May 2, 2024

Chitradurga hoysala

Kannada news portal

ದುಷ್ಟಶಕ್ತಿಗಳನ್ನು ಮಟ್ಟಹಾಕೋಣಾ : ಮಾಜಿ ಶಾಸಕ ಎ.ವಿ.ಉಮಾಪತಿ

1 min read

ದುಷ್ಟಶಕ್ತಿಗಳನ್ನು ಮಟ್ಟಹಾಕೋಣಾ

ಸಮ ಸಮಾಜ ನಿರ್ಮಾಣಕ್ಕೆ ಬದ್ಧರಾಗೋಣಾ

ಮಾಜಿ ಶಾಸಕ ಎ.ವಿ.ಉಮಾಪತಿ.

ಹೊಳಲ್ಕೆರೆ:

12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನ ಆಶಯಗಳಿಗೆ ಬಿಜೆಪಿ ಪಕ್ಷದಿಂದ ಕಂಟಕ ಎದುರಾಗಿದೆ ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬ್ಲಾಕ್ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿ ಮಾತನಾಡಿದರು.
ಬಸವಣ್ಣ ಕಟ್ಟಿದ ಜಾತ್ಯತೀತ ನಾಡಿನಲ್ಲಿ ಇತ್ತೀಚೆಗೆ ರಾಜಕೀಯ, ಅಧಿಕಾರಕ್ಕೆ ಬರಬೇಕೆಂಬ ದುರಾಸೆಗೆ ಬಿಜೆಪಿ ದುಷ್ಟ ಕೆಲಸಕ್ಕೆ ಮುಂದಾಗಿದೆ. ಜಾತಿ-ಧರ್ಮದ ಹೆಸರಲ್ಲಿ ಬಸವಣ್ಣನ ನಾಡನ್ನು ಇಬ್ಭಾಗ ಮಾಡುವ ಕುತಂತ್ರಕ್ಕೆ ಕೈ ಹಾಕಿದೆ. ಈ ಕುರಿತು ಪ್ರಜ್ಞಾವಂತ ಸಮಾಜ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಬಹಳಷ್ಟು ಪಟ್ಟಭದ್ರರಿದ್ದ ಅಸಮಾನತೆ, ಜಾತಿ, ಧರ್ಮದ ಅಮಲು ಉತ್ತುಂಗದಲ್ಲಿದ್ದ 12ನೇ ಶತಮಾನದಲ್ಲಿಯೇ ಜೀವದ ಹಂಗು ತೊರೆದು ಸಮಸಮಾಜ ನಿರ್ಮಾಣಕ್ಕೆ ಹೋರಾಟ ಮಾಡಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ತತ್ವ ಸಾರಿದ ಬಸವಣ್ಣ ವಿಶ್ವದ ನಿಜವಾದ ನಾಯಕ ಎಂದು ಬಣ್ಣಿಸಿದರು.

ಬಸವಣ್ಣನ ತತ್ವದ ಮೇಲೆ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ. ನಾವು ಸಂವಿಧಾನವನ್ನು ಪಾಲಿಸಿದರೆ ಬಸವಣ್ಣನನ್ನು ಗೌರವಿಸಿದಂತೆ. ದುಷ್ಟಶಕ್ತಿಗಳನ್ನು ಮಟ್ಟಹಾಕಿ, ಬಸವಣ್ಣನ ಆಶಯಗಳನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕದೆ ಎಂದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಬಸವಣ್ಣನವರ ವಚನಗಳು ಸರ್ವಕಾಲಕ್ಕು ಪ್ರಸ್ತುತ. ಅಶಕ್ತರಿಗೆ ಶಕ್ತಿ ತುಂಬಿದವರು. ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸಿದವರು. ನಮ್ಮಂತಹ ಸಾಮಾನ್ಯ ಜನರು ಇಂದು ಸ್ವಾಭಿಮಾನ, ಆತ್ಮಸ್ಥೈರ್ಯದಿಂದ ವೇದಿಕೆಗಳಲ್ಲಿ ಮಾತನಾಡುತ್ತೇವೆ ಎಂದರೆ ಅದಕ್ಕೆ ಮೂಲಕಾರಣಕರ್ತರು ಬಸವಣ್ಣ ಎಂದರು.

ಸಮಾಜದಲ್ಲಿ ಮನೆ ಮಾಡಿದ್ದ ಕಂದಾಚಾರ, ಮೌಢ್ಯತೆ ವಿರುದ್ಧ ಹೋರಾಡಿದ ಬಸವಣ್ಣನ ಮಾರ್ಗದಲ್ಲಿ ಮಠಗಳು ಸಾಗುತ್ತಿದ್ದು, ವೈಜ್ಞಾನಿಕ ಚಿಂತನೆಯ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತೀವೆ. ಸಮಾಜದಲ್ಲಿ ಘರ್ಷಣೆಗೆ ಅವಕಾಶ ನೀಡದೆ ಶಾಂತಿಯುತವಾಗಿ ಬಾಳುವ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಬೇಕು ಎಂಬ ಸಂದೇಶ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್ ಮಾತನಾಡಿ, ಅನುಭವ ಮಂಟಪದ ಸಭೆಗಳ ಮೂಲಕ ಅಜ್ಞಾನ ತೊಡೆದು ಸುಜ್ಞಾನ ಬೋಧಿಸಿದ ಬಸವಣ್ಣ ನಮ್ಮೆಲ್ಲರ ಬೆಳಕು.ಎಲ್ಲ ಸಮುದಾಯಗಳನ್ನು ಒಂದುಗೂಡಿಸಿ ಒಂದೆ ಜಾತಿ ಒಂದೆ ತತ್ವ ಎಂಬ ಸಂದೇಶ ಸಾರಿ ಸ್ವಸ್ಥ ಸಮಾಜ ನಿರ್ಮಾಣದ ಹರಿಕಾರರಾದರು ಎಂದು ತಿಳಿಸಿದರು.

ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಕಾಟೀಗಳ್ಳಿ ಶಿವಣ್ಣ ಮಾತನಾಡಿ, ಬಸವಣ್ಣ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಜನಜೀವನದಲ್ಲಿ ಹೊಸತನ ಮೂಡಿಸಿದರು. ಬಹಳ ಸರಳವಾಗಿರುವ ಬಸವಾದಿ ಶರಣರ ವಚನಗಳನ್ನು ಓದಿ ಚರ್ಚಿಸುವ ಜತೆಗೆ, ಅವುಗಳನ್ನು ನಾಲ್ಕು ಜನಕ್ಕೆ ತಿಳಿಸುವ ಕೆಲಸ ಮಾಡಬೇಕು. ಆಗ ಮಾತ್ರ ನಾವು ಬಸವಣ್ಣನಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬಸವಣ್ಣ ವೃತ್ತ ಪ್ರತಿಮೆ ನಿರ್ಮಾಣ

ಹೊಳಲ್ಕೆರೆಯಲ್ಲಿ ಮುಂದಿನ ದಿನಗಳಲ್ಲಿ ಬಸವಣ್ಣನ ವೃತ್ತ ಸ್ಥಾಪಿಸಿ, ಬಸವೇಶ್ವರರ ಬೃಹತ್ ಪ್ರತಿಮೆ ಸ್ಥಾಪನೆಗೆ ಎಲ್ಲ ಜಾತಿ ಜನರ ಸಲಹೆ ಪಡೆದು ಕಾರ್ಯರೂಪಕ್ಕೆ ತರೋಣಾ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಬಸವಣ್ಣ ಒಂದು ಹಾತಿ, ಧರ್ಮಕ್ಕೆ ಸೀಮಿತ ನಾಯಕನಲ್ಲ. ಸರ್ವಸಮುದಾಯದ ಮನಗೆದ್ದ ಜನನಾಯಕ. ಆದ್ದರಿಂದ ಬಸವಣ್ಣ ಹೇಳಿದಂತೆ ಸರ್ವ ಸಮುದಾಯದ ಪ್ರಗತಿಗೆ ಪಣ ತೋಡಬೇಕಿದೆ. ಬಹಳಷ್ಟು ಸಣ್ಣ-ಪುಟ್ಟ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುವ ಬದ್ಧತೆ ಪ್ರದರ್ಶಿಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಮಜರ್ ಉಲ್ಲಾಖಾನ್, ಮುಂಡರಾದ ಗೋಡೆಮನೆ ಹನುಮಂತಪ್ಪ, ವೈಶಾಖ್ ಯಾದವ್, ಜಗದೀಶ್, ನಾಡಿಗರ್, ಮಲ್ಲಸಿಂಗನಹಳ್ಳಿ ತಿಮ್ಮೇಶ್, ಕಾಂತರಾಜ್, ನೆಲ್ಲಿಕಟ್ಟೆ ಅಜ್ಜಣ್ಣ, ಆನಂದಪ್ಪ, ಧನಂಜಯ, ವಕೀಲರಾದ ಪ್ರಭಾಕರ್, ಜಯಣ್ಣ, ಈಶ್ವರ್ ದಗ್ಗೆ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *