April 20, 2024

Chitradurga hoysala

Kannada news portal

ಸಂಸ್ಕಾರವಂತರಿಂದ ಸಮಾಜ ಸೇವೆ.

1 min read

ಸಂಸ್ಕಾರವಂತರಿಂದ ಸಮಾಜ ಸೇವೆ

ವರದಿ:ಕಾವೇರಿ ಗೂಳಿಹಟ್ಟಿ

ಚಿತ್ರದುರ್ಗಹೊಯ್ಸಳ ನ್ಯೂಸ್:

ಹೊಸದುರ್ಗ:
ಹೊಸದುರ್ಗ ಪಟ್ಟಣದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಶಿರಡಿ ಸಾಯಿಬಾಬಾ ಟ್ರಸ್ಟ್, ಗಣೇಶ ಸದನ ಟ್ರಸ್ಟ್ ಹೊಸದುರ್ಗ ಹಾಗೂ ಮತ್ತಿತರೆ ಸಂಘ-ಸಂಸ್ಥೆಗಳ ಸಂಯುಕ್ತಾಕ್ಷರದಲ್ಲಿ ಪಟ್ಟಣದ ಹುಳಿಯಾರ್ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು ಕನ್ನಡಕಗಳ ವಿತರಣೆ ಕಾರ್ಯಕ್ರಮವನ್ನು,ಶಿರಡಿ ಸಾಯಿಬಾಬಾ ಟ್ರಸ್ಟ್ ಅಧ್ಯಕ್ಷ ಹಂಜಿ ಶಿವಸ್ವಾಮಿ ಉದ್ಘಾಟನೆ ಮಾಡಿದ್ದಾರೆ.

ಇಂದು ಈ ಒಂದು ಶಿಬಿರದಲ್ಲಿ ಒಟ್ಟು 280 ಮಂದಿನ ತಪಾಸಣೆಗೆ ಒಳಪಡಿಸಲಾಗಿದ್ದು.ಅವರಲ್ಲಿ 130 ಮಂದಿಯನ್ನು ಚಿಕಿತ್ಸೆಗಾಗಿ ಆಯ್ಕೆ ಮಾಡಲಾಗಿದೆ.ಇದೇ ಸಂಧರ್ಭದಲ್ಲಿ 100 ಮಂದಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ.

ಈ ಸಂದರ್ಭದಲ್ಲಿ ಸೀತಾ ರಾಘವ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಡಿ ಆದಿರಾಜಯ್ಯ, ನಿರ್ದೇಶಕ ಗಂಗಾಧರ್ ಗುಪ್ತ, ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *