April 29, 2024

Chitradurga hoysala

Kannada news portal

ನಾಳೆ ಕಾಯಕ ಜನೋತ್ಸವ ಕಾರ್ಯಕ್ರಮ ಮಡಿವಾಳ ಸಮಾಜದ ಹಬ್ಬ, ಬಸವ ಮಾಚಿದೇವ ಮಹಾಸ್ವಾಮಿಗಳ 4ನೇ ಪಟ್ಟಾಧಿಕಾರ ಮಹೋತ್ಸವ…

1 min read




ನಾಳೆ ಕಾಯಕ ಜನೋತ್ಸವ ಕಾರ್ಯಕ್ರಮ

ಮಡಿವಾಳ ಸಮಾಜದ ಹಬ್ಬ, ಬಸವ ಮಾಚಿದೇವ ಮಹಾಸ್ವಾಮಿಗಳ 4ನೇ ಪಟ್ಟಾಧಿಕಾರ ಮಹೋತ್ಸವ…

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಮಾಚಿದೇವ ಪ್ರಶಸ್ತಿ….

ಮಾಜಿ ಸಚಿವ ಹೆಚ್ ಆಂಜನೇಯ ಮಾಚಿದೇವ ರತ್ನ ಪ್ರಶಸ್ತಿ….

ಚಿತ್ರದುರ್ಗ:

ಜನವರಿ 6ರಂದು ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮಾಚಿದೇವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. 25 ಸಾವಿರ ರೂ ನಗದು ಮತ್ತು ಆಕರ್ಷಕ ಪ್ರಶಸ್ತಿ ಪಾಲಿಕೆಯನ್ನು ನೀಡಿ ಗೌರವಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮಡಿವಾಳ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ಮಾಡಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿ ವರದಿ ಸಲ್ಲಿಸಿದ ಮೈಸೂರು ವಿಶ್ವ ವಿದ್ಯಾಲಯದ ಮಾನವ ಕುಲಶಾಸ್ತ್ರ ವಿಭಾಗದ ಡಾ. ಅನ್ನಪೂರ್ಣಮ್ಮನವರಿಗೆ ಮಲ್ಲಿಗೆಮ್ಮ ಮಾತೋಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ

ಮಾಚಿದೇವ ರತ್ನ ಪ್ರಶಸ್ತಿ:
ತೋಟಗಾರಿಕೆ ಸಚಿವ ಮುನಿರತ್ನ, ಕೊಪ್ಪಳ ಲೋಕಸಭಾ ಸದಸ್ಯ ಕರಡಿ ಸಂಗಣ್ಣ, ಹಗರಿಬೊಮ್ಮಹಳ್ಳಿ ಶಾಸಕ ಭೀಮಾ ನಾಯಕ, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ಮಾಜಿ ಸಚಿವ ಹೆಚ್ ಆಂಜನೇಯ ಇವರುಗಳಿಗೆ ಮಾಚಿದೇವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಮಹಾನೀಯರೆಲ್ಲರೂ ಮಡಿವಾಳ ಸಮುದಾಯದ ಪ್ರಗತಿಗಾಗಿ ದೋಭಿ ಘಾಟಗಳ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ, ವಸತಿ ಮನೆಗಳ ಹಂಚಿಕೆಯಲ್ಲಿ ದೊಡ್ಡ ಮಟ್ಟದ ಸಹಾಯ ಮಾಡಿದ್ದಾರೆ.

ಮಾಚಿದೇವ ಸೇವಾ ರತ್ನ ಪ್ರಶಸ್ತಿ
ಸಂಶೋಧಕ ರೋಣ ತಾಲೂಕಿನ ಬಸವಂತಪ್ಪ ಮಡಿವಾಳರ, ಗುಲಬರ್ಗಾ ವಿಶ್ವವಿದ್ಯಲಯ ಕುಲಪತಿ ಡಾ ದಯಾನಂದ ಅಗಸರ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತ ಶಿವಾನಂದ ಕಲಕೇರಿ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಶರಣಪ್ಪ ರಾಯಚೂರು, ಸಮಾಜದ ಮುಖಂಡರಾದ ಹರಪನಹಳ್ಳಿ ಅಶೋಕ, ಉಮೇಶ ಎಲ್, ಮಹದೇವಪ್ಪ ಯಾದಗಿರಿ, ಕೆ ವಿ ಅಮರನಾಥ, ಶಂಕ್ರಣ್ಣ ತಿಪಟೂರು, ಬಿ ಆರ್ ಪ್ರಕಾಶ, ಡಾ ವಿ ಬಸವರಾಜ, ಮಂಜುನಾಥ ಸ್ವರೂಪ ಇವರುಗಳಿಗೆ ಮಾಚಿದೇವ ಸೇವಾ ರತ್ನ ಪ್ರಶಸ್ತಿ ಮತ್ತು ಮಡಿವಾಳ ಸಮುದಾಯದ ವಿವಿಧ ಪ್ರತಿಭಾವಂತರಿಗೆ, ಕಲಾವಿದರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.

ಸ್ವಾಮೀಜಿಗಳ ಸಾನ್ನಿಧ್ಯ
ಡಾ.ಶಿವಮೂರ್ತಿ ಮುರುಘಾ ಶರಣರು, ಕಲಘಟಗಿ ಶ್ರೀ ಗುರುದೇವ ತಪೋವನದ ಪೀಠಾಧಿಪತಿ ಗುರುಮಾತಾ ನಂದಾತಾಯಿ, ಸ್ವಾತಂತ್ರ್ಯ ಹೋರಾಟಗಾರ ಮಾತಾಜಿ ಚನ್ನಮ್ಮಾ ಹಳ್ಳಿಕೇರಿ ಮತ್ತು ಹರ ಗುರು ಚರಮೂರ್ತಿಗಳು ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

About The Author

Leave a Reply

Your email address will not be published. Required fields are marked *