May 1, 2024

Chitradurga hoysala

Kannada news portal

ರೂ.57,447 ಮೌಲ್ಯದ 123 ಲೀಟರ್ ಮದ್ಯ ವಶ : ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

1 min read


ರೂ.57,447 ಮೌಲ್ಯದ 123 ಲೀಟರ್ ಮದ್ಯ ವಶ.

ಚಿತ್ರದುರ್ಗ(ಕರ್ನಾಟಕ ವಾರ್ತೆ):

ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಏಪ್ರಿಲ್ 14 ರಂದು ರೂ.57,447 ಮೌಲ್ಯದ 123 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಮಾರ್ಚ್ 29 ರಿಂದ ಏಪ್ರಿಲ್ 15ರ ವರೆಗೆ ಜಿಲ್ಲೆಯಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ರೂ.26,07,461 ಮೌಲ್ಯದ 12,358 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಸಂಚಾರಿ ತನಿಖಾ ತಂಡದಿಂದ ರೂ. 48,05,080 ಹಾಗೂ ಸ್ಥಾನಿಕ ಪರಿಶೀಲನಾ ತಂಡದಿಂದ ರೂ. 13,70,000 ನಗದು ಸೇರಿ ಒಟ್ಟು ರೂ. 61,75,080 ನಗದು ವಶಪಡಿಸಿಕೊಳ್ಳಲಾಗಿದೆ. ಇದರಲ್ಲ್ಲಿ ಪರಿಶೀಲನೆ ಬಳಿಕ ರೂ.5,00,000 ನಗದನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 2 ಪೇಯ್ಡ್ ನ್ಯೂಸ್, ಚುನಾವಣೆ ವೆಚ್ಚ ಸಂಬಂದಪಟ್ಟಂತೆ 1, ವಸ್ತುಗಳ ಹಂಚಿಕೆಯ 1 ಹಾಗೂ ಅಬಕಾರಿ ಕಾನೂನು ಉಲ್ಲಂಘನೆ ಅಡಿ 61 ಪೊಲೀಸ್ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.
======

About The Author

Leave a Reply

Your email address will not be published. Required fields are marked *