May 20, 2024

Chitradurga hoysala

Kannada news portal

ಪಂಚಮಸಾಲಿ ಸಮಾಜ ಸಮಾಜದ ಅಭಿವೃದ್ಧಿಗೆ ಸದಾ ನಿಮ್ಮ ಜೊತೆ ನಾನಿರುತ್ತೇನೆ : ಶಾಸಕ ಬಿಜಿ ಗೋವಿಂದಪ್ಪ

1 min read

 

ಅಂಗದ ಮೇಲೆ ಲಿಂಗವನ್ನಿಟ್ಟು ಪೂಜೆ ಧ್ಯಾನ ಮಾಡಿದರೆ ಅಪಮೃತ್ಯು ದೂರ : ವಚನಾನಂದ ಸ್ವಾಮೀಜಿ

ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದಿಂದ ಇಷ್ಟು ಲಿಂಗ ಪೂಜೆ ಮತ್ತು ಶಾಸಕರಿಗೆ ಸನ್ಮಾನ ಸಮಾರಂಭ

ವರದಿ:ಕಾವೇರಿ ಮಂಜಮ್ಮನವರ,

CHITRADURG AHOYSALA NEWS/

ಹೊಸದುರ್ಗ:

ಮುಂಜಾನೆ ಅಂಗದ ಮೇಲೆ ಲಿಂಗವನ್ನಿಟ್ಟು ಪೂಜೆ ಧ್ಯಾನ ಮಾಡಿದರೆ ಅಪಮೃತ್ಯು ದೂರವಾಗುವುದು ಎಂದು ಹರಿಹರದ ಪಂಚಮಸಾಲಿ ಗುರು ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಹೊಸದುರ್ಗ ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಆಯೋಜಿಸಲಾಗಿದ್ದ ಇಷ್ಟ ಲಿಂಗ ಪೂಜೆ ಹಾಗೂ ಶಾಸಕರಿಗೆ ಸನ್ಮಾನ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿದರು.ಇಂದು ಜನರು ಖಿನ್ನತೆಗೆ ಒಳಗಾಗಿ ರೋಗಕ್ಕೆ ತುತ್ತಾಗುತ್ತಿದ್ದಾರೆ ಶಿವಯೋಗ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುವ ಮೂಲಕ ಬದುಕು ಸುಂದರಗೊಳ್ಳಲಿದೆ ಎಂದರು.

ವಚನಗಳಲ್ಲಿ ಸಮಸ್ಯೆಗಳಿಗೆ ಸಮಾಧಾನವಿದೆ ಪ್ರಶ್ನೆಗಳಿಗೆ ಉತ್ತರವಿದೆ ಆತ್ಮೋದ್ಧಾರಕ್ಕೆ ಬೇಕಾದ ಎಲ್ಲಾ ಅಂಶಗಳು ಇವೆ ದಿನನಿತ್ಯ ವಚನಗಳನ್ನು ಓದುವುದರಿಂದ ಜೀವನ ಪಾವನಗೊಳ್ಳಲಿದೆ ಎಂದರು.
ಪಂಚಮಸಾಲಿಗಳು ಕೊಡುವ ಕೈಗಳೆ ಹೊರತು ಬೇಡುವ ಕೈಗಳಲ್ಲ ಕೃಷಿಕಾಯಕ ಮಾಡುತ್ತಿದ್ದ ಶೂದ್ರ ನಾವು ಪಂಚಮಸಾಲಿಗಳಾದವು ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ವೀರಶೈವ ಮಠಗಳನ್ನು ಬೆಳೆಸಿದವರೇ ಪಂಚಮಸಾಲಿಗಳು 12 ನೇ ಶತಮಾನದಲ್ಲಿ ಬಸವಣ್ಣನ ಪ್ರಥಮ ಅನುಯಾಯಿಗ ಗಳನ್ನುವ ಪರಂಪರೆ ಹೊಂದಿರುವನಾವು ಸಂಘಟಿತರಾಗಬೇಕಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಬಿಜಿ ಗೋವಿಂದಪ್ಪ ಪಂಚಮಸಾಲಿ ಸಮಾಜ ಸಮಾಜದ ಅಭಿವೃದ್ಧಿಗೆ ಸದಾ ನಿಮ್ಮ ಜೊತೆ ನಾನಿರುತ್ತೇನೆ ಸಮಾಜದ ಬೇಡಿಕೆಯಾದ ಸಮುದಾಯ ಭವನ ನಿರ್ಮಾಣ ವನ್ನು ನನ್ನ ಐದು ವರ್ಷದ ಅವಧಿ ಒಳಗೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು.

ಯಾವುದೇ ಸಮುದಾಯ ಸಂಘಟಿತರಾದಾಗ ಮಾತ್ರ ರಾಜಕೀಯ ಶಕ್ತಿ ಪಡೆಯಲು ಸಾಧ್ಯ. ಪಂಚಮಿ ಸಾಗಲಿ ಸಮುದಾಯ ರಾಜಕೀಯವಾಗಿ ನನ್ನ ಕೈ ಹಿಡಿದಿದೆ ಸಮುದಾಯದ ಅಭಿವೃದ್ಧಿಗೆ ಕಂಕಣಬದ್ಧನಾಗಿರುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಘಟಕದ ಅಧ್ಯಕ್ಷ ದಯಾನಂದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಗೌರವಾಧ್ಯಕ್ಷ ಮೃತ್ಯುಂಜಯಪ್ಪ, ಒಪ್ಪತ್ತಿನ ಸ್ವಾಮಿ ಸಹಕಾರ ಸಂಘದ ಅಧ್ಯಕ್ಷ ಸಿದ್ದರಾಮೇಶ್, ಕಾರ್ಯದರ್ಶಿ ಧನು ಶಂಕರ್, ಹಾಲೇಶ್, ಜಗದೀಶ್, ಪ್ರಕಾಶ್ ಮತ್ತಿತರದ್ದರು

ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗಭ್ಯಾಸ ನಡೆಸಲಾಯಿತು. ಇಷ್ಟಲಿಂಗ ಪೂಜೆ ನಡೆಸಲಾಯಿತು

About The Author

Leave a Reply

Your email address will not be published. Required fields are marked *