ಹಿಂದುಳಿದ ಮತ್ತು ದಲಿತ ಸಮುದಾಯಗಳ ಮಠಾಧೀಶರು: ಮುಖ್ಯಮಂತ್ರಿ ಭೇಟಿ
1 min read
ಹಿಂದುಳಿದ ಮತ್ತು ದಲಿತ ಸಮುದಾಯಗಳ ಮಠಾಧೀಶರು: ಮುಖ್ಯಮಂತ್ರಿ ಭೇಟಿ
ವರದಿ:ಗಿರೀಶ್ ಕೋಟೆ,
ವೆಬ್ ಸಂಪಾದಕ:ಸಿ.ಎನ್.ಕುಮಾರ್,
ಚಿತ್ರದುರ್ಗ ಹೂಯ್ಸಳ ನ್ಯೂಸ್/
ಬೆಂಗಳೂರು:
ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟ (ರಿ) ಚಿತ್ರದುರ್ಗ ಮಠಾಧೀಶರು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಸಮುದಾಯಗಳ ಮನವಿಗಳನ್ನು ಸಲ್ಲಿಸಿ ಚರ್ಚಿಸಿದರು
1) ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಜಿ
ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿಗುರುಪೀಠ
ಚಿತ್ರದುರ್ಗ
2) ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಜಿ
ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಚಿತ್ರದುರ್ಗ
3)ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿ ಶ್ರೀ ಜಗದ್ಗುರು
ಕುಂಚಿಟಿಗ ಮಹಾಸಂಸ್ಥಾನ ಮಠ ಕುಂಚಗಿರಿ ಹೊಸದುರ್ಗ
ಚಿತ್ರದುರ್ಗ ಜಿಲ್ಲೆ
4)ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನನಂದ ಮಹಾಸ್ವಾಮಿಜಿ ವಾಲ್ಮೀಕಿ
ಗುರುಪೀಠ ರಾಜನಹಳ್ಳಿ ಹರಿಹರ ದಾವಣಗೆರೆ ಜಿಲ್ಲೆ
5)ಜಗದ್ಗುರು ಶ್ರೀ ಪುರುಷೋತ್ತಮನಂದಪುರಿ ಮಹಾಸ್ವಾಮೀಜಿ
ಭಗೀರಥಗುರುಪೀಠ ಮಧುರೆ ಹೊಸದುರ್ಗ ತಾಲ್ಲೂಕು ಚಿತ್ರದುರ್ಗ
ಜಿಲ್ಲೆ
6)ಜಗದ್ಗುರು ಶ್ರೀಈಶ್ವರಾನಂದಪುರಿ ಮಹಾಸ್ವಾಮೀಜಿ,
ಕನಕಗುರುಪೀಠ ಹೊಸದುರ್ಗ
7)ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮಿಜಿ
ಯಾದವ ಗುರುಪೀಠ ಚಿತ್ರದುರ್ಗ
8) ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮಿಜಿ ನಾರಾಯಣ
ಗುರುಪೀಠ ಶಿವಮೊಗ್ಗ ಜಿಲ್ಲೆ
9) ಜಗದ್ಗುರು ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮೀಜಿ
ಹಡಪದ ಅಪ್ಪಣ್ಣ ಗುರುಪೀಠ ತಂಗಡಗಿ ವಿಜಯಪುರ ಜಿಲ್ಲೆ
ಹಿಂದುಳಿದ ಮತ್ತು ದಲಿತ ಸಮುದಾಯಗಳ 20 ಕ್ಕೂ ಹೆಚ್ಚು ಮಂದಿ ಮಠಾಧೀಶರು ಶುಕ್ರವಾರ ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದೂ ಸೇರಿದಂತೆ ಮಠ, ಸಮುದಾಯ ಭವನಗಳನ್ನು ನಿರ್ಮಿಸಲು ಮುಖ್ಯಮಂತ್ರಿಗಳ ನೆರವು ಕೋರಿದರು.