ಸದಾಶಿವ ಆಯೋಗ ವರದಿ ಸದ್ಯದಲ್ಲೇ ಜಾರಿ ಸಚಿವ ಮುನಿಯಪ್ಪ.
1 min readಹೊಸದುರ್ಗದಲ್ಲಿ ಬಿ ಜಿ ಅಭಿಮಾನಿ ಬಳಗದಿಂದ ನೂತನ ಸಚಿವ ಮತ್ತು ಶಾಸಕರಿಗೆ ಅಭಿನಂದನಾ ಸಮಾರಂಭ.
ಸದಾಶಿವ ಆಯೋಗ ವರದಿ ಸದ್ಯದಲ್ಲೇ ಜಾರಿ ಸಚಿವ ಮುನಿಯಪ್ಪ.
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಹೊಸದುರ್ಗ :
ಸೋಷಿತ ವರ್ಗಗಳು ಪ್ರಗತಿ ಕಾಣಬೇಕಾದರೆ ಸದಾಶಿವ ಆಯೋಗ ಜಾರಿಗೆ ಬರಬೇಕು. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಆಯೋಗದ ವರದಿ ಜಾರಿ ಮಾಡಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಚುನಾವಣೆ ಹತ್ತಿರ ಬಂದ ಕಾರಣ ಮಾಡಲಾಗಲಿಲ್ಲ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚೆ ನಡೆಸಿದ್ದು ಶೀಘ್ರವೇ ಸದಾಶಿವ ಆಯೋಗದ ವರದಿ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಪಟ್ಟಣದ ಅಶೋಕ ರಂಗಮಂದಿರದಲ್ಲಿ ಭಾನುವಾರ ಹೊಸದುರ್ಗ ತಾಲ್ಲೂಕು ಮಾದಿಗ ಸಮಾಜದ ಬಿ ಜಿ ಅಭಿಮಾನಿ ಬಳಗದ ವತಿಯಿಂದ ಅಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತಂದರೇ ಭೋವಿ ಕೊರಮ ಕೊರಚ ಲಂಬಾಣಿ ಹಾಗೂ ಇನ್ನಿತರ ಜನಾಂಗಗಳಿಗೆ ಮೋಸ ಮಾಡಿದಂತಾಗುತ್ತದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲ ಸಮುದಾಯಗಳ ಸ್ಥಿತಿಗತಿ ಮತ್ತು ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಸದಾಶಿವ ಆಯೋಗವನ್ನು ಜಾರಿ ಮಾಡಿಯೇ ತೀರುತ್ತೇವೆ ಎಂದು ಸಮುದಾಯದ ಜನರಿಗೆ ಭರವಸೆ ನೀಡಿದರು.
ಕಳೆದ ಬಾರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ, ಅನ್ನಭಾಗ್ಯ ಮತ್ತು ಇತರ ಭಾಗ್ಯಗಳನ್ನು ಜಾರಿಗೆ ತಂದು ಜನರ ಪರವಾಗಿ ಕೆಲಸ ಮಾಡಲಾಗಿತ್ತು. 2018ರಲ್ಲಿ ಅತಂತ್ರ ಫಲಿತಾಂಶ ಬಂದಿದ್ದರಿಂದ ಹೈಕಮಾಂಡ್ ತೀರ್ಮಾನದಂತೆ ಜೆಡಿಎಸ್ ಪಕ್ಷದ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲಾಯಿತು. ಆದರೆ ಪಕ್ಷಿಧಾ ಕೆಲ ಶಾಸಕರು ಅಸಮಾಧಾನಿತರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಕಳೆದ ಬಾರಿ ನಮ್ಮ ಸರ್ಕಾರದ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ ಆದರೆ ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ಮನೆಯನ್ನ ನಿರ್ಮಾಣ ಮಾಡಲಾಗಲಿಲ್ಲ ಈ ವರ್ಷ ರಾಜ್ಯದ ಹಲವೆಡೆ ಬರೆದ ಛಾಯೆ ಕಾಣಿಸಿಕೊಂಡಿದ್ದು. ಶೀಘ್ರವೇ ಕೇಂದ್ರದ ತಂಡವು ಬರ ಅಧ್ಯಯನ ನಡೆಸಲಿದೆ. ನಂತರ ಅಧ್ಯಯನದ ವರದಿಯ ಆಧಾರದ ಮೇಲೆ ಬರಪಿಡಿತ ತಾಲೂಕುಗಳನ್ನ ಘೋಷಣೆ ಮಾಡಲಾಗುವುದು ಎಂದರು.
ಹೊಸದುರ್ಗ ಪಟ್ಟಣದಲ್ಲಿ ಶಿಥಿನಾ ಅವಸ್ಥೆಯಲ್ಲಿರುವ ಸಮುದಾಯ ಭವನ ಸ್ಥಳದಲ್ಲಿಯೇ ಬೃಹತ್ ಸಮುದಾಯ ಭವನ ಮತ್ತು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸಹಕರಿಸಲು ಕೋರಿದ್ದು ಸಮುದಾಯದವರ ಆಶಯದಂತೆ ಶಾಸಕ ಗೋವಿಂದಪ್ಪನವರ ಜೊತೆಗೂಡಿ ಬೃಹತ್ ಸಮುದಾಯ ಭವನವನ್ನ ಹಾಗೂ ಅಂಬೇಡ್ಕರ್ ಪ್ರತಿಮೇ ನಿರ್ಮಾಣಕ್ಕೆ ಸಹಕರಿಸುವೆ ಎಂದು ಹೇಳಿದರು.
ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಮಾತನಾಡಿ ನಾವು ಮಾಡುವ ಕಾರ್ಯಕ್ರಮಗಳು ಸಮುದಾಯದ ಪ್ರಗತಿಗೆ ದಿಕ್ಸೂಚಿ ಆಗಬೇಕು ಸರ್ಕಾರದ ಸೌಲಭ್ಯಗಳನ್ನ ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಕೆಲವು ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪದೇ ಇರುವುದರಿಂದ ದಲಿತರು ದಲಿತರಾಗಿಯೇ ಉಳಿಯುತ್ತಿದ್ದಾರೆ.
ನಮ್ಮ ಕಾಂಗ್ರೆಸ್ ಸರ್ಕಾರ ಬಡವರು ದಲಿತರು ಶೋಷಿತರು ಮತ್ತು ಇತರ ಎಲ್ಲ ವರ್ಗಗಳ ಜನರ ಪ್ರಗತಿಗಾಗಿ ಕೆಲಸ ಮಾಡುತ್ತಿದೆ. ಚುನಾವಣಾ ಪೂರ್ವದಲ್ಲಿ ಕೊಟ್ಟಂತಹ ಐದು ಗ್ಯಾರಂಟಿ ಮತ್ತು ಭರವಸೆಗಳನ್ನು ಒಂದೊಂದಾಗಿ ಈಡೇರಿಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಭಾಗವಾಗಿ ಸಚಿವರಾದ ಕೆ.ಎಚ್. ಮುನಿಯಪ್ಪ. ಆರ್ ಬಿ ತಿಮ್ಮಾಪುರ. ಶಾಸಕರಾದ ಗೋವಿಂದಪ್ಪ.
ಕೆಪಿಸಿಸಿ ಕಾರ್ಯಧ್ಯಕ್ಷರಾದ ಬಿ.ಎನ್ ಚಂದ್ರಪ್ಪ.ಉಪಾಧ್ಯಕ್ಷ ಹೆಚ್ ಆಂಜನೇಯ. ಮಾಯಕೊಂಡ ಕ್ಷೇತ್ರದ ಶಾಸಕ ಬಸವಂತಪ್ಪ. ಸಮುದಾಯದ ಮುಖಂಡರಾದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ. ಮಂಜುನಾಥ ಸನ್ಮಾನಿಸಿ ಅಭಿನಂದಿಸಿ ಗೌರವಿಸಲಾಯಿತು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಚಿಕೇರಿ ತಿಪ್ಪೇಸ್ವಾಮಿ ವಹಿಸಿದ್ದರು ಮಾದಿಗ ಸಮುದಾಯದ ಮುಖಂಡರಾದ ರಾಜಪ್ಪ ಲಕ್ಕಿಹಳ್ಳಿ ಮುದ್ದಪ್ಪ ಮೂರ್ತಪ್ಪ ಕೈ ನೋಡು ಚಂದ್ರಪ್ಪ ಬೀಸನಹಳ್ಳಿ ಜೆಯಪ್ಪ ಮತ್ತು ರವಿಕುಮಾರ್ ಸೇರಿದಂತೆ ಸಮುದಾಯದ ನೂರಾರು ಜನರು ಪಾಲ್ಗೊಂಡಿದ್ದರು.
ಆರ್ ಬಿ ತಿಮ್ಮಾಪುರ ಅಬಕಾರಿ ಸಚಿವ,..,.
ನಿಮಗೆ ಅನ್ಯಾಯವಾದಾಗ ಹೋರಾಟ ಮಾಡಿ. ಆದರೆ ಸುಖ ಸುಮ್ಮನೆ ಇನ್ನೊಬ್ಬರ ಮೇಲೆ ಜಾತಿ ನಿಂದನೆ ಕೇಸ್ ಮಾಡಬೇಡಿ. ಕೆಲವರು ನಿಮ್ಮನ್ನ ಬಳಸಿಕೊಂಡು ಅವರ ಸೇಡು ತೀರಿಸಿಕೊಳ್ಳುತ್ತಾರೆ. ನಿಮ್ಮಿಂದ ಅಟ್ರಾಸಿಟಿ ಕೇಸ್ ಮಾಡಿಸುತ್ತಾರೆ. ಇಂಥವುಗಳಿಂದ ಅಟ್ರಸಿಟಿ ಕೇಸ್ ಮಹತ್ವ ಕಳೆದುಕೊಳ್ಳುತ್ತಿದೆ. ಈ ವರ್ತನೆಯಿಂದಾಗಿ ಬೇರೆ ಸಮುದಾಯದವರು ನಿಮ್ಮಿಂದ ದೂರ ಉಳಿಯುತ್ತಿದ್ದಾರೆ. ಆಗ ನೀವುಗಳು ಪ್ರಗತಿ ಕಾಣಲು ಸಾಧ್ಯವಿಲ್ಲ.
ಶಾಸಕ ಬಿ ಜಿ ಗೋವಿಂದಪ್ಪ. ಹೊಸದುರ್ಗ.
ಅರ್ಹ ಫಲಾನುಭವಿಗಳಿಗೆ ಬಗಾರ್ ಹುಕುಂ ಸಾಗುವಳಿ
ಬಗರ್ ಹುಕುಂ ಮಾಡಿರುವವರು ಸಾಗುವಳಿ ಮಾಡಿಸಲು ಯಾರ ಹತ್ತಿರವೂ ಹೋಗಬೇಡಿ ಮೂರು ತಿಂಗಳ ನಂತರ ಕಮಿಟಿ ಅಸ್ತಿತ್ವಕ್ಕೆ ಬಂದ ಮೇಲೆ ಸ್ವತಹ ನಾವೇ ನಿಮ್ಮ ಮನೆಯ ಬಾಗಿಲಿಗೆ ಬಂತು ಅರ್ಹರನ ಗುರುತಿಸಿ ಪರಿಶೀಲಿಸಿ ಸಾಗುವಳಿ ಪತ್ರ ನೀಡುತ್ತಿವೆ ಯಾರಿಗೆ ಗೃಹಲಕ್ಷ್ಮಿ ಯೋಚನೆಯ ಹಣ ತಲುಪಿಲ್ಲವೋ ಅಂತಹ ಫಲಾನುಭವಿಗಳಿಗೆ ಹಣ ತಲುಪಿಸುವ ಕೆಲಸ ಮಾಡುತ್ತೇನೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು.
ಕೆ.ಎಚ್.ಮುನಿಯಪ್ಪ ಡಿಸೆಂಬರ್ ತಿಂಗಳಲ್ಲಿ ಯುವ ನೀತಿ ಜಾರಿ
ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ಕೊಟ್ಟಂತಹ ಭರವಸಿ ಮತ್ತು ಗ್ಯಾರಂಟಿಗಳನ್ನ ಒಂದೊಂದಾಗಿ ಈಡೇರಿಸುತ್ತಾ ಬರುತ್ತಿದೆ. ಈಗಾಗಲೇ ಗೃಹಜೋತಿ, ಗೃಹಲಕ್ಷ್ಮಿ ಶಕ್ತಿ ಯೋಚನೆ ಮತ್ತು ಅನ್ನಭಾಗ್ಯ ಯೋಜನೆ ಜಾರಿಯಾಗಿದ್ದು. ಡಿಸೆಂಬರ್ ತಿಂಗಳಿನಿಂದ ಯುವನಿಧಿ ಯೋಜನೆ ಜಾರಿಗೆ ಬರಲಿದೆ.