May 3, 2024

Chitradurga hoysala

Kannada news portal

ಪ್ರಕೃತಿ ವಿನಾಶಕ್ಕೆ ಮಾನವ ಮೊದಲ ಕಾರಣ: ಮುಖ್ಯ ಶಿಕ್ಷಕ ಮಹಾಂತೇಶ್

1 min read



ಪ್ರಕೃತಿ ವಿನಾಶಕ್ಕೆ ಮಾನವ ಮೊದಲ ಕಾರಣ:

ಮುಖ್ಯ ಶಿಕ್ಷಕ ಮಹಾಂತೇಶ್

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ:

ಪರಿಸರದಿಂದ ಮಾನವನು ಯೋಜನೆಗಳನ್ನು ಪಡೆದುಕೊಳ್ಳುತ್ತಾನೆ ವಿನಹ ಅವುಗಳನ್ನು ಪೋಷಣೆ ಪಾಲನೆ ಮಾಡುವುದರಲ್ಲಿ ವಿಫಲನಾಗುತ್ತಿದ್ದಾನೆ. ದಿನದಿಂದ ದಿನಕ್ಕೆ ಪ್ರಕೃತಿಯನ್ನು ಹಾಳು ಮಾಡುತ್ತಾ ಪ್ರಕೃತಿಯ ವಿನಾಶಕ್ಕೆ ಮಾನವ ಮೊದಲು ಕಾರಣನಾಗುತ್ತಿದ್ದಾನೆ ಎಂದು ದೊಡ್ಡ ಸಿದ್ದವನಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹಾಂತೇಶ್ ತಿಳಿಸಿದರು.

ತಾಲೂಕಿನ ದೊಡ್ಡ ಸಿದ್ದವನಹಳ್ಳಿ ಗ್ರಾಮದಲ್ಲಿ ಸೋಮವಾರ ನೆಹರು ಯುವ ಕೇಂದ್ರ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೀಡುವುದರ ಮೂಲಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಂದೊಂದು ದಿನ ಪ್ರಕೃತಿ ಮುನಿದರೆ ವಿಶ್ವವೇ ಸರ್ವನಾಶವಾಗುತ್ತದೆ ಅಂತಹ ದಿನಗಳು ಸಮೀಪಿಸುತ್ತಿವೆ, ಮಾನವ ಅರ್ಥ ಮಾಡಿಕೊಂಡು ಪರಿಸರದೊಂದಿಗೆ ಜೀವನ ಸಾಗಿಸಬೇಕಾಗಿದೆ ಎಂದರು.

ಮಾನವ ಅತಿ ಬುದ್ಧಿವಂತಿಕೆಯಿಂದ ಕಾಡುಗಳನ್ನು ಕಡಿದು ಆಸ್ತಿಗಳನ್ನು ಮಾಡುತ್ತಿದ್ದಾನೆ. ಹಾಗೂ ವೈಜ್ಞಾನಿಕ ಸಂಶೋಧನೆಯಿಂದ ಹೊಸ ಆವಿಷ್ಕಾರಗಳನ್ನು ಮಾಡುವುದರ ಮೂಲಕ ಭೂಮಿಯನ್ನು ಕಲುಷಿತ ಮಾಡಲಾಗುತ್ತಿದೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ಹೆಚ್ಚಿದೆ ಮನುಷ್ಯನ ಅತೀ ಬುದ್ಧಿವಂತಿಕೆಯಿಂದ ಪರಿಸರದ ಮೇಲೆ ಅನೇಕ ರೀತಿಯ ದುಷ್ಪರಿಣಾಮಗಳನ್ನು ಬೀರುತ್ತಿದ್ದಾನೆ ಎಂದು ಹೇಳಿದರು.

ಸಾಲುಮರದ ತಿಮ್ಮಕ್ಕ ತನಗೆ ಮಕ್ಕಳಿಲ್ಲವೆಂದು ಕೊರಗದೆ ರಸ್ತೆ ಬದಿಗಳಲ್ಲಿ ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಸಂರಕ್ಷಿಸಿ ಮಕ್ಕಳಂತೆ ಕಾಪಾಡಿದ್ದಕ್ಕೆ ಇಂದು ಮರಗಳು ಬೆಳೆದು ಹೆಮ್ಮರವಾಗಿ ಅನೇಕ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿವೆ ಜೊತೆಗೆ ಅವರ ಹೆಸರು ದೇಶ-ವಿದೇಶಗಳಲ್ಲಿ ರಾರಾಧಿಸುತ್ತಿದೆ ಇಂತಹ ಮಹನೀಯರ ನಿಯಮಗಳನ್ನು ಪಾಲಿಸಿಕೊಂಡು ಪ್ರತಿಯೊಬ್ಬರೂ ಕೂಡ ಒಂದೊಂದು ಮರಗಳನ್ನು ದತ್ತುಗಳನ್ನು ಪಡೆಯುವುದರ ಮೂಲಕ ಅವುಗಳ ಪಾಲನೆ ಘೋಷಣೆ ಹಾಗೂ ಸಂರಕ್ಷಣೆ ಮಾಡಿದರೆ ಪರಿಸರ ಸಂರಕ್ಷಣೆ ಮಾಡಿದಂತಾಗುತ್ತದೆ ಎಂದರು.

ಮಡಿಲು ಸಂಸ್ಥೆಯ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಮಾತನಾಡಿ ವಿಶ್ವದದ್ಯಾಂತ ಜೂನ್ 5ರಂದು ಪರಿಸರ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದಾರೆ. ಇದರ ಜೊತೆಗೆ ಪ್ರತಿಯೊಬ್ಬರೂ ಕೂಡ ಒಂದೊಂದು ಮರಗಳನ್ನು ನೆಡುವುದರ ಮೂಲಕ ಎಲ್ಲೆಡೆ ಪರಿಸರ ದಿನವನ್ನು ಆಚರಣೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.

ಜೂನ್ 5 ರಂದು ಪರಿಸರ ದಿನಾಚರಣೆಯನ್ನು ಒಂದೇ ದಿನಕ್ಕೆ ಸೀಮಿತ ಮಾಡದೆ ಸಾಧ್ಯವಾದಷ್ಟು ಖಾಲಿ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವುದರ ಮೂಲಕ ಅರಣ್ಯ ಬೆಳೆಸುವುದರ ಕಡೆಗೆ ಗಮನ ಹರಿಸಬೇಕು ಇವತ್ತಿನ ಯುವ ಪೀಳಿಗೆ ಅರಣ್ಯದ ಅಭಿವೃದ್ಧಿಯ ಕಡೆಗೂ ಕೂಡ ಗಮನ ಹರಿಸಬೇಕು ಕೋವಿಡ್ ನಂತಹ ಮಾರಕ ರೋಗಗಳು ದೇಶಕ್ಕೆ ಮತ್ತೆ ಅಪ್ಪಳಿಸಿದರೆ ಮುಂದೊಂದು ದಿನ ಉಸಿರಾಡುವುದಕ್ಕೂ ಕೂಡ ಸಮಸ್ಯೆಯಾಗುತ್ತದೆ.ಆದ್ದರಿಂದ ಯುವ ಪೀಳಿಗೆ ಎಚ್ಚೆತ್ತುಕೊಂಡು ಪರಿಸರ ರಕ್ಷಣೆಯ ಕಡೆಗೆ ಹೆಜ್ಜೆ ಹಾಕಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕನ್ನಡ ಶಿಕ್ಷಕ ಹನುಮಂತಪ್ಪ ರೆಡ್ಡಿ ಮಾತನಾಡಿ ಮಾನವ ಪರಿಸರದಿಂದ ಅನುಕೂಲಗಳನ್ನು ಪಡೆಯುತ್ತಿದ್ದಾನೆ ವಿನಹ ಪರಿಸರ ಸಂರಕ್ಷಣೆ ಮಾಡುವುದಕ್ಕೆ ಮುಂದಾಗುತ್ತಿಲ್ಲ ಎನ್ನುವುದು ಬೇಸರದ ವಿಚಾರವಾಗಿದೆ ಪರಿಸರವನ್ನು ನಾವು ಸಂರಕ್ಷಣೆ ಮಾಡಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂಬ ನಿಯಮಗಳನ್ನು ಯಾರು ಕೂಡ ಪಾಲನೆ ಮಾಡುತ್ತಿಲ್ಲ ಪರಿಸರ ಮಾಲಿನ್ಯದ ಜೊತೆಗೆ ಶಬ್ದ ಮಾಲಿನ್ಯ, ಜಲ ಮಾಲಿನ್ಯ, ವಾಯು ಮಾಲಿನ್ಯದಲ್ಲಿಯೂ ಮಾನವ ಕಲುಷಿತ ಮಾಡುತ್ತಿದ್ದಾನೆ ಎಂದರು.

ಮಡಿಲು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ವತಿಯಿಂದ ಪ್ರೌಢಶಾಲೆ ಯ ಮುಂಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಬೇರೆ ಬೇರೆ ಜಾತಿಯ ಗಿಡಗಳನ್ನು ನೆಡುವುದರ ಮೂಲಕ ಪರಿಸರ ದಿನವನ್ನು ಆಚರಿಸಿದ್ದಾರೆ.

ಈ ಒಂದು ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಗಾಯಿತ್ರಿ, ಪಾರಿಜಾತ,ಮೀನಾಕ್ಷಿ, ಪದ್ಮಾವತಿ, ಚಿದಾನಂದಪ್ಪ, ಹಾಗೂ ದೊಡ್ಡ ಸಿದ್ದವನಹಳ್ಳಿ ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ವಸಂತ್ ಕುಮಾರ್, ಮಡಿಲು ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ,ಕಾರ್ಯಧ್ಯಕ್ಷ ಆನಂದ್, ಸದಸ್ಯರಾದ ದ್ಯಾಮಕುಮಾರ್, ಮಹಾಂತೇಶ್, ಸಂದೀಪ್, ಪ್ರವೀಣ್, ಹಾಗೂ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *