May 1, 2024

Chitradurga hoysala

Kannada news portal

ಭದ್ರ ಮೇಲ್ದಂಡೆ ಯೋಜನೆಲ್ಲಿ ಕೈ ಬಿಟ್ಟಿದ್ದ ಹತ್ತು ಕರೆಗಳಿಗೆ ನೀರು ಸಿ.ಎಂ.ಆದೇಶ: ಶಾಸಕ ತಿಪ್ಪಾರೆಡ್ಡಿ

1 min read




ಭದ್ರ ಮೇಲ್ದಂಡೆ ಯೋಜನೆಲ್ಲಿ ಕೈ ಬಿಟ್ಟಿದ್ದ ಹತ್ತು ಕರೆಗಳಿಗೆ ನೀರು, ಸಿ.ಎಂ.ಆದೇಶ: ಶಾಸಕ ತಿಪ್ಪಾರೆಡ್ಡಿ ಹರ್ಷ.

ಚಿತ್ರದುರ್ಗ:
ಕುಡಿಯುವ ನೀರು ಮತ್ತು ಹತ್ತು ಕೆರೆಗಳನ್ನು ತುಂಬಿಸುವ ಮಹತ್ವದ ಯೋಜನೆಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿ ತಿಳಿಸಿದರು.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕರು ಭದ್ರ ಮೇಲ್ದಂಡೆ ಯೋಜನೆಯಡಿಯಲ್ಲಿ ಕೈ ಬಿಟ್ಟು ಹೋಗಿದ್ದ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 10 ಕೆರೆಗಳನ್ನು ಸೇರ್ಪಡೆ ಮಾಡುವ ಮೂಲಕ ಕೆರೆ ತುಂಬಿಸುವ ಯೋಜನೆಯ ರೈತರ ಕನಸು ನನಸು ಮಾಡಿದ್ದಾರೆ.ಅತಿ ಹಿಂದುಳಿದ ಜನಸಂಖ್ಯೆ ಇರುವ 10 ಕೆರೆಯ ಸುತ್ತಮುತ್ತಲಿನ ಸಾವಿರಾರು ಪ್ರದೇಶಕ್ಕೆ ನೀರಿನ ಅನುಕೂಲವಾಗಲಿದೆ‌ .ಚಿತ್ರದುರ್ಗ ತಾಲೂಕಿನ ಮುರುಘಾ ಮಠದ ಹಿಂದೆ ಮತ್ತು ಮುಂದಿನ ಕೆರೆ, ಸಿದ್ದಪುರ, ಕುರುಮರಡಿಕೆರೆ, ಮಾನಂಗಿ, ಹುಲ್ಲೂರು, ಅನ್ನೇಹಾಳು, ನಂದಿಪುರ, ಚಿಕ್ಕಸಿದ್ದವ್ವನಹಳ್ಳಿ ಈ ಹತ್ತು ಗ್ರಾಮಗಳ‌ ಕೆರೆಗೆ 0.1 Tmc ಮೂಲಕ‌ ಕೆರೆ ತುಂಬಿಸಲಾಗುತ್ತಿದೆ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮನವಿ ಕೊಟ್ಟಿದ್ದೇವು. ಬದಲಾದ ಕಾರಣ ಮುಖ್ಯಮಂತ್ರಿ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದಾಗ ಮರು ಮಾತಡದೇ ಆದೇಶ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ಅವರು ಆದೆಶ ಮಾಡಿದ ದಾಟಿಗೆ ಬೆಳಗಾಂ ಅಧಿವೇಶನ ಸಂದರ್ಭದಲ್ಲಿ ರಾಕೇಶ್ ಸಿಂಗ್ ಅವರು ಬಂದು ಅಧಿವೇಶನ ಮುಗಿದ ತಕ್ಷಣ ಆದೇಶ ಮಾಡಿ ಕಳಿಸುವುದಾಗಿ ತಿಳಿಸಿದರು ಎಂದು ಸಂತಸ ವ್ಯಕ್ತಪಡಿಸಿದರು.

ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ 173 ಹಳ್ಳಿಗಳಿಗೆ ವಿವಿ ಸಾಗರದಿಂದ 0.36 ಟಿಎಂಸಿ ನೀರಲ್ಲಿ ಬಹುನೀರು ಕುಡಿಯುವ ಯೋಜನೆ ಮೂಲಕ ಪ್ರತಿ ಹಳ್ಳಿಗೂ ಸಹ ಕುಡಿಯವ ನೀರು ಒದಗಿಸಲಾಗುವುದು. ಜಲ ಜೀವನ್ ಮಿಷನ್ ಯೋಜನೆ ಮೂಲಕ ಕಾರ್ಯಗಗೊಳಿಸಲಾಗುವುದು ಎಂದರು. ಅನೇಕ‌ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕಾರಣಕ್ಕೆ ಆನರೋಗ್ಯದಿಂದ ಬಳಲುತ್ತಿದ್ದಾರೆ. ಇಂತಹ ಪ್ರಕರಣಗಳು ಸಹ ಶುದ್ದ ಕುಡಿಯುವ ನೀರು ಕೊಡುವುದರಿಂದ ಸಾಧ್ಯ ಎಂದು ತಿಳಿಸಿದರು. ಕ್ಷೇತ್ರದ ಬಹುತೇಕ ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಡಿಯುವ ನೀರು ಸರಬರಾಜು ಇಲಾಖೆ‌ ಇಂಜಿನಿಯರ್ ಹಾಗೂ ರೈತರು ಹಾಜರಿದ್ದರು.

About The Author

Leave a Reply

Your email address will not be published. Required fields are marked *