತ್ವಕ್ಕೆ ನಡೆದ ಉಪಚುನಾವಣೆಯಲ್ಲೂ ಭರ್ಜರಿ ಗೆಲುವು ಸಾಧಿಸಿರುವುದು ಬಿಜೆಪಿ ಆಡಳಿತ ತಿರಸ್ಕರಿಸಿ, ಕಾಂಗ್ರೆಸ್ ಪಕ್ಷ ಜನ ಒಲವು ತೋರಿಸಿರುವುದು ಸ್ಪಷ್ಟವಾಗಿದೆ.
ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಪಟ್ಟಣ ಪಂಚಾಯತ್ ೧೬ ಕ್ಷೇತ್ರಗಳಿಗೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ೧೧ ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟಬಹುತ ಪಡೆದಿದೆ.
ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂಬುದನ್ನು ಫಲಿತಾಂಶ ದೃಢಪಡಿಸಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮಲು ಕ್ಷೇತ್ರವಾದ ನಾಯಕನಹಟ್ಟಿ ಪಪಂ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಪಕ್ಷವು ಆಡಳೀತ ಯಂತ್ರ, ಹಣಬಲ ಎಲ್ಲವನ್ನೂ ಬಲಪ್ರಯೋಗ ಮಾಡಿತ್ತು. ಆದರೆ ಪ್ರಜ್ಞಾವಂತ ಮತದಾರರು ಬಿಜೆಪಿ ಸರ್ಕಾರದ ದುರಾಡಳೀತ, ಜೀವನ ಅವಶ್ಯಕ ವಸ್ತುಗಳ ಬೆಲೆ ಏರಿಕೆ, ಕೃಷಿ, ಕಾರ್ಮಿಕರ ವಿರೋಧಿ ನೀತಿಯಿಂದ ಬೇಸತ್ತು ಬಿಜೆಪಿ ವಿರುದ್ಧ ತೀರ್ಪು ಪ್ರಕಟಿಸಿದ್ದಾರೆ.

ಗ್ರಾಮ, ಪಟ್ಟಣ, ನಗರ, ರಾಜ್ಯ, ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಆಢಳಿತವೇ ಸೂಕ್ತ ಎಂಬುದನ್ನು ಪಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜನ ತೀರ್ಪು ನೀಡಿದ್ದಾರೆ. ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಬಹುಮುಖ್ಯವಾಗಿ ಸ್ಥಳೀಯ ಕಾರ್ಯಕರ್ತರು, ಮುಖಂಡರು ಶ್ರಮವಹಿಸಿದ್ದು ಕಾರಣವಾಗಿದೆ. ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿಗಳು ಒಗ್ಗೂಡಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಪುಣ್ಯಭೂಮಿ ನಾಯಕನಹಟ್ಟಿ ಪಟ್ಟಣವನ್ನು ಸಮಗ್ರ ಅಭಿವೃದ್ಧಿಗೆ ಪಣತೊಟ್ಟ, ಜನ ನೀಡಿದ ಪ್ರೀತಿ ವಿಶ್ವಾಸ ವೃದ್ಧಿಗೆ ಶ್ರಮಿಸಬೇಕು.
ಈ ಮೂಲಕ ಬರುವ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವಂತೆ ಮಾಡಬೇಕು.
ತಾಪಂ, ಜಿಪಂ ಚುನಾವಣೆ ಶೀಘ್ರ ನಡೆಸಬೇಕು:
ಸರಣಿ ಸೋಲು, ಪೆಟ್ರೋಲ್, ಡಿಸೇಲ್, ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಬಿಜೆಪಿ ವಿರುದ್ಧ ಸಿಟ್ಟಿಗೆದ್ದಿರುವುದು ಜೊತೆಗೆ ರಾಜ್ಯದಲ್ಲಿ ಇತ್ತಿಚೆಗೆ ಜರುಗಿದ ಕೆಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತಗಳಿಕೆ, ಸ್ಥಾನಗಳಿಕೆಯಲ್ಲಿ ಪ್ರಗತಿ ಸಾಧಿಸಿರುವುದು ಬಿಜೆಪಿ ನಾಯಕರನ್ನು ನಿದ್ದೆಗೆಡಿಸಿದೆ. ಈ ಭೀತಿ ಹಿನ್ನೆಲೆಯಲ್ಲಿ ಒಂದಲ್ಲ ಒಂದು ನೆಪ ಮಾಡಿಕೊಂಡು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ಬಿಜೆಪಿ ಮುಂದೂಡುತ್ತಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ತರುವ ಕೃತ್ಯವಾಗಿದೆ.

ಕೂಡಲೇ ಗ್ರಾಮಾಭಿವೃದ್ಧಿ ದೃಷ್ಟಿ ಹಾಗೂ ಆಡಳಿತ ವಿಕೇಂದ್ರೀಕರಣಕ್ಕೆ ಗೌರವಕೊಟ್ಟು ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಶೀಘ್ರ ನಡೆಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಬಿಜೆಪಿಯ ಜನವಿರೋಧಿ ನಡೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಹೇಳಿದ್ದಾರೆ.

About The Author

Leave a Reply

Your email address will not be published. Required fields are marked *