May 1, 2024

Chitradurga hoysala

Kannada news portal

ಸ್ವಾಭಿಮಾನ ಅಂಬೇಡ್ಕರ್ ಅವರ ಸಂಕೇತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಾ: ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ, ನೋವುಂಡರೂ ಕುಗ್ಗದ ಅಂಬೇಡ್ಕರ್.

1 min read

ಡಾ: ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ

ಸ್ವಾಭಿಮಾನ ಅಂಬೇಡ್ಕರ್ ಅವರ ಸಂಕೇತ:

ಮುಖ್ಯಮಂತ್ರಿ, ಬಸವರಾಜ ಬೊಮ್ಮಾಯಿ

ಬೀದರ್, ಏಪ್ರಿಲ್ 09:

ಅವರು ಇಂದು ಬಸವ ಕಲ್ಯಾಣದಲ್ಲಿ ಡಾ: ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡುತ್ತಿದ್ದರು.

ಸ್ವಾವಲಂಬಿಗಳಾಗುವವರು ಸ್ವಾಭಿಮಾನಿಗಳಾಗುತ್ತಾರೆ:

ನವಕರ್ನಾಟಕದ ನಿರ್ಮಾಣದಲ್ಲಿ ತುಳಿತಕ್ಕೆ ಒಳಗಾದ ಜನಾಂಗದ ಪ್ರಮುಖ ಪಾತ್ರವಿದೆ. ಇವರ ಬೆವರಿಗೆ ಬೆಲೆ ಬರುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಸರ್ಕಾರದಿಂದ ಹಮ್ಮಿಕೊಳ್ಳಲಾಗುವುದು. ಸ್ವಾವಲಂಬಿಗಳಾಗುವವರು ಸ್ವಾಭಿಮಾನಿಗಳಾಗುತ್ತಾರೆ. ಎಲ್ಲರನ್ನೂ ಒಗ್ಗೂಡಿಸಿ ರಾಜ್ಯವನ್ನು ಮುನ್ನಡೆಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ನಗರಸಭೆ 22 ಲಕ್ಷ ರೂ.ಗಳನ್ನು ನೀಡಿ ಸಹಕರಿಸಿದ್ದಕ್ಕಾಗಿ ಅಭಿನಂದಿಸಿದರು. ಡಾ: ಅಂಬೇಡ್ಕರ್ ಅವರ ವಿಚಾರ ಮತ್ತು ಕಾರ್ಯಕ್ರಮಗಳನ್ನು ಜಾರಿ ಮಾಡುವ ಬದ್ಧತೆಯ ಸಂಕಲ್ಪವನ್ನು ಮಾಡೋಣ ಎಂದರು.

ಸರ್ವವ್ಯಾಪಿ, ಸರ್ವಸ್ಪರ್ಶಿ ಸಂವಿಧಾನ:
ಡಾ: ಬಿ.ಆರ್.ಅಂಬೇಡ್ಕರ್ ಅವರು ನಮ್ಮ ದೇಶದ ಅಮೂಲ್ಯ ರತ್ನ. ಡಾ: ಬಿ.ಆರ್.ಅಂಬೇಡ್ಕರ್ ಅವರು ಇರಲಿಲ್ಲ ಎಂದರೆ ಭಾರತ ದೇಶವೂ ಇರುತ್ತಿರಲಿಲ್ಲ. ಸ್ವತಂತ್ರ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯಾ ನಂತರ ಭಾರತದವ್ನನು ಒಗ್ಗೂಡಿಸಿ ಒಕ್ಕೂಟ ವ್ಯವಸ್ಥೆಯಲ್ಲಿ ತಂದು ಸರ್ವ ಜನಾಂಗಕ್ಕೆ ಅವಕಾಶವನ್ನು ಕೊಟ್ಟು ಸರ್ವವ್ಯಾಪಿ, ಸರ್ವಸ್ಪರ್ಶಿ ಸಂವಿಧಾನವನ್ನು ದೇಶಕ್ಕೆ ಕೊಟ್ಟಿದ್ದರಿಂದ ಭಾರತ 130 ಕೋಟಿ ಜನಸಂಖ್ಯೆ ಇದ್ದರೂ, ಹಲವಾರು ಭಾಷೆ, ಸಂಸ್ಕøತಿಗಳಿದ್ದರೂ, ಜಾತಿ ಮತ, ಪಂಥಗಳಿದ್ದರೂ ಕೂಡ ಒಂದು ದೇಶವಾಗಿ ಉಳಿದಿದೆ. ಇದಕ್ಕೆ ಡಾ: ಬಿ.ಆರ್.ಅಂಬೇಡ್ಕ್‍ರ ಅವರು ಮೂಲ ಕಾರಣ. ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಬೇರೆ ದೇಶಗಳ ಸಂವಿಧಾನಗಳನ್ನು ಅಬ್ಯಾಸ ಮಾಡಿ, ವಿವಿಧ ನಾಯಕರೊಂದಿಗೆ ವೈಚಾರಿಕವಾಗಿ ಚಿಂತನೆ ಮಾಡಿರುವ ಅದ್ಭುತ ಪುಸ್ತಕವನ್ನು ಓದಿದಾಗ ಅವರು ಎಷ್ಟು ಆಳವಾಗಿ ಮಾನವೀಯತೆಯನ್ನು ಅರ್ಥ ಮಾಡಿಕೊಂಡಿದ್ದರು ಹಾಗೂ ಅವರಿಗಿದ್ದ ದೂರದೃಷ್ಟಿ ಎಷ್ಟು ಅಗಾಧವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.

ವಿಚಾರಗಳಲ್ಲಿ ಏಕಸಾಮ್ಯತೆ:
ಡಾ: ಅಂಬೇಡ್ಕರ್ ಹಾಗೂ ಬಸವಣ್ಣ ಅವರ ವಿಚಾರಗಳಲ್ಲಿ ಏಕಸಾಮ್ಯವಿದೆ. ಸಮಾನತೆಯನ್ನು ಇಬ್ಬರೂ ಸಾರಿದರು. ಅಸ್ಪøಶ್ಯತೆಯ ಹಾಗೂ ಅನಿಷ್ಟ ಪದ್ದತಿಗಳ ವಿರುದ್ದ ಇಬ್ಬರೂ ಹೋರಾಡಿದರು. ಈ ಪುಣ್ಯಭೂಮಿಯಲ್ಲಿ ಆಧುನಿಕವಾಗಿ ಬಸವಣ್ಣನ ಎಲ್ಲಾ ವಿಚಾರಗಳನ್ನು ಸಂವಿಧಾನದಲ್ಲಿ ತಂದು ಎಲ್ಲರಿಗೂ ಸಮಾನ ಅವಕಾಶಗಳನ್ನು ಕೊಟ್ಟ ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಮಾಡುವ ಮೂಲಕ ಡಾ: ಅಂಬೇಡ್ಕರ್ ಅವರಿಂದ ಈ ದೇಶ ಒಂದಾಗಿ ಉಳಿದಿದೆ ಎಂದು ಮತ್ತೊಮ್ಮೆ ಸಾರಿ ನಮನಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.

ನೋವುಂಡರೂ ಕುಗ್ಗದ ಅಂಬೇಡ್ಕರ್:
ಅವರ ಜೀವನದಲ್ಲಿ ಹಲವಾರು ನೋವುಗಳನ್ನು ಉಂಡರೂ, ಆ ನೋವಿನಿಂದ ಕುಗ್ಗದೆ, ಅದರ ಲಾಭವನ್ನು ಪಡೆಯಲು ಹೋಗಲಿಲ್ಲ. ಇದೇ ರೀತಿಯ ನೋವು ಉಣ್ಣುತ್ತಿದ್ದ ಲಕ್ಷಾಂತರ ಜನರ ರಕ್ಷಣೆ ಮಾಡಿ ಅವರಿಗೆ ಅವಕಾಶ, ಸಮಾನತೆ, ಬದುಕುವ ಶಕ್ತಿಯನ್ನು ತುಂಬಿದರು. ವಿದೇಶದಿಂದ ಬಂದ ಸಂದರ್ಭದಲ್ಲಿ ಮುಂಬೈ ಬಾರ್ ಅಸೋಸಿಯೇಷನ್ ಅವರಿಗೆ ಸದಸ್ಯತ್ವವನ್ನು ಕೊಡಲಿಲ್ಲ. ಆ ಸಂದರ್ಭದಲ್ಲಿ ಅವರಿಗೆ ಆಶ್ರಯ ನೀಡಿದವರು, ಮುಂಬೈ ಭಾಗದ ಶಿಕ್ಷಣ ಸಚಿವರಾಗಿದ್ದ ಹುಬ್ಬಳ್ಳಿಯ ಕಂಬಳಿಯವರು. ಕಂಬಳಿಯವರ ಮನೆಯಲ್ಲಿಯೇ ಇದ್ದು ಅವರು ಕಾಲೇಜಿನ ಪ್ರಾಧ್ಯಾಪಕರಾಗಿ ಕೆಲವು ದಿನ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಬಸವಣ್ಣನವರ ಬಗ್ಗೆ ಕಂಬಳಿಯವರಿಂದ ತಿಳಿದು ಮುಂದೆ ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಅತ್ಯಂತ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವಂಥ ಸಂವಿಧಾನ ರಚನೆ ಮಾಡಿದರು. ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ಉಳ್ಳ ದೇಶವಾಗಿ ಉಳಿದಿದೆ ಎಂದರು.

ಭಾರತದಲ್ಲಿ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದೆ:
ಇಂದು ನಾವು ಯಾವುದೇ ಸ್ಥಾನವನ್ನು ಹೊಂದಿದ್ದರೂ, ನೌಕರಿಯನ್ನು ಪಡೆಯಲು ಪ್ರಜಾಪ್ರಭುತ್ವದಿಂದ ಸಾಧ್ಯವಾಗಿದೆ. ಇಂದು ದೇಶ ವಿದೇಶಗಳಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ. ಪಕ್ಕದ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಆತಂಕದಲ್ಲಿದೆ. ನಮ್ಮ ಭಾರತ ದೇಶವೊಂದರಲ್ಲಿಯೇ ಪ್ರಜಾಪ್ರಭುತ್ವ ದಿನೇ ದಿನೇ ಗಟ್ಟಿಯಾಗುತ್ತಿದೆ. ಸಂವಿಧಾನ ಇದೆಲ್ಲಕ್ಕೂ ಅವಕಾಶ ಮಾಡಿಕೊಟ್ಟಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಯಾವುದೇ ಪಕ್ಷ ಅಧಿಕಾರ ಕಳೆದುಕೊಳ್ಳಲಿ, ಅತ್ಯಂತ ಶಾಂತ ರೀತಿಯಲ್ಲಿ, ಸಂಯಮಶೀಲತೆಯಿಂದ, ಗೌರವದಿಂದ ಅಧಿಕಾರ ಹಸ್ತಾಂತರ ಆಗುತ್ತದೆ. ಅಮೆರಿಕಾದಲ್ಲಿಯೂ ಅಧ್ಯಕ್ಷರ ಆಯ್ಕೆಯಾದ ನಂತರ ಗಲಾಟೆಗಳಾದವು. ಭಾರತದಲ್ಲಿ ಇಂಥದ್ದು ಜರುಗಲಿಲ್ಲ ಎಂದರೆ ಇದಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಕಾರಣ. ಅವರ ಬಂಧುಗಳಿಗೆ ನ್ಯಾಯ ಕೊಡುವ ಕೆಲಸವಾಗಬೇಕು. ಸ್ವಾತಂತ್ರ್ಯ ಗಳಿಸಿ 75 ವರ್ಷಗಳಾದರೂ ಸಹ ನ್ಯಾಯ ದೊರಕಿಲ್ಲ. ಆದರೆ ಕಾರ್ಯಕ್ರಮಗಳು ಕಟ್ಟ ಕಡೆಯ ವ್ಯಕ್ತಿಗೆ ಮುಟ್ಟಬೇಕಿದೆ ಎಂದರು.

ಮೂರು ಧ್ಯೇಯಗಳು:
ನಮ್ಮ ಸರ್ಕಾರಕ್ಕೆ ಇದರ ಅರಿವಿದೆ. ಅದಕ್ಕಾಗಿ ಶಿಕ್ಷಣ, ಸಬಲೀಕರಣ ಮತ್ತು ಉದ್ಯೋಗ ಎಂಬ ಮೂರು ಧ್ಯೇಯಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಈ ಜನಾಂಗದ ಶ್ರೇಯೋಭಿವೃದ್ಧಿಗೆ ಅತಿ ಹೆಚ್ಚು ಹಣವನ್ನು ಬಜೆಟ್‍ನಲ್ಲಿ ಮೀಸಲಿರಿಸಿ ನಿರಂತರವಾಗಿ ಕೆಲಸ ಮಾಡುತ್ತಿದೆ. 35 ಸಾವಿರ ಕೋಟಿ ರೂ.ಗಳನ್ನು ಎಸ್.ಸಿ.ಎಸ್.ಪಿ/ ಟಿಎಸ್‍ಪಿ ಯೋಜನೆಯಡಿ ಮೀಸಲಿರಿಸದೆ. ಇದರ ಸದುಪಯೋಗಮಾಡಿಕೊಳ್ಳಬೇಕು. ಈ ವರ್ಗದ ಜನರು ಆರ್ಥಿಕವಾಗಿ ಸಬಲರಾಗಬೇಕು. ಎಸ್.ಸಿ/ಎಸ್.ಟಿ ಹಾಗೂ ಹಿಂದುಳಿದ ವರ್ಗದ ಮಹಿಳೆಯರು ಸ್ವಾವಲಂಬಿಗಳಾಗಲು, 500 ಕೋಟಿ ರೂ.ಗಳನ್ನು ಸ್ತ್ರೀ ಶಕ್ತಿ ಸಂಘಗಳಿಗೆ ಒದಗಿಸಲಾಗುತ್ತಿದೆ. ಒಂದು ವರ್ಗ ಮುಖ್ಯವಾಹಿನಿಗೆ ಬರದಿದ್ದರೆ ಆ ರಾಜ್ಯ ದೇಶ ಮುಂದೆ ಬರಲು ಸಾಧ್ಯವಿಲ್ಲ. ಅಶಸಕ್ತರಿಗೆ ಶಕ್ತಿ ತುಂಬುವುದೇ ಅಂಬೇಡ್ಕರ್ ಅವರ ಆರ್ಥಿಕ ನೀತಿಯ ನಿಲುವು ಎಂದರು.

About The Author

Leave a Reply

Your email address will not be published. Required fields are marked *