April 29, 2024

Chitradurga hoysala

Kannada news portal




ಡಾ:ಎಚ್.ಕೆ.ಎಸ್.ಸ್ವಾಮಿಗೆ ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನದಲ್ಲಿ ಎಚ್.ಎನ್. ಪ್ರಶಸ್ತಿ ಪ್ರದಾನ.

ಶಿವಮೊಗ್ಗ:

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ, ಬೆಂಗಳೂರುವತಿಯಿಂದ ೨೦೨೧ನೇ ಸಾಲಿಗೆ ಕೊಡಲಾಗುವ ಡಾ. ಎಚ್. ನರಸಿಂಹಯ್ಯ (ಎಚ್. ಎನ್) ಜಿಲ್ಲಾ ಪ್ರಶಸ್ತಿಯನ್ನ ಚಿತ್ರದುರ್ಗದ ಡಾ. ಎಚ್ಕೆ.ಎಸ್. ಸ್ವಾಮಿ ಅವರಿಗೆ ಶಿವಮೊಗ್ಗದ ಕುವೆಂಪು ರಂಗಮಂದಿರದ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ. ಎಚ್.ಕೆ. ಎಸ್. ಸ್ವಾಮಿ ಅವರು ಪ್ರಸ್ತುತ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿ ಮತ್ತು ರೋಟರಿ ಕ್ಲಬ್ ನ ಸದಸ್ಯರಾಗಿ ಮಕ್ಕಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ, ಪರಿಸರ ಸಂರಕ್ಷಣೆ, ಗ್ರಾಮೀಣ ಅಭಿವೃದ್ದಿ, ಕಸದಿಂದ ರಸ, ಆರೋಗ್ಯ ರಕ್ಷಣೆ, ಖಾದಿ ಪ್ರಚಾರ, ಗಾಂಧೀಜಿಯವರ ಚಿಂತನೆಗಳುನ್ನು ಬೆಳೆಸುವ ನಿಟ್ಟಿನಲ್ಲಿ ೧೨೦೦ಕ್ಕೂ ಹೆಚ್ಚು ಜನ ಜಾಗೃತಿ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ನೀಡುತ್ತಾ ಬಂದಿದ್ದಾರೆ.

ಚಿತ್ರದುರ್ಗದ ಜಿಲ್ಲಾ ಪ್ರಶಸ್ತಿ, ಪ್ರೊಫೆಸರ್ ಕೆ. ಎಸ್. ಸ್ವಾಮಿ ಪ್ರಶಸ್ತಿ, ಎಲ್.ಹೆಚ್. ಆರ್. ಪತ್ರಿಕಾ ಪ್ರಶಸ್ತಿ. ಕಿರು ವಿಜ್ಞಾನಿ ಪ್ರಶಸ್ತಿ ಪಡೆದಿರುವ ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಮಟ್ಟದ ಎಚ್. ಎನ್. ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

About The Author

Leave a Reply

Your email address will not be published. Required fields are marked *