May 3, 2024

Chitradurga hoysala

Kannada news portal

ಹಲಸು ಇಟ್ಟ ಅರಣ್ಯ ಅಧಿಕಾರಿಗಳು: ಚಳ್ಳೆಹಣ್ಣು ತಿನಿಸಿದ ಚಾಲಾಕಿ ಕರಡಿಗಳು.

1 min read

ಹಲಸು ಇಟ್ಟ ಅರಣ್ಯ ಅಧಿಕಾರಿಗಳು: ಚಳ್ಳೆಹಣ್ಣು ತಿನಿಸಿದ ಚಾಲಾಕಿ ಕರಡಿಗಳು.

ವರದಿ:ಕಾವೇರಿ ಗೂಳಿಹಟ್ಟಿ

ಚಿತ್ರದುರ್ಗಹೊಯ್ಸಳ/ನ್ಯೂಸ್

ಹೊಸದುರ್ಗ:
ಹೊಸದುರ್ಗ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಎಷ್ಟೇ ಪ್ರಯತ್ನ ಪಟ್ಟರು ಸೆರೆ ಆಗಲಿಲ್ಲ ಚಾಲಾಕಿ ಕರಡಿಗಳು, ಕರಡಿಗಳು ಪ್ರತ್ಯಕ್ಷವಾದ ದಿನದಿಂದ ಹಿಡಿದು ಇವತ್ತಿನ ತನಕ ಕಾರ್ಯಾಚರಣೆ ನಡೆಸಿದರು ಕರಡಿಗಳು ಮಾತ್ರ ಪತ್ತೆಯಾಗಿಲ್ಲ.

ಪಟ್ಟಣದ ಗೌಸಿಯ ನಗರ ಬಡಾವಣೆಯಲ್ಲಿ ಶನಿವಾರ ಕರಡಿಗಳು ಮಧ್ಯಾಹ್ನ ಕಾಣಿಸಿಕೊಂಡ ಎರಡು ಕರಡಿಗಳು ಸ್ಥಳೀಯರು ಜೋರಾಗಿ ಕೆಕೆ ಹಾಕಿದ್ದರಿಂದ ಅವುಗಳು ಭೈರಪ್ಪನ ಬೆಟ್ಟ ಹತ್ತಿವೆ. ಇದೀಗ ಅಲ್ಲಿಯೂ ಕೂಡ ಅಕ್ಕ ಪಕ್ಕದ ಮನೆಯವರಿಗೆ ಕರಡಿಗಳು ಪ್ರತ್ಯಕ್ಷವಾಗಿ ಗಾಬರಿ ಹುಟ್ಟಿಸಿವೆ. ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ ಸಾರ್ವಜನಿಕರು ಕರಡಿಗಳನ್ನು ಹಿಡಿಯಲು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಕರಡಿ ಹಿಡಿಯಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಚಳ್ಳೆ ಹಣ್ಣು ತಿನಿಸಿ, ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಗದೆ ಕರಡಿಗಳು ತಪ್ಪಿಸಿಕೊಂಡಿವೆ.

ಕಳೆದ ಆರು ತಿಂಗಳಿಂದ ಪಟ್ಟಣದ ಭಗೀರಥ ಬಡಾವಣೆ, ಗೌಸಿಯ ನಗರ, ಇಂಡಸ್ಟ್ರಿಯಲ್ ಏರಿಯಾ, ವಿದ್ಯಾನಗರ,ಕುಂಚಿಟಿಗ ಮಠ, ಹುಳಿಯಾರ್,ಕೋಟೆ ಬಡಾವಣೆ, ಭೈರಪ್ಪನ ಬೆಟ್ಟ, ಹಾಗೂ ಚನ್ನಸಮುದ್ರದ ಬೆಟ್ಟ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿ ಕರಡಿಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ಓಡಾಡುತ್ತಿರುವ ಎರಡು ಕರಡಿಗಳು ಜನರನ್ನ ನಿದ್ದೆಗೆಡುತ್ತಿವೆ. ಕರಡಿಗಳ ಓಡಾಟದಿಂದ ಜನರು ಭಯಭೀತರಾಗಿದ್ದಾರೆ. ಮಾರುಕಟ್ಟೆ,ಜಮೀನುಗಳಿಗೆ ಹೋಗುವವರು ಹೆದರುವಂತಾಗಿದೆ, ಶಾಲಾ ಕಾಲೇಜುಗಳಿಗೆ ಹೋಗುವವರು ಆತಂಕಕ್ಕೀಡಾಗಿದ್ದಾರೆ.

ಕರಡಿಗಳ ಪತ್ತೆಗೆ ಡ್ರೋನ್ ಮೂಲಕ ಪ್ರಯತ್ನಿಸಿದರು ಪತ್ತೆ ಆಗುತ್ತಿಲ್ಲ. ಭಾನುವಾರ ಸಂಜೆ ಗುಡ್ಡದ ಬಂಡಿಗಳ ಮೇಲೆ ಹಲಸಿನ ಹಣ್ಣುಗಳನ್ನು ಹಾಕಲಾಗಿತ್ತು ಹಾಗೂ ಜೇನುತುಪ್ಪವನ್ನು ಸವರುವ ಕೆಲಸವು ನಡೆದಿದೆ. ಈ ವಾಸನೆಗೆ ಕರಡಿಗಳು ಪ್ರತ್ಯಕ್ಷವಾಗಬಹುದು ಎಂಬ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಬೋನ್ ತಂದು ಕಾಯುತ್ತಿದ್ದಾರೆ. ಆದರೆ ಕರಡಿಗಳು ಮಾತ್ರ ಕಾಣೆಯಾಗಿವೆ.

ಕರಡಿಗಳು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸರಿಯಾಗಿದೆ. ನಾಪತ್ತೆಯಾದ ಕರಡಿಗಳಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಹುಡುಕಾಟ ಮುಂದುವರೆದಿದೆ. ಈ ಹಿಂದೆಯೂ ಅನೇಕ ಬಾರಿ ಕರಡಿಗಳು ಹೊಸದುರ್ಗ ಸುತ್ತಮುತ್ತ ದಾಗುಂಡಿ ಇಟ್ಟು ಅನೇಕರ ಮೇಲೆ ದಾಳಿ ಮಾಡಿರುವ ಪ್ರಕರಣಗಳು ನಡೆದಿವೆ. ಆದರೆ ಇಂತಹ ಪ್ರಕರಣಗಳು ಮತ್ತೆ ಇನ್ಯಾವತ್ತೂ ನಡೆಯದಿರಲಿ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಭಾನುವಾರ ಕಾಣೆಯಾದ ಕರಡಿಗಳು ಇದುವರೆಗೂ ಪತ್ತೆಯಾಗಿಲ್ಲ, ಪುರದ ರಸ್ತೆಯಲ್ಲಿರುವ ಗುಡ್ಡದಲ್ಲಿ ಸಂಜೆ 7 ಗಂಟೆಗೆ ಕಾಣಿಸಿಕೊಂಡಿದ್ದೆ ಕೊನೆ ಇದುವರೆಗೂ ಕೈಗೆ ಸಿಕ್ಕಿಲ್ಲ. ಸೋಮವಾರ ಬೆಳಿಗ್ಗೆಯಿಂದಲೂ ಹುಡುಕಾಟ ನಡೆಸಿದ್ದು, ಪುರದ ಗ್ರಾಮದ ಸುತ್ತಮುತ್ತ ಜನರಿಗೆ ಕರಡಿ ಕಂಡರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ ಎಂದು ಹೇಳಲಾಗಿದೆ. ಮತ್ತೆ ಕಾಣಿಸಿಕೊಂಡರೆ, ಅರೆವಳಿಕೆ ಮದ್ದು ನೀಡಿ, ಬೇರೆ ಕಡೆ ಸ್ಥಳಾಂತರಿಸಲಾಗುವುದು. ಈ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಸುಜಾತ.ಕೆ
ವಲಯ ಅರಣ್ಯ ಅಧಿಕಾರಿ

About The Author

Leave a Reply

Your email address will not be published. Required fields are marked *