ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸಂರಕ್ಷಿಸಿ
1 min read
ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸಂರಕ್ಷಿಸಿ
ಚಿತ್ರದುರ್ಗ:
ಪರಿಸರಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟಿಕ್ ತ್ಯಜಿಸುವ ಮೂಲಕ ಪರಿಸರ ಸಂರಕ್ಷಿಸಬೇಕು ಎಂದು ಆಂಜನೇಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಬೊಮ್ಮೇನಹಳ್ಳಿ-ಕಡ್ಲೆಗುದ್ದುವಿನಲ್ಲಿ ನೂತನವಾಗಿ ಪ್ರಾರಂಭವಾಗಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜರ ಕಾಲದಲ್ಲಿ ಸ್ವಲ್ಪ ಸ್ವಲ್ಪ ಭೂಮಿ ಅಗೆದರೂ ನೀರು ಸಿಗುತ್ತಿತ್ತು. ಆದರೆ ಇಂದು ಸಾವಿರಾರು ಅಡಿಗಳಷ್ಟು ಅಗೆದರೂ ನೀರು ಸಿಗದಾಗಿದೆ. ಇದಕ್ಕೆ ಮುಖ್ಯ ಕಾರಣ ಮನುಷ್ಯನ ಅತಿಯಾದ ಆಸೆ ಮತ್ತು ತನ್ನ ಬದುಕಿಗಾಗಿ ಪರಿಸರ ನಾಶ ಮಾಡುತ್ತಿರುವುದರಿಂದ ಮತ್ತು ಇದೆ ಭೂಮಿಯಲ್ಲಿ ಒಳ್ಳೆಯ ಖನಿಜಾಂಶಗಳು, ಬಂಗಾರ ಸಿಗುವ ಜಾಗದಲ್ಲಿ ಇಂದು ಪ್ಲಾಸ್ಟಿಕ್ ಸಿಗುತ್ತಿದೆ. ಇದರಿಂದಾಗಿ ನಮ್ಮ ಆರೋಗ್ಯದಲ್ಲಿ ವ್ಯತ್ಯಾಸಗಗಳಾಗುತ್ತಿದೆ ಮತ್ತು ನಾವು ಹೀಗೆಯೇ ಮರಗಿಡಗಳನ್ನು ಕಡಿದರೆ ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿಗೂ ಪರದಾಡುವ ಕಾಲ ದೂರವಿಲ್ಲ ಎಂದು ಹೇಳಿದರು.
ಗೂಳಯ್ಯನಹಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮಂಜುನಾಥ ರೆಡ್ಡಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಋತುಮಾನದ ಪ್ರಕಾರ ಮಳೆ ಆಗದಿರುವುದು ಹಾಗೂ ಮಳೆಗಾಲದಲ್ಲಿ ಬಿಸಿಲನ್ನು, ಚಳಿಗಾಲದಲ್ಲಿ ಮಳೆಯನ್ನು ಕಾಣಬಹುದು ಎಂದು ಹೇಳುತ್ತಾ ಪರಿಸರವನ್ನು ಕಾಪಾಡಿ ಎಂದು ಕರೆ ನೀಡಿದರು.
ಇಂದಿನ ದಿನಗಳಲ್ಲಿ ಪರಿಸರ ನಾಶ ಮಾಡುತ್ತಿರುವುದರಿಂದ ಹವಮಾನ ವೈಪರಿತ್ಯಗಳನ್ನು ಕಾಣಬಹುದಾಗಿದೆ. ಇದರಿಂದಾಗಿ ಸಮಸ್ಯೆ ಎದುರಿಸಬೇಕಾದಿತು. ಹಾಗಾಗಿ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಆವರಣದಲ್ಲಿ ಗಿಡಗಳನ್ನು ನೆಡುವುದರ ಮುಖಾಂತರ ಪರಿಸರವನ್ನು ಉಳಿಸಬೇಕೆಂದು ಹೇಳಿದರು.
ಶ್ರೀಮತಿ ಇಂದಿರಾಗಾಂದಿ ವಸತಿ ಶಾಲೆಯ ಪ್ರಾಂಶುಪಾಲರಾದ ಆರ್. ರಮೇಶ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಅವರಣದಲ್ಲಿ ಪ್ಲಾಸ್ಟಿಕ್ ಅನ್ನು ಬಳಸಬಾರದು ಹಾಗೂ ನೆಡುತ್ತಿರುವ ಸಸಿಗಳಿಗೆ ಸರಿಯಾಗಿ ನೀರನ್ನು ಹಾಕಿ ಬೆಳೆಸೋಣ, ನೀವು ಬೆಳೆಸಿದ ಗಿಡಗಳು ಇನ್ನು ಐದಾರು ವರ್ಷಗಳಲ್ಲಿ ಈ ಸಸಿಗಳು ಬೃಹದಾಕಾರವಾಗಿ ಬೆಳೆದು ಶಾಲಾವರಣವನ್ನು ಹಸಿರುಮಯವಾಗಿಸಲಿವೇ ಮತ್ತು ನೆರಳಾಗಲಿವೆ ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಸ್ತುಬದ್ಧರಾಗಿ ವರ್ತಿಸಬೇಕು ಎಂದು ಹೇಳಿದ ಅವರು, ಪೆÇೀಷಕರಿಗೂ ಮರ ಗಿಡಗಳನ್ನು ಕಡೆಯದಂತೆ ವಿದ್ಯಾರ್ಥಿಗಳು ತಿಳಿಸಬೇಕು ಎಂದು ಕಿವಿ ಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಪೆÇೀಷಕರು ಹಾಜರಿದ್ದರು. ಕಾರ್ಯಕ್ರಮವನ್ನು ಟಿ. ಸಿದ್ದಪ್ಪ ಅವರು ಸ್ವಾಗತಿಸಿದರು. ವಿ.ಎಂ.ಜಯಪ್ಪ ವಂದಿಸಿದರು. ಬಿ. ಪ್ರಕಾಶ್ ನಿರೂಪಿಸಿದರು.