April 17, 2024

Chitradurga hoysala

Kannada news portal

ಆಗಸ್ಟ್ 01 ರಂದು ಶ್ರೀ ಡಾ. ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ : ತಹಶೀಲ್ದಾರ್ ಎಂ‌.ವಿ ರೂಪ.

1 min read

ಆಗಸ್ಟ್ 01 ರಂದು ಶ್ರೀ ಡಾ. ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ : ತಹಶೀಲ್ದಾರ್ ಎಂ‌.ವಿ ರೂಪ.

ವರದಿ:ಎನ್.ಕುಮಾರ್ ಸ್ವಾಮಿ,

ಚಿತ್ರದುರ್ಗ ಹೊಯ್ಸಳ ಸುದ್ದಿ:

ಮೊಳಕಾಲ್ಮೂರು:

ಮೊಳಕಾಲ್ಮೂರು ತಾಲೂಕ ಕಚೇರಿಯಲ್ಲಿ ಚಿತ್ತರಗಿ ಇಳಕಲ್ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಡಾ. ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು 01 ಆಗಸ್ಟ್ 1 ರಂದು ಬೆಳಿಗ್ಗೆ 9:30ಕ್ಕೆ ಹಳೆ ತಾಲ್ಲೂಕು ಕಚೇರಿ ಆವರಣದಿಂದ ಶ್ರೀಗಳ ಭಾವಚಿತ್ರ ಮೆರವಣಿಗೆ ಹಾಗೂ 10:30ಕ್ಕೆ ತಾಲೂಕು ಕಚೇರಿ ಆವರಣದಲ್ಲಿ ಕಾರ್ಯಕ್ರಮವನ್ನು ಶ್ರೀ ಮಠ ಮತ್ತು ತಾಲೂಕು ಆಡಳಿತ ವತಿಯಿಂದ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಹಶೀಲ್ದಾರ್ ಎಂ‌.ವಿ ರೂಪರವರು ತಿಳಿಸಿದರು.

ಚಿತ್ತರಗಿ ಇಳಕಲ್ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಡಾ. ಮಹಂತ ಶಿವಯೋಗಿಗಳು

ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಸಿದ್ದಯ್ಯನ ಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖ ಮಠದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಇಳಕಲ್ ಮಹಾಂತಪ್ಪನವರು 50 ವರ್ಷಗಳಿಂದ ನಾಡಿನ ತುಂಬೆಲ್ಲ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಮಹಾಂತಜೋಳಿಗೆ ಹಿಡಿದು ಜನರಲ್ಲಿರುವ ದುಷ್ಟಗಳನ್ನು ತಮ್ಮ ಜೊಳಿಗೆ ಗೆ ಹಾಕಿಕೊಳ್ಳುವ ಮೂಲಕ ಲಕ್ಷಾಂತರ ಜನರ ಜಾಗೃತಿ ಮೂಡಿಸಿದ್ದಾರೆ ಹಾಗಾಗಿ ಶ್ರೀಗಳ ಹುಟ್ಟುಹಬ್ಬವನ್ನು ಸರ್ಕಾರದ ವತಿಯಿಂದ ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ ಸಿರಸ್ದಾರ್, ಪಟ್ಟಣ ಪಂಚಾಯತಿ ಸದಸ್ಯ ಎಸ್.ಖಾದರ್ ಶ್ರೀಮಠದ ಕಾರ್ಯದರ್ಶಿ ಪಿ.ಆರ್ ಕಾಂತರಾಜ್, ಪದವಿ ಪೂರ್ವ ಕಾಲೇಜು ಪ್ರಾಚಾರ್ಯರು ಗೋವಿಂದಪ್ಪ, ನಿವೃತ್ತ ಮುಖ್ಯ ಶಿಕ್ಷಕ ಎಂ.ಡಿ ಲತೀಫ್, ಸಾಬ್ ರೇಷ್ಮೆ ಸೀರೆ ಉದ್ಯಮಿಗಳು ರಮೇಶ್ ವಾನ್ಜ್ರೆ, ವೀರಶೈವ ಮುಖಂಡರಾದ ವಿನಯ್ ಕುಮಾರ್, ಕೆ.ಬಸಣ್ಣ ಕೋನಸಾಗರ ನಾಗೇಂದ್ರ ಮತ್ತಿತರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *