ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಸ್ವಾಮೀಜಿ ಗಳಿಂದ ಅದ್ದೂರಿ ಚಾಲನೆ
1 min read
ವಿಧಾನ ಪರಿಷತ್ ಸದಸ್ಯ ನವೀನ್, ಸೇರಿದಂತೆ ಸಮಿತಿ ಸದಸ್ಯರು ಭಾಗಿ
ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಸ್ವಾಮೀಜಿ ಗಳಿಂದ ಅದ್ದೂರಿ ಚಾಲನೆ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಿತ್ರದುರ್ಗ:
ರಾಜ್ಯದಲ್ಲಿಯೇ ಹೆಸರುವಾಸಿಯಾಗಿರುವ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಅದ್ದೂರಿಯಾಗಿ ಚಾಲನೆಯನ್ನು ಚಿತ್ರದುರ್ಗ ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಗಳು, ಹೊಸದುರ್ಗದ ಶ್ರೀ ಶಾಂತವೀರ ಮಹಾಸ್ವಾಮೀಜಿಗಳು,ಶ್ರೀ ಶಿವಲಿಂಗಾನಂದ ಶ್ರೀಗಳು ಮತ್ತು ಶ್ರೀ ಯಾದವಾನಂದ ಮಹಾ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಪೂಜಾ ಕಾರ್ಯಕ್ರಮಗಳ ಮೂಲಕ ಭಾನುವಾರ ಚಾಲನೆ ನೀಡಲಾಯಿತು.
ಸೆಪ್ಟೆಂಬರ್ 18 ರಂದು ಗಣಪತಿ ಪ್ರತಿಷ್ಠಾಪನೆಯಾಗಲಿದ್ದು, ಅಕ್ಟೋಬರ್ 8 ರಂದು ಶೋಭಾಯಾತ್ರೆ ನಂತರ ವಿಸರ್ಜನೆಯಾಗುತ್ತದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ನವೀನ್, ಹಿಂದೂ ಮಹಾಗಣಪತಿಯ ಗೌರವ ಅಧ್ಯಕ್ಷರಾದ ಷಡಕ್ಷರಪ್ಪ ಕೊಂಡ್ಲಹಳ್ಳಿ, ಸಮಿತಿಯ ಅಧ್ಯಕ್ಷ ಜಿ.ಎಂ.ಸುರೇಶ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್,ಸಮಿತಿಯ ಮಾರ್ಗದರ್ಶಕರಾದ ಬದ್ರಿನಾಥ್,ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಪಿ. ರುದ್ರೇಶ್, ಜಿಲ್ಲಾ ಸಹ ಕಾರ್ಯದರ್ಶಿ ಕೇಶವ್, ಭಜರಂಗದಳದ ಜಿಲ್ಲಾ ಸಂಯೋಜಕರು ಸಂದೀಪ್, ದಕ್ಷಿಣ ಪ್ರಾಂತದ ಪ್ರಮುಖರು ಓಂಕಾರ್, ಜಿಲ್ಲಾ ಮುಖಂಡರಾದ ಅಶೋಕ್, ವಿಶ್ವ ಹಿಂದೂ ಪರಿಷದ್ ನಗರ ಅಧ್ಯಕ್ಷ ಶ್ರೀನಿವಾಸ್, ನಗರ ಸಹ ಕಾರ್ಯದರ್ಶಿ ರಂಗಸ್ವಾಮಿ, ಗ್ರಾಮಾಂತರ ಅಧ್ಯಕ್ಷ ಶಶಿಧರ್,ಗ್ರಾಮಾಂತರ ಕಾರ್ಯದರ್ಶಿ ಶ್ರೀನಿವಾಸ್,ಸಂಯೋಜಕ ರಂಗಸ್ವಾಮಿ, ನಗರಸಭೆ ಸದಸ್ಯರಾದ ನವೀನ್ ಚಾಲುಕ್ಯ, ಸುರೇಶ್, ಶಶಿಧರ್, ಸಮಿತಿಯ ಸದಸ್ಯ ಪ್ರಶಾಂತ್ ಅಪ್ಪಾಜಿ ಪರಿಸರ, ವಿಪುಲ್ ಜೈನ್ ಮತ್ತಿತರರು ಇದ್ದರು.