April 20, 2024

Chitradurga hoysala

Kannada news portal

ತಾಲ್ಲೂಕಿನ ಕೆಲ ಸರ್ಕಾರಿ ಕಚೇರಿಗಳಲ್ಲಿ ಲೋಪದೋಷಗಳಿವೆ ಅಧಿಕಾರಿಗಳು ಬದಲಾಯಿಸಿಕೊಳ್ಳಿ : ಶಾಸಕ ಬಿ ಜಿ ಗೋವಿಂದಪ್ಪ

1 min read

ಕ.ರಾ.ಸ.ನೌ.ಸಂ.ಶಾಖೆಯ ಸುವರ್ಣ ಮಹೋತ್ಸವ-ಶಾಸಕರಿಗೆ ಸನ್ಮಾನ

ತಾಲ್ಲೂಕಿನ ಕೆಲ ಸರ್ಕಾರಿ ಕಚೇರಿಗಳಲ್ಲಿ ಲೋಪದೋಷಗಳಿವೆ ಅಧಿಕಾರಿಗಳು ಬದಲಾಯಿಸಿಕೊಳ್ಳಿ : ಶಾಸಕ  ಬಿ ಜಿ ಗೋವಿಂದಪ್ಪ

ವರದಿ:ಕಾವೇರಿಮಂಜಮ್ಮನವರು,

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಹೊಸದುರ್ಗ:

ತಾಲ್ಲೂಕಿನ ಕೆಲ ಸರ್ಕಾರಿ ಕಚೇರಿಗಳಲ್ಲಿ ಲೋಪದೋಷಗಳಿವೆ ಅಧಿಕಾರಿಗಳು ಬದಲಾಯಿಸಿಕೊಳ್ಳಿ : ಶಾಸಕ ಬಿ ಜಿ ಗೋವಿಂದಪ್ಪ ಕಿವಿಮಾತು ತಾಲ್ಲೂಕಿನ ಕೆಲ ಸರ್ಕಾರಿ ಕಚೇರಿಗಳಲ್ಲಿ,ನೌಕರರು ಕಾರ್ಯನಿರ್ವಹಿಸುವುದರಲ್ಲಿ ಲೋಪದೋಷಗಳಿವೆ ಸಂಬಂಧಪಟ್ಟವರು ತಿದ್ದಿಕೊಳ್ಳಿ.ನೌಕರರ ಸೇವೆ ಬಡವರಿಗೆ ತಲುಪಬೇಕು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸುವರ್ಣ ಮಹೋತ್ಸವ ಅಂಗವಾಗಿ ಪಟ್ಟಣದ ಹೇಮಾವತಿ ಸಮುದಾಯ ಭವನ ಆವರಣದಲ್ಲಿ ಆಯೋಜಿಸಿದ್ದ ‘ಕ.ರಾ.ಸ.ನೌ ಸಂಘದ ಸಭಾಭವನ ಶಂಕುಸ್ಥಾಪನೆ ಮತ್ತು ಸರ್ವಸದಸ್ಯರ ಮಹಾಸಭೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಹೊಸದುರ್ಗ ಶಾಖೆ ಸಂಘಟನೆ ಉಳಿಸಿಕೊಂಡು ಬಂದಿದೆ.ನಿಮ್ಮ ಹಾಗೂ ತಾಲ್ಲೂಕಿನ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಮುನ್ನಡೆಸಿಕೊಂಡೋಗಿ ನೌಕರರ ಸೇವೆ ಬಡವರಿಗೆ ತಲುಪಬೇಕು.ಕಚೇರಿಗಳಲ್ಲಿ ಬಡವರ ಕೆಲಸ ಕಾರ್ಯಗಳು ತುರ್ತಾಗಿ ಮಾಡಿಕೊಡಬೇಕು.ಕೆಲ ಇಲಾಖೆ ನೌಕರರು ಸೇವೆ ಅಗತ್ಯವಿಗಿಬೇಕು.ಹಾಗಾಗಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳಿ ,ಕಚೇರಿಗೆ ಸಮಯಕ್ಕೆ ಸರಿಯಾಗಿ ಬಂದು,ಕಾರ್ಯ ನಿರ್ವಹಿಸಿ ಕಾರ್ಯ ಚಟುವಟಿಕೆಗಳನ್ನು ಸಂಪೂರ್ಣ ವಾಗಿ ಮುಗಿಸಿಕೊಳ್ಳಿ.ಜನರ ನೋವು ನಿವಾರಣೆಗಾಗಿ ಕಟುವಾದ ಶಬ್ದದಲ್ಲ ಮಾತಾಡಿರುತ್ತೇನೆ. ಜನರಿಗೆ ಸೇವೆ ಆತ್ಮೀಯವಾಗಿ ಮುಟ್ಟಿಸಬೇಕು.ನೌಕರರಿಗೆ ಹಿಂಸೆ ಕೊಟ್ಟಿಲ್ಲ,ವಸೂಲಿ ಮಾಡಿಲ್ಲ.ಸಭಾಭವನ 3-4 ತಿಂಗಳಲ್ಲಿ ಮುಗಿಸಿ,ಸಾರ್ವಜನಿಕ ಸೇವೆಗೆ ಬಿಟ್ಟುಕೊಡಲಾಗುವುದು.ಎಲ್ಲರೂ ಪ್ರಯೋಜನ ಪಡೆದುಕೊಳ್ಳಬಹುದು. ಮಕ್ಕಳು ದಾರಿತಪ್ಪಿವೆ. ಸಾಂಸ್ಕೃತಿಕ ಸಂಸ್ಕಾರ ಇಲ್ಲ.ಪೋಲಿಸರ ಮೂಲಕ ಹಾಸ್ಟೆಲ್ ಶಿಕ್ಷಣ ಕಲ್ಪಿಸಬೇಕಾಗಿದೆ.

