May 8, 2024

Chitradurga hoysala

Kannada news portal

ಡಾ|| ತಿಮ್ಮಯ್ಯ ವರದಿ ಅನ್ವಯ ಜಾರಿಗೆ ಬಂದಿದ್ದು SFC ಅನುದಾನ: ಸಂಘದ ಅವಿರತ ಹೋರಾಟದ ಫಲ

1 min read

ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘ(ರಿ)

ನಮ್ಮ ಸಂಘದ ಅವಿರತ ಹೋರಾಟದ ಫಲವಾಗಿ

ಡಾ||ತಿಮ್ಮಯ್ಯ ವರದಿ ಅನ್ವಯ ಜಾರಿಗೆ ಬಂದಿದ್ದು SFC ಅನುದಾನ

ಹಿರಿಯೂರು:

ರಾಜ್ಯ ಸರ್ಕಾರಿ ನೌಕರರಿಗೆ, ಮಧ್ಯಂತರ ಪರಿಹಾರ ಮಂಜೂರಾತಿ ಆದೇಶ ಸಂಖ್ಯೆ:ಆಇ/ಎಸ್.ಆರ್.ಪಿ/2023 ಬೆಂಗಳೂರು ದಿನಾಂಕ: 01-03-2023ನ್ನು ಸರಿಯಾಗಿ ಗಮನಿಸಿದ್ದಲ್ಲಿ, ಆರ್ಥಿಕ ಇಲಾಖೆಯು ಅದೇ ಆದೇಶದಲ್ಲಿ ಮನ್ಸಿಪಲ್ ನೌಕರರಿಗೆ ಮತ್ತು ನಿವೃತ್ತ(ವಿಶ್ರಾಂತ) ಪೌರ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಮಧ್ಯಂತರ ಪರಿಹಾರದ ಸೌಲಭ್ಯವನ್ನು ಒದಗಿಸಬಹುದಾಗಿತ್ತು ಅಥವಾ ನಗರಾಭಿವೃದ್ಧಿ ಇಲಾಖೆಯು ಪ್ರತ್ಯೇಕ ಆದೇಶ ಹೊರಡಿಸಿ ಈ ಸೌಲಭ್ಯವನ್ನು ವಿಸ್ತರಿಸಬಹುದಾಗಿತ್ತು.

ಪ್ರಸ್ತಾವನೆಯಲ್ಲಿ ರಾಜ್ಯ ಸರ್ಕಾರೀ ನೌಕರಿರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾನಿಲಯಗಳ ಬೊಧಕೇತರ ಸಿಬ್ಬಂದಿಗಳಿಗೆ ಮಧ್ಯಂತರ ಪರಿಹಾರವನ್ನು ಸರ್ಕಾರ ಮಂಜೂರು ಮಾಡಲು ನಿರ್ಧರಿಸಿರುತ್ತದೆ ಎಂದು ಸರಿಯಾಗಿ ಮತ್ತು ಸ್ಫಷ್ಠವಾಗಿ ವಿವರಿಸಲಾಗಿದೆ, ಆದರೆ ಆದೇಶದಲ್ಲಿನ ಕಂಡಿಕೆ 6 ರಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯ ನೌಕರರಿಗೆ ಸೌಲಭ್ಯವನ್ನು ಮಂಜೂರು ಮಾಡಿರುವುದರಿಂದ ಉದ್ದೇಶಿತ ವೆಚ್ಚವನ್ನು ಸ್ಥಳೀಯ ಸಂಸ್ಥೆಗಳೇ ಭರಿಸತಕ್ಕದ್ದು ಎಂದು ಆದೇಶವಿರುತ್ತದೆ.

ವಿಶೇಷವಾಗಿ ಈ ಆದೇಶದಲ್ಲಿ:-

ನಿವೃತ್ತ ಮುನ್ಸಿಪಲ್ ನೌಕರರ ಮತ್ತು ಕುಟುಂಬ ಪಿಂಚಣಿದಾರರ ಬಗ್ಗೆ ಯಾವುದನ್ನು ಹೇಳಿಲ್ಲ. ಇದರ ಅರ್ಥ ನಾವುಗಳು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ

ಆದರೆ ಆರ್ಥಿಕ ಇಲಾಖೆ ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಸರಿಯಾದ ಮಾಹಿತಿ ನೀಡಿಲ್ಲವಾದ್ದರಿಂದ ನಾವುಗಳು ಈ ಸೌಲಭ್ಯವನ್ನು ಪಡೆಯಲು ವಂಚಿತರಾಗಿದ್ದೇವೆ.

ಕರ್ನಾಟಕ ರಾಜ್ಯ ಸರ್ಕಾರವು, ಪ್ರತೀ ವರ್ಷದಂತೆ, ಈ ವರ್ಷವೂ ಸಹ ತನ್ನ ಬಜೆಟ್‌ ನಲ್ಲಿ ಮುನ್ಸಿಪಲ್ ನೌಕರರಿಗೆ ಶೇ.100% ರಷ್ಟು ವೇತನಕ್ಕಾಗಿ ಹಣವನ್ನು ಹಂಚಿಕೆ ಮಾಡಿರುತ್ತದೆ, ಪೌರ ಸೇವಾ ನೌಕರರು 1997 ರಿಂದಲೇ SFC ಅನುದಾನದಿಂದ ವೇತನ ಮತ್ತು ಇತರೆ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದೇ ಬಜೆಟ್ ನಲ್ಲಿ ಪಿಂಚಣಿ ವಂತಿಕೆ ಹಣವನ್ನೂ ಸಹ, ಮುನ್ಸಿಪಲ್ ನಿವೃತ್ತ ನೌಕರರ ಪರವಾಗಿ ಹಣವನ್ನು ಹಂಚಿಕೆ ಮಾಡಿಕೊಂಡು ಬರುತ್ತಿದೆ.

ಆದರೆ ಈಗ ಮಧ್ಯಂತರ ಪರಿಹಾರವನ್ನು ಮಾತ್ರ ಸ್ಥಳೀಯ ಸಂಸ್ಥೆಗಳೇ ಭರಿಸತಕ್ಕದ್ದು ಎಂದಿರುವುದು ದುರದೃಷ್ಠಕರ ಸಂಗತಿ. ಈ ಹಿಂದೆ ಸರ್ಕಾರದ ಅಧೀನ ಕಾರ್ಯದರ್ಶಿಗಳಿಂದ ದಿನಾಂಕ:03-05-2013 ರಂದು 6ನೇ ವೇತನ ಆಯೋಗದ ವೇತನ ಶ್ರೇಣಿಗಳನ್ನು ನಗರ ಸ್ಥಳೀಯ ಸಂಸ್ಥೆಗಳೀಗೆ ಅನ್ವಯಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರತ್ಯೇಕ ಆದೇಶ ಹೊರಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ರಚಿಸಲಾಗಿರುವ ಪುರಸಭೆ(ಅಧಿಕಾರಿಗಳ ಮತ್ತು ನೌಕರರ ನೇಮಕಾತಿ) ನಿಯಮಗಳು 2010 ನಿಯಮದ ಉದೃತ ಭಾಗದೊಂದಿಗೆ ವಿವರಿಸುತ್ತಾ  ನಗರ ಸ್ಥಳೀಯ ಸಂಸ್ಥೆಗಳ ನೌಕರರಿಗೂ ಯಥಾ ವತ್ತಾಗಿ ಅನ್ವಯವಾಗುವ ಹಿನ್ನೆಲೆಯಲ್ಲಿ ಈಗ ನಗರ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಅನ್ವಯಿಸಿ ಪ್ರತ್ಯೇಕ ಆದೇಶ ಹೊರಡಿಸುವ ಅವಶ್ಯಕತೆ ಇರುವುದಿಲ್ಲವೆಂದು ಸ್ಫಷ್ಠವಾಗಿ ತಿಳಿಸಿರುತ್ತಾರೆ.

ಹೀಗಿದ್ದರೂ ಸಹ ಆರ್ಥಿಕ ಇಲಾಖೆಯು ಮದ್ಯಂತರ ಪರಿಹಾರ ನೀಡುವ ಆದೇಶದಲ್ಲಿ ಮಲತಾಯಿ ಧೋರಣೆ ತೋರಿರುವುದು ದುರದೃಷ್ಠಕರ ಸಂಗತಿ ಮತ್ತು ಈ ಬಗ್ಗೆ ನಗರಾಭಿವೃದ್ದಿ ಇಲಾಖೆ ಸೂಕ್ತ ಸ್ಪಷ್ಠನೆ ನೀಡಿ ತನ್ನ ಇಲಾಖಾ ನೌಕರರಿಗೆ ಮಧ್ಯಂತರ ಪರಿಹಾರ ದೊರಕಿಸಿ ಕೊಡದೇ ಇವುದು ನಾಚಿಕೆ ಗೇಡಿನ ಸಂಗತಿ.

ಈ ಎಲ್ಲಾ ವಿಚಾರಗಳು ಆರ್ಥಿಕ ಇಲಾಖೆಗೆ ಗೊತ್ತಿದ್ದರೂ ಸಹ, ಪೌರ ಸೇವಾ ನೌಕರರಿಗೆ ಸ್ಥಳೀಯ ಸಂಸ್ಥೆಗಳ, ಆದಾಯದಲ್ಲಿ ಭರಿಸುವುದು ಎಂದು ಆದೇಶಿಸಿರುವುದು, ಎಷ್ಟು ಸರಿ ………?

ಈ ಸಮಸ್ಯೆಯನ್ನು ಆರ್ಥಿಕ ಇಲಾಖೆ ಬಗೆ ಹರಿಸದೆ ಇರುವುದರಿಂದ ಪೌರ ಸೇವಾ ನೌಕರರುಗಳು ಮತ್ತು ನಿವೃತ್ತ ಪೌರ ಸೇವಾ ನೌಕರರುಗಳು ಮತ್ತು ಕುಟುಂಬ ಪಿಂಚಣಿದಾರರು ಅತಂತ್ರ ಪರಿಸ್ಥಿತಿಯಲ್ಲಿದ್ದೇವೆ.

ಈ ಕುರಿತು KMAS ಅಧಿಕಾರಿಗಳ ಸಂಘ ಮೌನ ವಹಿಸಿದ್ದಾರೆ ಏಕೆ ? ಎಂಬುದು ನನ್ನ ಪ್ರಶ್ನೆ.

ಆರ್ಥಿಕ ಇಲಾಖೆಯ ಆದೇಶದ ಮೇರೆಗೆ ನಗರಾಭಿವೃದ್ಧಿ ಇಲಾಖೆ, ಯಥಾವತ್ತಾಗಿ ಪೌರಾಡಳಿತ ನಿರ್ದೇಶಕರಿಗೆ ಪತ್ರ, ಬರೆಯುವುದು ಎಷ್ಟು ಸರಿ?

ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ, ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಂಡು ಆರ್ಥಿಕ ಇಲಾಖೆಗೆ ಮರು ಪ್ರಸ್ತಾವನೆ ಸಲ್ಲಿಸುವುದು ಸೂಕ್ತ ಹಾಗೂ ಸಮಂಜಸ.

ಕರ್ನಾಟಕ ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ನಿವೃತ್ತ ವೇತನದಾರರು ಮತ್ತು ಪಿಂಚಣಿ ದಾರರಿಗೆ 6ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಯನ್ನು ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ವಿಸ್ತರಿಸಿದಂತೆ, ದಿನಾಂಕ:01.04.2018 ರಾಜ್ಯ ಸಂಚಿತ ನಿಧಿಯಿಂದ ಬರಿಸಲು ಆದೇಶ ನೀಡಲಾಗಿತ್ತು, ಇದೇ ಸೌಲಭ್ಯವನ್ನು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಪೌರ ಸೇವಾ ನೌಕರರು ಯಥಾವತ್ತಾಗಿ ವಿಸ್ತರಿಸಿ ಅವರುಗಳಿಗೆ ಈ ಸೌಲಭ್ಯವನ್ನು SFC ವೇತನ ನಿಧಿಯಿಂದ ಪಡೆಯುತ್ತಿದ್ದಾರೆ.

ರಾಜ್ಯ ಸ್ಥಳೀಯ ಸಂಸ್ಥೆಗಳ ಪೌರ ಸೇವಾ ನೌಕರುಗಳು, ಸರ್ಕಾರದ ಎಲ್ಲ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಹಾಗೂ ಕಠಿಣ ಪರಸ್ಥಿತಿಗಳಲ್ಲಿ ಏನನ್ನೂ ಲೆಕ್ಕಿಸದೇ ಭಾಗವಹಿಸಿ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಬೇರೆ ಯಾವುದೇ ಇಲಾಖೆಯಲ್ಲಿ ಈ ತರಹದ ಕೆಲಸಗಳು ಇರುವುದಿಲ್ಲ, ಇಷ್ಟೆಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೂ ಸಹ ಅವರುಗಳಿಗೆ ಸಲ್ಲಬೇಕಾದ ವಿವಿಧ ಸೌಲಭ್ಯಗಳನ್ನು ಪಡೆಯಬೇಕಾದರೆ ಹರ ಸಾಹಸ ಮಾಡಬೇಕಾಗಿದೆ.

ಆರ್ಥಿಕ ಇಲಾಖೆಯಿಂದ ಬಂದ ಪ್ರಸ್ತಾವನೆಯನ್ನು, ಯಥಾವತ್ತಾಗಿ ನಗರಾಭಿವೃದ್ಧಿ ಇಲಾಖೆಯು ಅಂದೇ ಪೌರಾಡಳಿತ ನಿರ್ದೇಶಕರಿಗೆ ಕಳಿಸುವುದು, ನಿರ್ದೇಶಕರು ಯಥಾವತ್ತಾಗಿ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಕಳಿಸುವುದು, ಇದು ಈಗ ರೂಢಿಯಲ್ಲಿರುವ ಪದ್ಧತಿ.

ನಿಕಟ ಪೂರ್ವ ನಿರ್ದೇಶಕರಾಗಿದ್ದ ಶ್ರೀ ನಿಲಯ ಮಿತಾಶ್, ಶ್ರೀ ಡಾ|| ಆರ್. ವಿಶಾಲ್ ಅವರುಗಳು ಈಗ ಇದ್ದಿದ್ದರೆ ನೇರವಾಗಿ ಆರ್ಥಿಕ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಕಂಡು ಸಮಸ್ಯೆಯನ್ನ ಬಗೆಹರಿಸುತ್ತಿದ್ದರು.

ಗಟ್ಟಿಯಾದ ಸಂಘಗಳು ಇಲ್ಲದೇ ಇರುವುದರಿಂದ ಪೌರ ಸೇವಾ ನೌಕರರು ಸಂಕಷ್ಟದಲ್ಲಿದ್ದಾರೆ. 

ಇದು ನನ್ನ ವೈಯಕ್ತಿಕ ಅನಿಸಿಕೆ
ಇನ್ನು ಮುಂದಾದರೂ KMAS ಸಂಘ ಮತ್ತು ಪೌರ ಸೇವಾ ನೌಕರರ ಸಂಘಗಳು ನೌಕರರ ಹಿತ ಕಾಪಾಡುತ್ತಾರೆ ಎಂಬ ಆಶಾ ಭಾವನೆಯೊಂದಿಗೆ ನನ್ನ ಮಾತಿಗೆ ವಿರಾಮ ಹೇಳುತ್ತೇನೆ….

(ಎಲ್‌. ನಾರಾಯಣಾಚಾರ್)
ರಾಜ್ಯಾಧ್ಯಕ್ಷರು,ಕರ್ನಾಟಕ ರಾಜ್ಯ ನಿವೃತ್ತ ಪೌರನೌಕರರ ಮತ್ತು ಪೌರಕಾರ್ಮಿಕರ ಸಂಘ,
ಹಿರಿಯೂರು
ದಿನಾಂಕ: 27-07-2023

About The Author

Leave a Reply

Your email address will not be published. Required fields are marked *