April 20, 2024

Chitradurga hoysala

Kannada news portal

ರಾಜ್ಯ ಸರ್ಕಾರಕ್ಕೆ ಅಭಿನಂದನಾ ಕೃತಜ್ಞತೆ ಸಲ್ಲಿಸಿದ ಶ್ರೀ ಶಾಂತವೀರ ಮಹಾಸ್ವಾಮೀಜಿ : ಕುಲಶಾಸ್ತ್ರ ಅಧ್ಯಯನಕ್ಕೆ ಸಹಕಾರ ನೀಡಿದ್ದ ಮಾಜಿ ಸಚಿವ ಎಚ್.ಆಂಜನೇಯ

1 min read

ರಾಜ್ಯ ಸರ್ಕಾರಕ್ಕೆ ಅಭಿನಂದನಾ ಕೃತಜ್ಞತೆ ಸಲ್ಲಿಸಿದ ಶ್ರೀ ಶಾಂತವೀರ ಮಹಾಸ್ವಾಮೀಜಿ

ಕುಲಶಾಸ್ತ್ರ ಅಧ್ಯಯನಕ್ಕೆ ಸಹಕಾರ ನೀಡಿದ್ದ ಮಾಜಿ ಸಚಿವ ಎಚ್.ಆಂಜನೇಯ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಹೊಸದುರ್ಗ:

ರಾಜ್ಯ ಸರ್ಕಾರಕ್ಕೆ ಅಭಿನಂದನಾ ಕೃತಜ್ಞತೆ ಸಲ್ಲಿಸಿ ಪತ್ರಿಕೆ ಹೇಳಿಕೆ ನೀಡಿರುವ ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮೀಜಿರವರು.
ಕುಂಚಿಟಿಗ ಸಮಾಜದ ಸಂಘಟನೆ ಸಂಸ್ಕಾರ ಸಾಮಾಜಿಕ ನ್ಯಾಯವನ್ನು ಮೀಸಲಾತಿ ಸೌಲಭ್ಯ ಕಲ್ಪಿಸುವ ಸಕಾರಾತ್ಮಕ ಸಂಕಲ್ಪದೊಂದಿಗೆ 1990 ರಿಂದ ಶ್ರೀ ಸಂಗಮೇಶ್ವರ ಜಯಂತ್ಯೋತ್ಸವ ಹಾಗೂ ಕುಂಚಿಟಿಗ ಸಮಾವೇಶ ನಡೆಸುತ್ತ ನಿರಂತರ ಪ್ರಯತ್ನ ಮಾಡಿ 1997 ರಲ್ಲಿ ಹೊಸದುರ್ಗದಲ್ಲಿ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಪ್ರಾರಂಭ ಮಾಡಿ ಸಮಾಜದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರಗಳಿಗೆ ಸಮಾವೇಶಗಳಲ್ಲಿ ಮುಖ್ಯಮಂತ್ರಿಗಳಿಗೆ, ಮಂತ್ರಿಗಳಿಗೆ, ಒತ್ತಾಯ ಒತ್ತಡ ತರುತ್ತ ಬಂದಿರುವ ಕಾರಣ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ನಮ್ಮ ನೇತೃತ್ವದಲ್ಲಿ ದೆಹಲಿ ಯಾತ್ರೆ ಹಿಂದುಳಿದ ವರ್ಗದ ಅಧ್ಯಕ್ಷರು ಹಿಂದುಳಿದ ವರ್ಗದ ಸಚಿವರುಗಳು ಶಾಸಕರು ಸಂಸದರಿಗೆ ಕುಂಚಿಟಿಗ ಸಮಾಜದ ಮೀಸಲಾತಿಗೆ ಎರಡು ದಶಕಗಳ ಪ್ರಯತ್ನ ಮಾಡಿದ ಪರಿಣಾಮ ಸರ್ಕಾರ ಮಾನ್ಯ ಮಾಡಿದೆ ಕೆಲಸ ಇನ್ನೂ ಇದೆ ಮುಂದೆ ಕೇಂದ್ರ ಸರ್ಕಾರದ ಗಮನ ಸೆಳೆದು ಸಂಸದರಿಗೆ ಎಲ್ಲರೂ ಸೇರಿ ಪ್ರಯತ್ನಿಸಿದರೆ ಬೇಗ ಒಬಿಸಿ ಪಡೆಯಬಹುದು.

