ಹೊಳಲ್ಕೆರೆ ಕ್ಷೇತ್ರದಲ್ಲಿ ಈ ಹಿಂದೆಂದೂ ಆಗದ ಅಭಿವೃದ್ಧಿ ಮಾಡಿದ್ದಾರೆ : ಹನುಮಲಿ ಶಣ್ಮುಖಪ್ಪ
1 min read


ಹೊಳಲ್ಕೆರೆ ಕ್ಷೇತ್ರದಲ್ಲಿ ಈ ಹಿಂದೆಂದೂ ಆಗದ ಅಭಿವೃದ್ಧಿ ಮಾಡಿದ್ದಾರೆ : ಹನುಮಲಿ ಶಣ್ಮುಖಪ್ಪ
ಜನಾಶೀರ್ವಾದಯಾತ್ರೆ ;
ದುಮ್ಮಿ ಗ್ರಾಮದಲ್ಲಿ ಮಾಜಿ ಸಚಿವ*ಹೆಚ್.ಆಂಜನೇಯ ,ಮಾಜಿ ಶಾಸಕ ಎವಿ.ಉಮಾಪತಿ,ಕೆಪಿಸಿಸಿ ಸದಸ್ಯರಾದ ಹನುಮಲಿ ಶಣ್ಮುಖಪ್ಪ,ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿಎಸ್.ಮಂಜುನಾಥ್ ರವರಿಂದ ಬಿರುಸಿನ ಮತ ಪ್ರಚಾರ
ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದ ದುಮ್ಮಿ ಗ್ರಾಮದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ,ಮಾಜಿ ಶಾಸಕ ಎವಿ.ಉಮಾಪತಿ,ಕೆಪಿಸಿಸಿ ಸದಸ್ಯರಾದ ಹನುಮಲಿ ಶಣ್ಮುಖಪ್ಪ,ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿಎಸ್.ಮಂಜುನಾಥ್ ಪಾಲ್ಗೊಂಡು ಮತಯಾಚನೆ ಮಾಡಿದರು..
ಕೆಪಿಸಿಸಿ ಸದಸ್ಯರಾದ ಹನುಮಲಿ ಶಣ್ಮುಖಪ್ಪ ಮಾತನಾಡಿ ಆಂಜನೇಯ ರವರು ಕೋಟ್ಯಂತರ ರೂಪಾಯಿ ಅನುದಾನ ತಂದು ಕೆರೆಗಳನ್ನು ತುಂಬಿಸಿದರು ಹಾಗೂ ಹೊಳಲ್ಕೆರೆ ಕ್ಷೇತ್ರದಲ್ಲಿ ಈ ಹಿಂದೆಂದೂ ಆಗದ ಅಭಿವೃದ್ಧಿ ಮಾಡಿದ್ದಾರೆ.ಚಿತ್ರಹಳ್ಳಿ, ಮಲ್ಲಾಡಿಹಳ್ಳಿ,ರಾಮಗಿರಿ ಮಾರ್ಗದಲ್ಲಿ ಶೈಕ್ಷಣಿಕ ಕಟ್ಟಡಗಳು ಆಂಜನೇಯ ರವರ ಕಾಳಜಿ, ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿ ನಿಂತಿವೆ ಎಂದರು..
ಈ ವೇಳೆ ಮಾಜಿ ಜಿ.ಪಂ,ತಾ.ಪಂ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಸ್ಥಳೀಯ ಮುಖಂಡರುಗಳು,ಕಾರ್ಯಕರ್ತರು ಭಾಗಿಯಾಗಿ, ಕಾಂಗ್ರೆಸ್ ಪಕ್ಷದ ಬೃಹತ್ ಅಂತರದ ಗೆಲುವಿಗಾಗಿ ಶ್ರಮಿಸುವುದಾಗಿ ಹೇಳಿದರು