May 20, 2024

Chitradurga hoysala

Kannada news portal

ಹೊಸದುರ್ಗ ಡಯಾಲಿಸಿಸ್ ಕೇಂದ್ರ ನಾಳೆಯಿಂದ ಬಂದ್ – ಚಿಕಿತ್ಸೆಗಾಗಿ ರೋಗಿಗಳ ಪರದಾಟ

1 min read

ಹೊಸದುರ್ಗ ಡಯಾಲಿಸಿಸ್ ಕೇಂದ್ರ ನಾಳೆಯಿಂದ ಬಂದ್ – ಚಿಕಿತ್ಸೆಗಾಗಿ ರೋಗಿಗಳ ಪರದಾಟ

ವರದಿ:ಕಾವೇರಿಮಂಜಮ್ಮನವರ್
ಚಿತ್ತದುರ್ಗ ಹೊಯ್ಸಳ ನ್ಯೂಸ್/

ಹೊಸದುರ್ಗ ಸುದ್ದಿ: ಆಗಸ್ಟ್‌ 01
ಡಯಾಲಿಸಿಸ್‌ ಕೇಂದ್ರವನ್ನು ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದು,ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಜೀವಿನಿ ಎಂಬ ಸಂಸ್ಥೆಯು ಡಯಾಲಿಸಿಸ್‌ ಕೇಂದ್ರದ ನಿರ್ವಹಣೆಯ ಹೊಣೆಯನ್ನು ಹೊತ್ತಿದೆ.ಡಯಾಲಿಸಿಸ್‌ ಕೇಂದ್ರದಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ, ಪಿಎಫ್‌ ಸೇರಿದಂತೆ ಯಾವುದೇ ನ್ಯಾಯೋಚಿತ ಸೌಲಭ್ಯವನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಲು ನಾಳೆ ಆಗಸ್ಟ್ 2 ರಂದು ರಾಜ್ಯಾದ್ಯಂತ ಬೆಂಗಳೂರಿನಲ್ಲಿ ಡಯಾಲಿಸಿಸ್‌ ಕೇಂದ್ರಗಳ ನೌಕರರು,ಅನಿರ್ದಿಷ್ಟ ಅವಧಿ ಪ್ರತಿಭಟನೆ ಮಾಡುವ ಉದ್ದೇಶದಿಂದ ಆಸ್ಪತ್ರೆಗೆ ಬಂದ ರೋಗಿಗಳು ನಾಳೆ ಇಂದ ಡಯಾಲಿಸಿಸ್ ಕೇಂದ್ರ ತೆರೆಯದ ಹಿನ್ನೆಲೆಯಲ್ಲಿ ಕೇಂದ್ರಗಳ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ರೋಗಿಗಳು ಪ್ರತಿ ದಿನ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್‌ ಕೇಂದ್ರಕ್ಕೆ ಆಗಮಿಸಿದ ರೋಗಿಗಳು ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿರುವ ರೋಗಿಗಳು ಡಯಾಲಿಸಿಸ್‌ ಕೇಂದ್ರ ಬಂದ್‌ ಮಾಡುವ ಬಗ್ಗೆ ಕೇಳಿ ಶಾಕ್‌ಆಗಿದ್ದಾರೆ.

ನಾಳೆಯಿಂದ ಸಿಬ್ಬಂದಿಗಳು ಪ್ರತಿಭಟನಾ ನಿರತರಾಗಲಿರುವ ಸುದ್ದಿ ಕೇಳಿದ ರೋಗಿಗಳು ಮುಂದೇನು ಎಂದು ದಿಗ್ಭ್ರಾಂತರಾಗಿ ಕೇಂದ್ರದ ಮುಂದೆ ಅಸಹಾಯಕತೆಯಿಂದ ಕೂರುವಂತ ಆಗಿದೆ.

ತಾಲೂಕು ಆಸ್ಪತ್ರೆಯಲ್ಲಿ ಕೆಲ ವರ್ಷಗಳಿಂದ ಡಯಾಲಿಸಿಸ್‌ ಕೇಂದ್ರವನ್ನು ನಡೆಸಲಾಗುತ್ತಿತ್ತು.
ಆಸ್ಪತ್ರೆಯಲ್ಲಿ ಮೂರು ಡಯಾಲಿಸಿಸ್ ಯಂತ್ರಗಳಲ್ಲಿ 2 ಯಂತ್ರ ನಿಂತು ಸುಮಾರು ಒಂದು ವರ್ಷ ಮೇಲಾಗಿದೆ ಇರುವಂತಹ ಒಂದು ಡಯಾಲಿಸಿಸ್‌ ಯಂತ್ರಗಳ ಮೂಲಕ ಪ್ರತಿದಿನ 2 ಮಂದಿಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ.
ತಾಲೂಕಿನಲ್ಲಿ 150 ಕ್ಕೂ ಹೆಚ್ಚು ಮಂದಿ ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿದ್ದು, ಇವರೆಲ್ಲರೂ ಸರದಿಯ ಮೇಲೆ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ.

ಆದರೆ ಇದೀಗ ಡಯಾಲಿಸಿಸ್‌ ಕೇಂದ್ರ ಬಂದ್‌ ಆಗಲಿದೆ ಹಾಗಾಗಿ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಿ ಎಂದು ಅಲ್ಲಿನ ಸಿಬ್ಬಂದಿಗಳು ಹೇಳುತ್ತಾರೆ.
ನಾವು ಬಡವರು ನಮ್ಮ ಕೈಯಲ್ಲಿ ಅಷ್ಟು ಹಣ ಇಲ್ಲ ನಮ್ಮ ಜೀವದ ಜತೆ ಸರ್ಕಾರ ಆಟವಾಡುವುದು ಸರಿಯಲ್ಲ ಎಂದು ರೋಗಿಗಳು ಆಗ್ರಹಿಸಿದ್ದಾರೆ.

ಒಟ್ಟಾರೆ ಡಯಾಲಿಸಿಸ್ ಘಟಕದಲ್ಲಿ ಕಾರ್ಯನಿರ್ವಹಿಸುವಂತಹ ಗುತ್ತಿಗೆ ಆಧಾರದ ಮೇಲಿನ ಸಿಬ್ಬಂದಿಗಳಿಗೆ ನೀಡಬಹುದಾದ ಸಾಮಾನ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಿ.ಸಿಬ್ಬಂದಿಗಳು ಹೀಗೆ ಪ್ರತಿಭಟನೆ ಘಟಕದ ಕೇಂದ್ರದ ಬಾಗಿಲನ್ನು ಮುಚ್ಚಿದರೆ ನಮ್ಗಳಿಗೆ ಕಷ್ಟವಾಗುತ್ತಿದೆ ಹಾಗಂತ ಸಿಬ್ಬಂದಿಗಳಿಗೆ ಕೆಲಸ ನಿರ್ವಹಿಸಿ ಅಂತಲೂ ಹೇಳಲು ಸಾಧ್ಯವಿಲ್ಲ ಸಿಬ್ಬಂದಿಗಳಿಗೆ ಸಲ್ಲಬೇಕಾದ ಸಂಬಳ.ಪಿಎಫ್ ಸರ್ಕಾರ ನೀಡಬೇಕೆಂದು ರೋಗಿಯೊಬ್ಬರು ಆಗ್ರಹಿಸಿದ್ದಾರೆ.

About The Author

Leave a Reply

Your email address will not be published. Required fields are marked *