ಸಿಇಟಿ ಗೆ ಹೊರಗಡೆ ಹೋಗುತ್ತಿದ್ದಾರೆ.ಹಣಕಾಸಿನ ತೊಂದರೆ ವಿದ್ಯಾಭ್ಯಾಸ ತೊಡಕು.ಕಾರ್ಯಕ್ರಮ ರೂಪಿಸಿ,ಜಾರಿಗೆ ತನ್ನಿ ಪೂರಕ ಅವಕಾಶ ಕಲ್ಪಿಸಲಾಗುವುದು.ಪ್ರತಿ ವರ್ಷ ಹಣಕೊಡಿಸಿ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು.ಎಂದು ಕೆಲವು ಬಡ ವಿದ್ಯಾರ್ಥಿಗಳ ಪರಿಸ್ಥಿತಿ ನೆನೆದು ಕೆಲ ಹೊತ್ತು ವೇದಿಕೆಯಲ್ಲಿ ಶಾಸಕರು ಭಾವುಕರಾದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಮಾತನಾಡಿ, ಶಾಸಕರು ಕಾರ್ಯಾಂಗದ ಒಟ್ಟಾಗಿ ಹೋದರೆ ಪ್ರಗತಿ ಸಾಧ್ಯ ನಿಕಟ ಸಂಬಂಧ ಸಂಪರ್ಕ. ಯಾರಿಗೂ ತೊಂದರೆ ಕೊಡದೇ ಕೆಲಸ ನಿರ್ವಹಣೆ. ಸರ್ಕಾರದ ಹಂತದಲ್ಲಿ ಧ್ವನಿ ಎತ್ತಬೇಕು.ಹೆಚ್ಚಿನ ಸಂಪತ್ತು ಸಂಪನ್ಮೂಲ ಹೊಂದಿರೋದು ಹೊಸದುರ್ಗದಲ್ಲಿ ಪ್ರತಿ ವರ್ಷ ಸಾಮಾನ್ಯ ಸಭೆ ನಡೆಸಬೇಕು.ಕೋವಿಡ್ನಲ್ಲಿ ₹200 ಕೋಟಿ ಹಣ ಸರ್ಕಾರಕ್ಕೆ ಕೊಟ್ಟಿದ್ದೇವೆ, ಸಾಮಾಜಿಕ ಕಳಕಳಿ ಕಾರ್ಯಕ್ರಮ ನೀಡಿದ್ದೇವೆ. ಏಳನೇ ವೇತನ ಆಯೋಗ ನವೆಂಬರ್ ತಿಂಗಳಲ್ಲಿ ಸರ್ಕಾರಕ್ಕೆ ವರದಿಸಲ್ಲಿಸಿ ಶೇ 30-40 ರಷ್ಟು ವೇತನ ಹೆಚ್ಚಳಕ್ಕೆ ಮಂಡಿಸಬೇಕು. ವೇತನ ಆಯೋಗ ವಿಶ್ವಾಸ ಮಾಡಲಿದೆ.ವರದಿ ಬಂದ ನಂತರ ನಿಶ್ಚಿತ ಗುರಿ ಮುಟ್ಟುತ್ತೇವೆ.
ಹೋರಾಟ ಮಾಡಲು ಯಾವಾಗಲೂ ಸಂದರ್ಭ ಬಹಳ ಮುಖ್ಯ ಚುನಾವಣೆ ಮುನ್ನ ಹೋರಾಟಕ್ಕಿಳಿದರೆ ಸರ್ಕಾರದ ಶೇ.17 ಮಧ್ಯಂತರ ಆದೇಶವಿರುತ್ತದೆ ಎನ್.ಪಿ.ಎಸ್. ಹೆಲ್ತ್ ಕೇರ್ ಕುಟುಂಬ ಆರೋಗ್ಯ. ಈ ತಿಂಗಳ ಅಂತ್ಯದಲ್ಲಿ ಉಚಿತ ಆರೋಗ್ಯ ತಪಾಸಣಾ ತರಲು ಪ್ರಯತ್ನ ಮಾಡ್ತಿದ್ದೇವೆ. 22 ಲಕ್ಷ ಕುಟುಂಬಗಳಿಗೆ ಅನುಕೂಲ ವಾಗಲಿದೆ.ವರ್ಗಾವಣೆ, ಕೃಪಾಂಕ, ರೆವಿನ್ಯೂ, ಸಮಸ್ಯೆ ಇದ್ದು, ಸರ್ಕಾರದ ಹಂತಕ್ಕೆ ತಂದು ಕಾರ್ಯನಿರ್ವಹಿಸಲು ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ಒತ್ತಡ ತಂದು ಕಾರ್ಯ ರೂಪಕ್ಕೆ ತರಲಾಗುವುದು. ನವೆಂಬರ್ ಡಿಸೆಂಬರ್ ವೇತನ ಆಯೋಗ. ಎನ್.ಪಿ.ಎಸ್‌ ಬಗ್ಗೆ ಧ್ವನಿ ಎತ್ತಳಿದ್ದೇವೆ.ಪ್ರತಿ ವರ್ಷ ಒಬ್ಬರು ಅಧ್ಯಕ್ಷರು ಆಗತಿದ್ದು ಮುಂಬರುವ ದಿನಗಳಲ್ಲಿ ಸಮರ್ಥ ನಾಯಕತ್ವ ಬೇಕು. ಗೊಂದಲಗಳಿಗೆ ಅವಕಾಶವಿಲ್ಲದೆ ಐದು ವರ್ಷ ಒಬ್ಬರೇ ಅಧ್ಯಕ್ಷರು ಆಗಬೇಕು ಮುಂದಿನ ವರ್ಷ ಬೇರೆಯವರು ಅಧ್ಯಕ್ಷರು ಆದಾಗ ಹಣವಿರುವುದಿಲ್ಲ ದೇವರ ಹುಂಡಿ ಹಣವಾಗಿ ಉಳಿಸಬೇಕು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್ ಲಕ್ಷ್ಮಯ್ಯ ಮಾತನಾಡಿ, ಹೊಸದುರ್ಗದಲ್ಲಿ ಸರ್ಕಾರಿ ನೌಕರರ ಸಂಘ 1972 ರಲ್ಲಿ ಆರಂಭಗಿದ್ದು 50 ಜನರಿಂದ ಆರಂಭವಾದ ಸಂಘ‌ ಇಂದು ಈ ಮಟ್ಟದ ಸಾಧನೆಯನ್ನ ನೋಡಿದೆ ಕ್ರೀಡೆಗೆ ಡೋನೆಷನ್,ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್ ನೀಡಿದ್ದು ಸಂಘದ ಏಳ್ಗೆಗಾಗಿ ಶ್ರಮಿಸಿಸಿದ್ದೇವೆ.

