May 2, 2024

Chitradurga hoysala

Kannada news portal

ಬುದ್ಧನ ತರುವಾಯ ಬಸವಣ್ಣ ಸಂತನಾಗಿ ಹೊರಹೊಮ್ಮಿದರು : ಪ್ರೊ.ಜಿ.ಪರಮೇಶ್ವರ್ .

1 min read

ಬುದ್ಧನ ತರುವಾಯ ಬಸವಣ್ಣ ಸಂತನಾಗಿ ಹೊರಹೊಮ್ಮಿದರು : ಪ್ರೊ.ಜಿ.ಪರಮೇಶ್ವರ್.


ಚಿತ್ರದುರ್ಗ:

ಬುದ್ಧನ ತರುವಾಯ ಬಹಳ ವರ್ಷಗಳ ನಂತರ ಸಾಮಾಜಿಕ ಸಂತನಾಗಿ ಹೊರಹೊಮ್ಮಿದ ಬಸವಣ್ಣ ಕಾಯಕದಲ್ಲಿ ಸತ್ಯ ಶುದ್ಧತೆ ಮತ್ತು ದಾಸೋಹದಲ್ಲಿ ದುಡಿದು, ಹಂಚಿ ತಿನ್ನುವ ಮಹತ್ತರ ಕೆಲಸ ಮಾಡಿ ಮಾನವತಾವಾದಿಯಾದರು ಎಂದು ನಿವೃತ್ತ ಪ್ರಾಧ್ಯಾಪಕ ಮತ್ತು ಸಾಹಿತಿ ಪ್ರೊ.ಜಿ.ಪರಮೇಶ್ವರ್ ಹೇಳಿದರು.

ಚಿತ್ರದುರ್ಗ ನಗರದ ಕಣುಮಪ್ಪ ಲೇಔಟ್ ಹತ್ತಿರದ ಬುದ್ದ ವಿಪಷ್ಯನ ದ್ಯಾನ ಮಂದಿರ ಭಾನುವಾರ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರು ಶರಣರ ಅನುಭವ ಮಂಟಪ ಸಂಘಟಿಸಿ ದೇಶದ ಮೊದಲ ಪಾರ್ಲಿಮೆಂಟನ್ನಾಗಿ ಉದ್ಘಾಟಿಸಿದರು. ಅವರು ತಮ್ಮ ವಚನಗಳಲ್ಲಿ ಕವನ ಪ್ರಜ್ಞೆಗಿಂತ ಜೀವನ ಪ್ರಜ್ಞೆ ಹೇಳಿದರು. ಅದಕ್ಕೆ ಸರಳ ಭಾಷೆಯನ್ನು ಬಳಸಿಕೊಂಡರು. ಮುಗ್ಧರನ್ನು ಮೌಡ್ಯಗಳಿಂದ, ಶೋಷಣೆಯಿಂದ, ಬಡತನದಿಂದ, ಜಾತಿಯಿಂದ, ದೇವಸ್ಥಾನದಿಂದ, ಅಸ್ಪೃಶ್ಯತೆಯಿಂದ ಬಿಡುಗಡೆಗೊಳಿಸಿದರು. ಅವರುಬ್ರಾಹ್ಮಣನಾಗಿದ್ದರೂ ತಳಸ್ತರದ ಜನರೊಡನೆ ಬೆರೆತು ಒಂದಾಗಿದ್ದರು ಎಂದರು.

ಸಾಹಿತಿ ಮತ್ತು ಚಿಂತಕ ಪ್ರೊ. ಹೆಚ್.ಲಿಂಗಪ್ಪ ಮಾತನಾಡಿ ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಪರಿವರ್ತನಾಕರರಾಗಿ ಹೊರಹೊಮ್ಮಿದರು. ಇವತ್ತಿಗೂ ಅವರ ತತ್ವಗಳು ಜೀವಂತವಾಗಿ ಮೌಲ್ಯರಹಿತ ಸಮಾಜಕ್ಕೆ ಅನಿವಾರ್ಯವಾಗಿ ಬೇಕಾಗಿದೆ .
ಅವರನ್ನು ಮರೆತರೆ ಸಮಾಜದ ಸಮಾನತೆಯು ಏರುಪೇರು ಆಗುತ್ತದೆ. ಅವರ ಆಶಯವಾದ ಪ್ರಜಾಪ್ರಭುತ್ವದ ಕಲ್ಪನೆ ಬಿದ್ದು ಹೋಗುತ್ತದೆ. ಮತ್ತೆ ಯಥಾಸ್ಥಿತಿಯ ಬಂಡವಾಳಶಾಹಿಗಳ ಕೈಗೊಂಬೆಯಾಗುವ ಸಮಯ ದೂರವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಬಿ.ಪಿ. ತಿಪ್ಪೇಸ್ವಾಮಿ, ಬಿಎಸ್ಐ ಚಿತ್ರದುರ್ಗ ಘಟಕದ ಶಕುಂತಲಾ, ದಲಿತ ಮುಖಂಡ ಭೀಮನಕೆರೆ ಶಿವಮೂರ್ತಿ, ನಿವೃತ್ತ ಪಿಡಬ್ಲ್ಯೂಡಿ ಇಂಜಿನಿಯರ್ ತಿಪ್ಪೇರುದ್ರಪ್ಪ, ಬಿ.ಎಸ್.ಪಿ ಪ್ರಕಾಶ್, ಹಿಂಧೂದರ ಗೌತಮ್ ಮುಂತಾದವರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *