ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಜಾರಿಗೊಳ್ಳಲು ಸೂಕ್ತ ಕ್ರಮ- ಶಾಸಕ ಬಿ.ಜಿ ಗೋವಿಂದಪ್ಪ
1 min read



ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಜಾರಿಗೊಳ್ಳಲು ಸೂಕ್ತ ಕ್ರಮ- ಶಾಸಕ ಬಿ.ಜಿ ಗೋವಿಂದಪ್ಪ
ವರದಿ: ಕಾವೇರಿಮಂಜಮ್ಮನವರು,
ಹೊಸದುರ್ಗ, :
ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಜಾರಿಗೊಳಿಸುವ ನಿಟ್ಟಿನಲ್ಲಿ ಸಮಸ್ಯೆ ಗುರುತಿಸಿ ಪರಿಹರಿಸಲು ಮುಂದಾಗಿದ್ದೇವೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.
ಹೊಸದುರ್ಗ ತಾಲ್ಲೂಕಿಗೆ ಹೊಂದಿಕೊಂಡಿರುವಂತೆ ಕಡೂರು ತಾಲ್ಲೂಕಿನ ಸಮಸ್ಯೆಯಿರುವ ಭೂಸ್ವಾಧೀನ ಪಡಿಸಿಕೊಳ್ಳುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆ ಅತ್ಯಂತ ಮಹತ್ವದ ಯೋಜನೆ, ಈ ಯೋಜನೆಯು ಕೃಷಿಕರ ಪಾಲಿಗೆ ವರದಾನವಾಗಲಿದ್ದು ತುಮಕೂರು ನಾಲೆಯ ಕಾಮಗಾರಿಯು ಕಡೂರು ತಾಲ್ಲೋಕಿನಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಹೊಸದುರ್ಗ ಕ್ಷೇತ್ರದ ಶಾಸಕರಾದ ಬಿ.ಜಿ.ಗೋವಿಂದಪ್ಪನವರು ಕಡೂರು ಕ್ಷೇತ್ರದ ಶಾಸಕರಾದ ಕೆ.ಆನಂದ್ ಅವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಅಜ್ಜಂಪುರದ ವೈ ಜಂಕ್ಷನ್ ಸ್ಥಳದಿಂದ ಕಡೂರು ತಾಲ್ಲೋಕಿನಲ್ಲಿ ಸಮಸ್ಯೆಯಿರುವ ಭೂಸ್ವಾಧೀನ ಪಡಿಸಿಕೊಳ್ಳುವ ಸ್ಥಳಕ್ಕೆ ಭೇಟಿ ನೀಡಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಬಗ್ಗೆ ಚರ್ಚೆ ನಡೆಸಿ ಕಡೂರು ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ವಿಶ್ವೇಶರಯ್ಯ ಜಲನಿಗಮದ ವ್ಯವಸ್ಥಾಪಕರಾದ ಶ್ರೀ ಸಣ್ಣಚಿತ್ತಯ್ಯ, ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು..