May 2, 2024

Chitradurga hoysala

Kannada news portal

ಚಿತ್ರದುರ್ಗದ 38 ಗ್ರಾಮ ಪಂಚಾಯಿತಿ ಮೀಸಲಾತಿ ಪ್ರಕಟ: ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.

1 min read


ಚಿತ್ರದುರ್ಗದ 38 ಗ್ರಾಮ ಪಂಚಾಯಿತಿ ಮೀಸಲಾತಿ ಪ್ರಕಟ: ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.

ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳ ಎರಡನೇ ಅವಧಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಗುರುವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರ ಅಧ್ಯಕ್ಷತೆಯಲ್ಲಿ ನಿಗದಿಪಡಿಸಲಾಯಿತು.
ನಗರದ ಮಾಳಪ್ಪನಹಟ್ಟಿ ರಸ್ತೆಯ ಶ್ರೀ ತಿರುಮಲ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆಯಿತು.
38 ಗ್ರಾಮ ಪಂಚಾಯಿತಿಗಳ ಪೈಕಿ 13 ಸ್ಥಾನಗಳು ಅನುಸೂಚಿತ ಜಾತಿ, ಇದರಲ್ಲಿ 7 ಮಹಿಳೆ, 10 ಅನುಸೂಚಿತ ಪಂಗಡ, ಇದರಲ್ಲಿ 5 ಮಹಿಳೆ, 15 ಸಾಮಾನ್ಯ, ಇದರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಾತಿ ವರ್ಗೀಕರಣದ ಆಧಾರದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.
ಗ್ರಾಮ ಪಂಚಾಯಿತಿವಾರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ವಿವರ ಇಂತಿದೆ. ಕೋಗುಂಡೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ಕಾಲ್ಗೆರೆ: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಯಳಗೋಡು: ಅಧ್ಯಕ್ಷ ( ಅನುಸೂಚಿತ ಪಂಗಡ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಚಿಕ್ಕಗೊಂಡನಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ತುರುವನೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಕೂನಬೇವು: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಮುದ್ದಾಪುರ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಮಾಡನಾಯಕನಹಳ್ಳಿ: ಅಧ್ಯಕ್ಷ (ಅನುಸೂಚಿತ ಪಂಗಡ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಇಸಾಮುದ್ರ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ಭರಮಸಾಗರ: ಅಧ್ಯಕ್ಷ (ಅನುಸೂಚಿತ ಪಂಗಡ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಕೊಳಹಾಳ್: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಅಳಗವಾಡಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಸಿರಿಗೆರೆ: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಚಿಕ್ಕಬೆನ್ನೂರು: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಐನಹಳ್ಳಿ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಗುಡ್ಡದರಂಗವ್ವನಹಳ್ಳಿ: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಗೋನೂರು: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಬೆಳಗಟ್ಟ: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ದ್ಯಾಮವ್ವನಹಳ್ಳಿ: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಮದಕರಿಪುರ: ಅಧ್ಯಕ್ಷ (ಅನುಸೂಚಿತ ಪಂಗಡ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಮೆದೇಹಳ್ಳಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಮಠದಕುರುಬರಹಟ್ಟಿ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಚೋಳಗಟ್ಟ: ಅಧ್ಯಕ್ಷ (ಅನುಸೂಚಿತ ಪಂಗಡ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಲಕ್ಷ್ಮಿಸಾಗರ; ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಆಲಘಟ್ಟ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಬೊಮ್ಮೇನಹಳ್ಳಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಹಿರೇಗುಂಟನೂರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಸಿದ್ದಾಪುರ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ದೊಡ್ಡಸಿದ್ದವ್ವನಹಳ್ಳಿ: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಜೆ.ಎನ್.ಕೋಟೆ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಇಂಗಳದಾಳ್: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಹುಲ್ಲೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ಜಾನುಕೊಂಡ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಭೀಮಸಮುದ್ರ: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಅನ್ನೇಹಾಳ್: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಸೊಂಡೆಕೊಳ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಗೊಡಬನಹಾಳ್: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ಬ್ಯಾಲಹಾಳ್: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ).

ಗ್ರಾಮ ಪಂಚಾಯಿತಿ ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು.

About The Author

Leave a Reply

Your email address will not be published. Required fields are marked *