ಈ ವೇಳೆ ಶಾಂತಪ್ಪ ಎಂ.ಆರ್,ಜಿಲ್ಲಾಧ್ಯಕ್ಷ ಕೆ.ಟಿ ತಿಮ್ಮಾರೆಡ್ಡಿ, ರಾಜ್ಯ ಉಪಾಧ್ಯಕ್ಷ ಮೋಹನ್ ಕುಮಾರ್ ,ಬಿಇಒ ಸೈಯದ್ಮೋಸಿನ್,ಖಜಾನೆ ಅಧಿಕಾರಿ ವೀರಭದ್ರಪ್ಪ, ಎಇಇ ಪ್ರಕಾಶ್, ಕಾರ್ಯಪಾಲಕ ಅಭಿಯಂತರ ಪ್ರಕಾಶ್, ಎಇಇ ಕುಡಿಯುವ ನೀರು ಸರಬರಾಜು ಇಲಾಖೆ ಧನಂಜಯ್, ರಾಜ್ಯ ಗೌರವಾಧ್ಯಕ್ಷ ಲೋಕೇಶ್, ಪರಿಷತ್ ಸದಸ್ಯ ಭಾಗೇಶ್, ಖಜಾಂಚಿ ವಿರೇಶ್, ಎಸ್. ನಿಂಗೆಗೌಡ, ಶಿವಕುಮಾರ್, ಎಸ್. ಈರಣ್ಣ, ಮಲ್ಲಿಕಾರ್ಜುನಪ್ಪ, ಹೊರಕೇರಪ್ಪ, ಎಂ. ಬಿ ತಿಪ್ಪೇಸ್ವಾಮಿ, ಬಿ. ಏಕಾಂತಪ್ಪ, ಎಂ.ಆರ್.ಸಿ. ಮೂರ್ತಿ, ಎ.ಎನ್‌ ಮಲ್ಲಪ್ಪ, ಬಿ.ಕೆ ವೆಂಕಟೇಶ್, ಪಿ. ಓರಗಲ್ಲಪ್ಪ, ಎಂ. ನಾರಾಯಣಪ್ಪ, ಪಿ. ಅಶೋಕ್, ಶ್ರೀನಿವಾಸ್, ಕಿರಣ್, ಕ್ರೀಡಾಧಿಕಾರಿ ಮಹಾಂತೇಶ್, ವೀರಭದ್ರಪ್ಪ, ಪ್ರೌಢಶಾಲೆಯ ಶಿಕ್ಷಕರು ಸಂಘ, ಪ್ರಕಾಶ್, ಆಂಜಿನಪ್ಪ, ರಾಘವೇಂದ್ರ ಪ್ರಸಾದ್.
ರಾಘವೇಂದ್ರ ಪ್ರಸಾದ್, ಈಶ್, ಸೈಯದ್ ಮೋಸಿನ್, ಕಿರಣ್, ಅಭಿಲಾಷ, ವೀರಭದ್ರಪ್ಪ, ವೆಂಕಟೇಶ್ ಮೂರ್ತಿ, ಪ್ರಕಾಶ್, ಧನಂಜಯ್, ನಿರಂಜನಮೂರ್ತಿ, ಸುನಿಲ್, ದಯಾನಂದ್, ಶಶಿಧರ್, ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *