April 26, 2024

Chitradurga hoysala

Kannada news portal

ಪ್ರಪಂಚಕ್ಕೆ ಆಯುರ್ವೇದ ಪರಿಚಯಿಸಿದ ಕೀರ್ತಿ ಭಾರತ ದ್ದಾಗಿದೆ:ಡಾ.ಶ್ರೀಪತಿ

1 min read



ಪ್ರಪಂಚಕ್ಕೆ ಆಯುರ್ವೇದ ಪರಿಚಯಿಸಿದ ಕೀರ್ತಿ ಭಾರತದ್ದಾಗಿದೆ:ಡಾ.ಶ್ರೀಪತಿ

ಚಿಕ್ಕಜಾಜೂರು :
ಭಾರತ ಆಯುರ್ವೇದ ವಿಜ್ಞಾನದ ತವರೂರು ಭಾರತ ಪ್ರಪಂಚಕ್ಕೆ ನೀಡಿದ ಕೊಡುಗೆಗಳಲ್ಲಿ ಆಯುರ್ವೇದ ಪದ್ಧತಿಯ ಒಂದು ಅದರ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಮಲ್ಲಾಡಿಹಳ್ಳಿ ರಾಘವೇಂದ್ರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಪ್ರಾಧ್ಯಾಪಕರಾದ ಡಾ. ಶ್ರೀಪತಿ ಹೇಳಿದರು. ಬುಧವಾರ ಜನತಾ ಕಾಲೊನಿಯ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯುರ್ವೇದ ವೈದ್ಯಕೀಯ ಪದ್ಧತಿ ಬಗ್ಗೆ ಜಾಗೃತಿ ಉಪನ್ಯಾಸ ನೀಡಿದ ಅವರು, ಆರೋಗ್ಯವೇ ಭಾಗ್ಯ, ಎಲ್ಲಾ ಸಂಪತ್ತು ಗಳಿಗಿಂತ ಶ್ರೇಷ್ಠವಾದದ್ದು ಆರೋಗ್ಯ ಅದನ್ನು ಗಳಿಸಲು ನಾವೆಲ್ಲರೂ ನಮ್ಮ ದೈನಂದಿನ ಚಟುವಟಿಕೆಗಳನ್ನು ಬದಲಾಯಿಸಿಕೊಳ್ಳುವುದು ಅಗತ್ಯವಿದೆ ಬೆಳಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಏಳುವುದು ಲಘು ವ್ಯಾಯಾಮವನ್ನು ಮಾಡುವುದು ಓಂಕಾರ ಜಪಿಸುವುದು ತಂದೆತಾಯಿಗಳಿಗೆ ನಮಸ್ಕಾರ ಮಾಡುವುದು ಪೌಷ್ಟಿಕಾಂಶಯುಕ್ತ ತರಕಾರಿ ಹಣ್ಣುಗಳನ್ನು ಊಟದ ಸಮಯದಲ್ಲಿ ತೆಗೆದುಕೊಳ್ಳುವುದು ಜಂಕ್ ಫುಡ್ ಆರೋಗ್ಯಕ್ಕೆ ಹಾನಿಕರ ವಾಗುವಂತಹ ಕರಿದ ಪದಾರ್ಥಗಳನ್ನು ತಿನ್ನದಿರುವುದು ಒಳ್ಳೆಯ ಆಲೋಚನೆ ಯನ್ನು ಮಾಡುವುದು ಹಸಿದಾಗ ಊಟಮಾಡುವುದು ನಾಲಿಗೆ ರುಚಿಗಿಂತ ದೇಹದ ಆರೋಗ್ಯಕ್ಕೆ ಅಗತ್ಯವಾದ ಆಹಾರ ಪದಾರ್ಥಗಳ ಸೇವನೆ ಮಾಡುವುದು ಉತ್ತಮವಾದ ಮಾರ್ಗ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕಿ ಗಂಗಮ್ಮ ವಹಿಸಿದ್ದರು ಸಭೆಯಲ್ಲಿ ಸಹ ಶಿಕ್ಷಕರಾದ ಮಂಜಮ್ಮ ಗಾಯತ್ರಿದೇವಿ ಶಶಿಕಲಾ ಡಿಕ್ಕಿ ಮಾಧವರಾವ್ ಇದ್ದರು,ಗುರುಸ್ವಾಮಿ ನಿರೂಪಿಸಿ ಸ್ವಾಗತಿಸಿದರು.

About The Author

Leave a Reply

Your email address will not be published. Required fields are marked *