ಕುಂಚಿಟಿಗ ಜಾತಿಯನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿರುವುದರಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್, ರವರು ಎರಡು ದಶಕಗಳಿಂದ ಶ್ರಮವಹಿಸಿದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಕುಂಚಿಟಿಗ ಸಮಾಜದ ನಾಯಕ ಟಿ.ಬಿ, ಜಯಚಂದ್ರರವರು ಕುಲಶಾಸ್ತ್ರ ಅಧ್ಯಯನಕ್ಕೆ ಸಹಕಾರ ನೀಡಿದ ಮಾಜಿ ಸಚಿವರಾದ ಎಚ್, ಆಂಜನೇಯರವರು,
ದೆಹಲಿಯ ತಮ್ಮ ಮನೆಯಲ್ಲಿ ಸಭೆ ಏರ್ಪಡಿಸಿದ ದಾವಣಗೆರೆ ಸಂಸದರಾದ ಸಿದ್ದೇಶ್ ಲೋಕಸಭೆಯಲ್ಲಿ ಧ್ವನಿ ಎತ್ತಿದ ತುಮಕೂರು ಮಾಜಿ ಸಂಸದರಾದ ಮುದ್ದಹನುಮೇಗೌಡರು
ದೆಹಲಿ ಯಾತ್ರೆ ಹಾಗೂ ನಿರಂತರ ಪ್ರಯತ್ನ ಮಾಡಿದ ಮುರುಳಿದರ್ ಹಾಲಪ್ಪನವರು, ಸಹಕರಿಸಿದ ನವೀನ್ ಕೊಟ್ಟಿಗೆ
ಎಸ್. ಲಿಂಗಮೂರ್ತಿಯವರು ಎನ್.ಹೆಚ್. ಸುರೇಶ್. ರಂಗನಗೌಡರು, ಕಲ್ಲಣ್ಣ, ಕುಲಶಾಸ್ತ್ರ ಅಧ್ಯಯನದಲ್ಲಿ ತೊಡಗಿ ಶ್ರಮ ವಹಿಸಿದ ಪತ್ರಕರ್ತರಾದ ಹೇಂಜರಪ್ಪನವರು, ಕುಲಶಾಸ್ತ್ರ ಅಧ್ಯಯನಕ್ಕೆ ಆರ್ಥಿಕ ಸಹಾಯ ನೀಡಿ ಶ್ರಮಿಸಿದ ಕುಂಚಿಟಿಗ ಮಹಾಮಂಡಲದ ಅಂದಿನ ಅಧ್ಯಕ್ಷರಾದ ಬಸವನಂದರವರು,ಪ್ರತಿಭಾ ಪುರಸ್ಕಾರದ ಮೂಲಕ ಸಮಾಜ ಸಂಘಟಿಸಿ ರಾಜ್ಯ ಸುತ್ತಿದ ಕುಂಚ ಪರಿವಾರ ಹಾಗೂ ಅಧ್ಯಕ್ಷರಾದ ಶಿವಭದ್ರಯ್ಯ, ತಂಡ ಮೀಸಲಾತಿಗಾಗಿ ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸಿದ ಕರ್ನಾಟಕ ಕುಂಚಿಟಿಗ ಸಂಘದ ವಿನಯ್ ಪೂಜಾರ್, ಹಾಗೂ ತಂಡ ಸತ್ಯಾಗ್ರಹ ಯಶಸ್ಸಿನಲ್ಲಿ ಭಾಗವಹಿಸಿದ ಮೈಸೂರು ಕುಂಚಿಟಿಗ ಸಂಘ, ಇತ್ತೀಚಿಗೆ ಕುಂಚಿಟಿಗ ಮಹಾ ಮಂಡಲದ ಅಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲರಾಗಿ ಹಲವು ಜಿಲ್ಲೆಗಳಿಗೆ ಪ್ರಯಾಣ ಮಾಡಿ ಒತ್ತಡ ಹೇರಿದ ರಂಗಹನುಮಯ್ಯ ನವರು, ರಾಮಾಂಜನೇಯ. ಚಂದ್ರಯ್ಯ. ಕಾಂತರಾಜ್, ಚಂದ್ರಣ್ಣ,

ಕುಂಚಿಟಿಗ ಸಮಾಜದ ಕುಲಶಾಸ್ತ್ರ ಅಧ್ಯಯನ ಮಾಡಲು ನಿರತರ ಪ್ರಯತ್ನ ಮಾಡಿ ಸಹಕಾರ ನೀಡಿದ ಕುಂಚಿಟಿಗ ಸಮಾಜದ ಪರಮಪೂಜ್ಯರು ಕುಂಚಿಟಿಗ ಮಹಾಮಂಡಲ, ಕುಂಚ ಪರಿವಾರ,
ಮೈಸೂರು ಕುಂಚಿಟಿಗ ಸಂಘ,ಚಿತ್ರದುರ್ಗ ಕುಂಚಿಟಿಗ ಸಂಘ,
ದಾವಣಗೆರೆ ಕುಂಚಿಟಿಗ ಸಂಘ,ಶಿವಮೊಗ್ಗ ಕುಂಚಿಟಿಗ ಸಂಘ,
ತುಮಕೂರು ಕುಂಚಿಟಿಗ ಸಂಘ,ಹಾಸನ ಕುಂಚಿಟಿಗ ಸಂಘ,
ಚಿಕ್ಕಮಗಳೂರು ಕುಂಚಿಟಿಗ ಸಂಘ,ಚಿಕ್ಕಬಳ್ಳಾಪುರ ಕುಂಚಿಟಿಗ ಸಂಘ,
ಹಾವೇರಿ ಕುಂಚಿಟಿಗ ಸಂಘ, ಬೆಂಗಳೂರು ಗ್ರಾಮಾಂತರ ನಗರ ಜಿಲ್ಲಾ ಕುಂಚಿಟಿಗ ಸಂಘ,ರಾಷ್ಟ್ರೀಯ ಕುಂಚಿಟಿಗ ಸಂಘ,ಬಳ್ಳಾರಿ ಕುಂಚಿಟಿಗ ಸಂಘ,ವಿಜಯನಗರ ಕುಂಚಿಟಿಗ ಸಂಘ,ರಾಮನಗರ ಕುಂಚಿಟಿಗ ಸಂಘ ಹಾಗೂ ರಾಜ್ಯದ ಎಲ್ಲ ಕುಂಚಿಟಿಗ ಸಂಘದ ಅಧ್ಯಕ್ಷರು ಪದಾಧಿಕಾರಿಗಳಿಗೆ ಸಮಾಜ ಮಠದ ವೈಯಕ್ತಿಕವಾಗಿ ಕೃತಜ್ಞತೆಯನ್ನು ಅರ್ಪಿಸುತ್ತೇವೆ,ಎಂದು ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗದ ಪೀಠಾಧ್ಯಕ್ಷರಾದ ಶ್ರೀ ಶಾಂತವೀರ ಮಹಾ ಸ್ವಾಮೀಜಿ ರವರು ಪತ್ರಿಕ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *