May 4, 2024

Chitradurga hoysala

Kannada news portal

ನಾಳೆ ಪರಿವರ್ತನಪರ ಧರ್ಮಸಂಸತ್‌ ವತಿಯಿಂದ ಸಮಾನತ ದಿನ

1 min read


ಪರಿವರ್ತನಪರ ಧರ್ಮಸಂಸತ್‌ ವತಿಯಿಂದ ಸಮಾನತ ದಿನ

ಚಿತ್ರದುರ್ಗ ಹೊಯ್ಸಳ ನ್ಯೂಸ್ /

ಚಿತ್ರದುರ್ಗ :

ಪರಿವರ್ತನವರ ಧರ್ಮಸಂಸತ್‌ ವತಿಯಿಂದ ಬೆಂಗಳೂರು ಅರಮನೆ ಮೈದಾನದ ವೈಟ್‌ಪೆಟಲ್ಸ್‌ನಲ್ಲಿ ನಾಳೆ ಬೆಳಗ್ಗೆ 9.00 ಗಂಟೆಗೆ ಶ್ರೀ ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಬದಲು ಅವರ ಸಮಾಜಮುಖಿ ಕಾರ್ಯಗಳ ಸಾಧನೆಗೆ ಸಮಾನತ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾನತ ಕಾರ್ಯಕ್ರಮ ದ ಸಿದ್ಧತೆಗಳನ್ನು ಡಾ ಶಿವಮೂರ್ತಿ ಮುರುಘಾ ಶರಣರು ಮತ್ತು ಅನೇಕ ಮಠಾಧೀಶರು ವೀಕ್ಷಿಸಿದರು

ಇದಕ್ಕು ಮುನ್ನ ಬೆಳಗ್ಗೆ 7.00 ಡಾ. ಶಿವಮೂರ್ತಿ ಮುರುಘಾ ಶರಣರು ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದು, ಬೆಂಗಳೂರು: ಕೊಳದಮಠದ ಡಾ. ಶಾಂತವೀರ ಸ್ವಾಮಿಗಳು, ಮೈಸೂರು ಹೊಸಮಠದ ಶ್ರೀ ಚಿದಾನಂದ ಸ್ವಾಮಿಗಳು, ಹೊಸದುರ್ಗ ಶ್ರೀ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಗಳು, ತಿಪಟೂರು ಪದಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮಿಗಳು, ಕನಕಪುರ ಮರಳೇಗವಿಮಠದ ಡಾ. ಮುಮ್ಮಡಿ ಶಿವರುದ್ರ ಸ್ವಾಮಿಗಳು, ತುಮಕೂರು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಸವಣೂರು ದೊಡ್ಡಹಣಸೇಮಠದ ಶ್ರೀ ಚನ್ನಬಸವ ಸ್ವಾಮಿಗಳು, ಬೆಂಗಳೂರು ಶ್ರೀ ಗುರುವಣ್ಣದೇವರಮಠದ ಶ್ರೀ ನಂಜುಂಡ ಸ್ವಾಮಿಗಳು ಮತ್ತು ಗಂಜಾಂಮಠದ ಶ್ರೀ ಚಿದಾನಂದ ಸ್ವಾಮಿಗಳು ಸಮ್ಮುಖ ವಹಿಸುವರು.

ಬೆಳಗ್ಗೆ 9.00 ಗಂಟೆಗೆ ಡಾ. ಶಿವಮೂರ್ತಿ ಮುರುಘಾ ಶರಣರು ಇವರ ಜನ್ಮದಿನಾಚರಣೆ ಬದಲು ಅವರ ಸಮಾಜಮುಖಿ ಕಾರ್ಯಗಳ ಸಾಧನೆಗೆ ಸಮಾನತ ದಿನ ಕಾರ್ಯಕ್ರಮ ನಡೆಯಲಿದ್ದು, ತುಮಕೂರು ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ಕಾಗಿನೆಲೆ ಕನಕ ಗುರುಪೀಠದ ಶ್ರೀ ಜ| ನಿರಂಜನಾನಂದಪುರಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮ ಉದ್ಘಾಟಿಸಿ ಗಣಮೇಳದ ಮಹಾಸಂಪುಟ ಬಿಡುಗಡೆ ಮಾಡುವರು.

ಮುಖ್ಯಆತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಗೋವಿಂದ ಎಂ.ಕಾರಜೋಳ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ, ಭಾರತೀಯ ಜನತಾಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಕಾಂಗ್ರೆಸ್ ಮುಖಂಡ ಡಾ. ಹನುಮಲಿ ಷಣ್ಮುಖಪ್ಪ ಭಾಗವಹಿಸುವರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಗಣಮೇಳ ಮಹಾಸಂಪುಟ ಕುರಿತು ಮಾತನಾಡುವರು.

ಧಾರ್ಮಿಕ ಪರಂಪರೆ ಅಂದರೆ ಮಠ ಪರಂಪರೆ, ಮಠ ಪರಂಪರೆಯಲ್ಲಿ ಉತ್ಕೃಷ್ಟ ಸೇವೆಗೆ ಹೆಸರುವಾಸಿಯಾದಂತಹ ಮಠವೆಂದರೆ, ಐತಿಹಾಸಿಕ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಆದರಲ್ಲು ಸಮಾಜಸೇವೆ ಮತ್ತು ರಾಷ್ಟ್ರಸೇವೆಗೆ ಶ್ರೀಮಠದಿಂದ ಸಂದಂತಹ ಕೊಡುಗೆಗಳು ಅಪಾರ: ಅನುಪಮ, ಭವ್ಯ ಪರಂಪರೆ ಅಂದರೆ ಸಾಂಸ್ಕೃತಿಕ ಪರಂಪರೆ: ಅದು ನಮ್ಮ ಶ್ರೀಮಂತ ಪರಂಪರೆ, ಸಾಂಸ್ಕೃತಿಕ ಪರಂಪರೆಯಲ್ಲಿ ಶರಣ ಪರಂಪರೆ ಹಾಸುಹೊಕ್ಕಾಗಿದೆ. ಶರಣ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಇದೆ, ಪರಧರ್ಮ ಸಹಿಷ್ಣುತೆ ಹೇರಳವಾಗಿದೆ. ಆದು ದಾರ್ಶನಿಕರ ದಾರಿಯೂ ಆಗಿದೆ. ಪೂಜೆ ಪುನಸ್ಕಾರದಷ್ಟೇ ಮುಖ್ಯವಾದುದು. ಪರೋಪಕಾರ ಮತ್ತು ಸಹಕಾರ, ಪರೋಪಕಾರವೆಂದರೆ ಜನಮುಖಿ ಕಾರ್ಯಗಳು: ಸತ್ಕಾರ್ಯಗಳು,

ಧಾರ್ಮಿಕನಾದವನು ತನ್ನ ಅಂತರಂಗದ ವಿಕಸನಕ್ಕಾಗಿ ಧ್ಯಾನಾದಿಗಳನ್ನು ನೆರವೇರಿಸುತ್ತಾನೆ; ಬಹಿರಂಗದಲ್ಲಿ ಸಮಾಜೋದ್ಧಾರದ ಕಾರ್ಯಗಳನ್ನು ಮುಂದುವರಿಸುತ್ತಾನೆ. ಈ ನಿಟ್ಟಿನಲ್ಲಿ ಮುರುಗಿ ಶಾಂತವೀರರಿಂದ ಪಾರಂಭವಾದಂತಹ ಮುರುಘಾ ಪರಂಪರೆಯು ಒಂದು ಅವಿಚ್ಛಿನ್ನ ಪರಂಪರೆಯಾಗಿ ಬೆಳೆದು ಬಂದಿದೆ. ಶಿರಸಂಗಿಯ ಮಹಾಲಿಂಗ ಸ್ವಾಮಿಗಳು ಪ್ರಪ್ರಥಮವಾಗಿ ಪ್ರಸಾದ ನಿಲಯ ಪರಿಕಲ್ಪನೆಗೆ ಚಾಲನೆ ನೀಡಿರುತ್ತಾರೆ. ನಂತರ ಬಂದಂತಹ ಜಯದೇವ ಶ್ರೀಗಳು ನಾಡಿನಾದ್ಯಂತ ಜಯದೇವ ಪ್ರಸಾದ ನಿಲಯಗಳನ್ನು ತೆರೆದು ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದ್ದಾರೆ. ಜಯವಿಭವ ಶ್ರೀಗಳು ಪಶುಪಾಲನೆ, ತೋಟಗಾರಿಕೆಗೆ ಒತ್ತಾಸ ಆಗಿದ್ದಾರೆ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶೈಕ್ಷಣಿಕ
ಸಂಸ್ಥೆಗಳನ್ನು ತೆರೆದು, ಜ್ಞಾನದ ಹಸಿವನ್ನು ನಿವಾರಿಸಿದ್ದಾರೆ. ಸಾಕ್ಷರ ಸಮಾಜಕ್ಕೆ ಉತ್ತೇಜನ ನೀಡಿದ್ದಾರೆ. ಶ್ರೀಗಳು ಇರುವಾಗಲೆ ಶಿವಮೂರ್ತಿ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿ, ಜನಮುಖಿ ಕಾರ್ಯಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ದೊಡ್ಡ ಕೊಡುಗೆ.

ಶ್ರೀ ಶಿವಮೂರ್ತಿ ಮುರುಘಾ ಶರಣರು (ತಿಮು) ಸಣ್ಣದಾಗಿ ಆರಂಭಿಸಿದ ಸಮಾಜೋಧಾರ್ಮಿಕ ಪರಿವರ್ತನವರ ಕಾರ್ಯವು ಬರುಬರುತ್ತ ವಿಸ್ತಾರ ಪಡೆಯುತ್ತ, ರಾಜ್ಯ ಹಾಗು ರಾಷ್ಟ್ರಮಟ್ಟಕ್ಕೆ ಹಬ್ಬುತ್ತದೆ. ಹೊರರಾಷ್ಟ್ರದಲ್ಲು ಬಸವತತ್ವ ಪ್ರಸಾರ: ಪಡಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಶೈಕ್ಷಣಿಕ ಸಂಸ್ಥೆಗಳನ್ನು ಮತ್ತಷ್ಟು ಭದಗೊಳಿಸುತ್ತ ಗುಣಮಟ್ಟದ ಶಿಕ್ಷಣ ನೀಡುವಂತೆ ನೋಡಿಕೊಳ್ಳುತ್ತಿರುವುದು ಆಶಾದಾಯಕ, ಮಧ್ಯಕರ್ನಾಟಕವು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಲ್ಲದೆ ಪರಿತಪಿಸುತ್ತಿರುವಾಗ ಬಸವೇಶ್ವರ ಆಸ್ಪತ್ರೆ ತೆರೆದು, ಕೊರೋನಾ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಲು ಕಾರಣಕರ್ತರಾಗಿದ್ದಾರೆ. ಜಮುರಾ ವಿದ್ಯಾಪೀಠವನ್ನು ವಿಶ್ವವಿದ್ಯಾಲಯದ ಮಟ್ಟಕ್ಕೆ ಎತ್ತರಿಸುತ್ತಿರುವುದು ಪೂಜ್ಯರ ದೂರದೃಷ್ಟಿ ಮತ್ತು ದಿವ್ಯದೃಷ್ಟಿ, ಮಠ ಪರಂಪರೆಯಲ್ಲಿ ಮೊಟ್ಟಮೊದಲಿಗೆ ಅನಾಥಾಶ್ರಮ ತೆರೆದ ಕಾರುಣ್ಯಮೂರ್ತಿ, ವೃದ್ಧಾಶ್ರಮವನ್ನು ಆರಂಭಿಸಿದ ದಯಾಳು, ಬಸವತತ್ವ ಮಹಾವಿದ್ಯಾಲಯ ಆರಂಭಿಸಿ, ನೂರಾರು ಲಿಂಗಾಯತ, ಹಲವಾರು ದಲಿತ ಅಲಕ್ಷಿತ ವರ್ಗದವರಿಗೆ ಧಾರ್ಮಿಕ ಶಿಕ್ಷಣ-ಲಾಂಛನ ಅನುಗ್ರಹಿಸುತ್ತ, ಸರ್ವ ಜನಾಂಗಗಳಲ್ಲಿ ಜಾಗೃತಿ ಮೂಡಿಸುತ್ತ, ಎರಡನೆಯ ಶಾಂತಿಗೆ ಕಾರಣ ಆಗಿದ್ದಾರೆ. ಅನುಭವ ಮಂಟಪ, ಮುರುಘಾವನ ಮತ್ತು ಮುರುಘಾಶ್ರೀ ಮ್ಯೂಸಿಯಂ ಅವರ ದೂರದೃಷ್ಟಿಯ ಪ್ರತೀಕ, 2019ರಲ್ಲಿ ಗಣಮೇಳ ಆಯೋಜಿಸಿದ್ದು ಒಂದು ದಾಖಲೆ. ಸಾಧನೆಯ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ಇದರ ಹೊರತಾಗಿಯೂ ಸಮಾನತ ದಿನಾಚರಣೆಗೆ ಹೆಚ್ಚಿನ ಆದ್ಯತೆಯೆಂದರೆ ಹನ್ನೆರಡನೇ ಶತಮಾನದ ಬಸವಾದಿ ಶರಣರ ಪರಿಕಲ್ಪನೆ, ಅವರ ಆಶಯಗಳನ್ನು ಸಮಾಜಮುಖಿ ಸಾಧನೆ ಮಾಡಿದ್ದು, ಶ್ರೀ ಶಿವಮೂರ್ತಿ ಮುರುಘಾ ಶರಣರು, ಕಲ್ಯಾಣದ ಕಾಂತಿಯ ನಂತರ ಅನುಭವ ಮಂಟಪದಲ್ಲಿದ್ದ ಶರಣರ ಹೆಸರುಗಳು ಮಾತ್ರ ಉಳಿದವೆ ಹೊರತು ಮುಂದಿನ ಭಾಗವಾಗಿ ಆ(ತಳ ಸಮುದಾಯಗಳನ್ನು ಸಮಾನತೆಯೆಡೆಗೆ ಕೊಂಡೊಯ್ಯುವ ಕಾರ್ಯ ಮುಂದುವರೆಯಲಿಲ್ಲ. ಅವಕಾಶ ನೀಡಲಿಲ್ಲ. ಇದರ ಹೊರತಾಗಿ ಸಮಾಜದ ಎಲ್ಲಾ ಶೋಷಿತ ಸಮುದಾಯಗಳಿಗೆ ಧಾರ್ಮಿಕ ಸಂಸ್ಕಾರವನ್ನು ಕೊಡಮಾಡಿದವರು ಶ್ರೀ ಶಿವಮೂರ್ತಿ ಮುರುಘಾ ಶರಣರು,

ಶರಣರ ಕಲ್ಪನೆಯ ಅನುಭವ ಮಂಟಪದ ಕನಸನ್ನು ಶ್ರೀ ಶಿವಮೂರ್ತಿ ಮುರುಘಾ ಶರಣರಿಂದ ದೀಕ್ಷೆ ಪಡೆದ ಶೋಷಿತ ಸಮುದಾಯದವರು ತಮ್ಮ ಪೀಠಗಳನ್ನು ಸ್ಥಾಪಿಸಿ ಸಮಾಜವನ್ನು ಜಾಗೃತಿಗೊಳಿಸುವಲ್ಲಿ ಯಶಸ್ವಿ ಆಗಿದ್ದಾರೆ. ಈ ಸಮುದಾಯಗಳಿಗೆ ಮಾರ್ಗದರ್ಶನ ನೀಡಿದವರಲ್ಲಿ 12ನೇ ಶತಮಾನದ ನಂತರ 21ನೇ ಶತಮಾನದ ಶ್ರೀ ಶಿವಮೂರ್ತಿ ಮುರುಘಾ ಶರಣರು ಅಗ್ರಮಾನ್ಯರಾಗಿದ್ದಾರೆ. ಧಾರ್ಮಿಕ ಸಂಸ್ಕಾರ ಪಡೆದ ದಲಿತ, ಹಿಂದುಳಿದ ಮಠಾಧೀಶರು ಪ್ರತಿನಿಧಿಸುವ ಸಮುದಾಯಗಳ ಬೇಡಿಕೆ ಏನೆಂದರೆ, ಸಮಾನತ ದಿನಾಚರಣೆಯ ಮೂಲಕ ಶರಣರಿಗೆ ಗೌರವ ಸಲ್ಲಿಸುವುದು ಎಂದು ಪರಿವರ್ತನಪರ ಧರ್ಮ ಸಂಸತ್ ತಿಳಿಸಿದೆ.

About The Author

Leave a Reply

Your email address will not be published. Required fields are marked *