May 2, 2024

Chitradurga hoysala

Kannada news portal

ಬೌದ್ಧ ವಿಹಾರ : ಡಾ:ಬಿ.ಆರ್.ಅಂಬೇಡ್ಕರ್ ಅವರ 132 ನೇ ಜನ್ಮ ದಿನಾಚರಣೆ.

1 min read


ಡಾ:ಬಿ.ಆರ್.ಅಂಬೇಡ್ಕರ್ ಅವರ 132 ನೇ ಜನ್ಮ ದಿನಾಚರಣೆ.

ಕೋಟೆ ನಾಡು ಬೌದ್ಧ ವಿಹಾರ.

ಚಿತ್ರದುರ್ಗಹೊಯ್ಸಳ ನ್ಯೂಸ್/ಚಿತ್ರದುರ್ಗ:

ಬಾಬಾ ಸಾಹೇಬರೆಂದರೆ ಒಂದು ಪರಿಪೂರ್ಣ ಆದರ್ಶಮಯ ವೆಕ್ತಿತ್ವ ಎಂದು ಮಲ್ಲಾಡಹಳ್ಳಿ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಜೆ ಸಿದ್ದಲಿಂಗಮ್ಮನವರು ಹೇಳಿದರು.
ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ 132ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಾಬಾ ಸಾಹೇಬರು ಸಂವಿಧಾನವನ್ನು ಅರ್ಪಿಸಿದಾಗ ನಮ್ಮನ್ನಾಳುವವರು ಇನ್ನು ಮುಂದೆ ರಾಣಿಯ ಹೊಟ್ಟೆಯಿಂದ ಹುಟ್ಟುವುದಿಲ್ಲ ಬದಲಾಗಿ ಮತಪೆಟ್ಟಿಗೆಯಿಂದ ಹುಟ್ಟುತ್ತಾರೆ ಎಂದು ಹೇಳಿದ್ದರು.
ಅದರಂತೆ ಈಗ ಮತದಾನ ಮಾಡುವ ಸಂದರ್ಭ ಬಂದಿದ್ದು, ಮತ ಪೆಟ್ಟಿಗೆಯಿಂದ ಹೊಸ ಆಡಳಿತಗಾರವನ್ನು ಹುಟ್ಟುಹಾಕ ಬೇಕಾಗಿದೆ.
ಸಮ ಸಮಾಜದ ನಿರ್ಮಾಣಕ್ಕಾಗಿ ಅವಿಶ್ರಾಂತ ಹೋರಾಟ ಮಾಡಿದ ಬಾಬಾ ಸಾಹೇಬ್ ರ ಶ್ರಮ ವ್ಯರ್ಥವಾಗಬಾರದೆಂದರೆ ಸ್ವಯಂ ಪ್ರೇರಣೆಯಿಂದ ಕಡ್ಡಾಯವಾಗಿ ಮತದಾನ ಮಾಡಬೇಕು.
ಜಾತಿ,ಧರ್ಮ,ಹಣದಾಸೆಗೆ ಒಳಗಾಗಿ ಮತದಾನ ಮಾಡದೆ ಶಾಂತಿ, ಮೈತ್ರಿ,ಪ್ರಗತಿಯನ್ನು ಬಯಸುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕೆಂದರು .
ಚಳ್ಳಕೆರೆಯ ಹೆಚ್ ಟಿ ಪಿ ಸಿ ಕಾಲೇಜ್ ನ ಪ್ರೊಫೆಸರ್ ಕರಿಬಸಪ್ಪನವರು ಅಂಬೇಡ್ಕರರ ಆಸೆಗಳು ಹಾಗೂ ಬುದ್ಧರ ಬೋಧನೆಗಳನ್ನು ವೈಯಕ್ತಿಕ ಜೀವನದಲ್ಲಿ ಆಚರಣೆಗೆ ತರದೆ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುವುದಕ್ಕೋಸ್ಕರ ಮೀಸಲಾಗುತ್ತಿರುವುದು ವಿಷಾಧಕರವೆಂದರು.
ನಂತರ ಮಾತನಾಡಿದ ಪ್ರೊ. ಎಚ್ ಲಿಂಗಪ್ಪನವರು ವ್ಯಕ್ತಿ ಹಾಗೂ ಸಮಾಜದ ಎಲ್ಲ ಮಜಲುಗಳನ್ನು ಅಧ್ಯಯನ ಮಾಡಿ,ನ್ಯೂನೆತೆಗಳನ್ನು ಗುರುತಿಸಿ ಔಷಧವನ್ನು ಕಂಡುಹಿಡಿದ ಮಹಾನ್ ಮೇಧಾವಿಅಂಬೇಡ್ಕರ್ ರವರಾಗಿದ್ದಾರೆಂದರು.
ಸಂವಿಧಾನವನ್ನು ಗೆಲ್ಲಿಸಬೇಕೆನ್ನುವವರೆಲ್ಲರೂ ಚುನಾವಣೆಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ರಕ್ಷಸುವವರಿಗೆ ಮತದಾನ ಮಾಡಬೇಕೆಂದರು.
ನೀತಿಗೆರೆ ಮಂಜಪ್ಪ,ಮೋದಿಕೇರ್ ದುರ್ಗೇಶಪ್ಪ, ಬುರುಜನ ರಪ್ಪ ದ ಹನುಮಂತಪ್ಪ ಮುಂತಾದವರು ಮಾತನಾಡಿದರು.
ಕಾರ್ಯಕ್ರಮ ವನ್ನು ಲಾಯರ್ ಚಂದ್ರಪ್ಪ ನಿರ್ವಹಿಸಿದರೆ, ಪ್ರಾಂಶುಪಾಲರಾದ ಬಿಪಿ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು ಭೀಮನ ಕೆರೆಯ ತಿಪ್ಪೇಸ್ವಾಮಿ ವಂದಿಸಿದರು.
– ಬಿ.ಪಿ.ತಿಪ್ಪೇಸ್ವಾಮಿ.
ಕೋಟೆನಾಡು ಬುದ್ಧ ವಿಹಾರ ಚಿತ್ರದುರ್ಗ 9900592473

About The Author

Leave a Reply

Your email address will not be published. Required fields are marked *