ಉಗ್ರ ಹೋರಾಟ ಗಾಂಧೀಜಿಯವರ ಸತ್ಯ ಅಹಿಂಸಾ ಮಾರ್ಗದ ಸೂತ್ರಗಳು ಸ್ವಾತಂತ್ರ ಹೋರಾಟಕ್ಕೆ ಪೂರಕವಾಗಿದ್ದವು : ಅಧೀಕ್ಷಕ ಸಿ.ಎನ್.ಮೋಹನ್ ಅಭಿಪ್ರಾಯ
1 min readಸ್ವಚ್ಛತೆ; ಶ್ರಮದಾನ ; ಮಹಾತ್ಮರ ಗುಣಗಾನ
ಉಗ್ರ ಹೋರಾಟ ಗಾಂಧೀಜಿಯವರ ಸತ್ಯ ಅಹಿಂಸಾ ಮಾರ್ಗದ ಸೂತ್ರಗಳು ಸ್ವಾತಂತ್ರ ಹೋರಾಟಕ್ಕೆ ಪೂರಕವಾಗಿದ್ದವು :
ಅಧೀಕ್ಷಕ ಸಿ.ಎನ್.ಮೋಹನ್ ಅಭಿಪ್ರಾಯ
ವೆಬ್ ಸಂಪಾದಕರು:ಸಿ.ಎನ್.ಕುಮಾರ್,
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಿತ್ರದುರ್ಗ:
ಎಂತಹ ಉಗ್ರ ಹೋರಾಟದ ಮುಂದೆ ಗಾಂಧೀಜಿಯವರ ಸತ್ಯ ಮತ್ತು ಅಹಿಂಸಾ ಮಾರ್ಗದ ಸೂತ್ರಗಳು ಸ್ವಾತಂತ್ರ ಹೋರಾಟಕ್ಕೆ ಪೂರಕವಾಗಿದ್ದವು ಎಂದು ಎಸ್ .ಜೆ .ಎಂ. ಪಾಲಿಟೆಕ್ನಿಕ್ ನ ಅಧೀಕ್ಷಕ ಸಿ.ಎನ್.ಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಎಸ್. ಜೆ .ಎಂ.ಪಾಲಿಟೆಕ್ನಿಕ್ (ಅನುದಾನಿತ)ನಲ್ಲಿ ನಡೆದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿ ಅಂಗವಾಗಿ ನಡೆದ ಸ್ವಚ್ಛತೆ; ಶ್ರಮದಾನ ಹಾಗೂ ಇಬ್ಬರು ಸಾಧಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ವಾತಂತ್ರ ಹೋರಾಟದಲ್ಲಿದ್ದು ಸ್ವಾತಂತ್ರ್ಯವನ್ನು ಪಡೆದು ನಂತರ ಸ್ವತಂತ್ರ ಭಾರತದ ಆಡಳಿತದಲ್ಲಿ ಯಾವುದೇ ಹುದ್ದೆಯನ್ನು ಪಡೆಯದೆ ನಿಸ್ವಾರ್ಥ ಸೇವೆಯ ಮಾದರಿ ಪುರುಷ ಎಂದು ಬಣ್ಣಿಸಿದರು.
ಪಾಲಿಟೆಕ್ನಿಕ್ ಗ್ರಂಥ ಪಾಲಕ ವೀರಯ್ಯ .ಎಂ ಅವರು ಮಾತನಾಡಿ ಗಾಂಧೀಜಿಯವರು ನಮ್ಮ ಮುರುಘಾಮಠದಜಯದೇವ ಶ್ರೀಗಳು ಈ ಹಿಂದೆ ನಾಡಿನ ಅಭ್ಯುದ ಕುರಿತಾಗಿ ಚರ್ಚೆಸಿದ್ದನ್ನ ಸ್ಮರಿಸಿದರು. ಪ್ರಧಾನ ಮಂತ್ರಿಗಳಾಗಿದ್ದರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಎಂತಹ ಮಹೋನ್ನತ ತತ್ವಾದರ್ಶಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಅವನ್ನು ಚಿಂತನೆ ಮೂಲಕ ಮನನ ಮಾಡಿಕೊಂಡರೆ ಅರ್ಥವಾಗುತ್ತದೆ. ಅವುಗಳನ್ನು ನಾವು ನಡೆಯಲ್ಲಿ ತಂದುಕೊಳ್ಳಬೇಕೆಂದು ಸಲಹೆ ಮಾಡಿದರು.
ಮೆಕ್ಯಾನಿಕ್ ವಿಭಾಗದ ಜಯಪ್ಪ .ಪಿ ಮಾತನಾಡಿ ನಮ್ಮ ಹಿಂದಿನ ಆದರ್ಶ ಪುರುಷರ ತ್ಯಾಗದ ಪ್ರತೀಕವಾಗಿ ನಾವಿಂದು ಸೌಖ್ಯವಾಗಿರಲು ಸಾಧ್ಯವಾಗಿದೆ.ಆ ಕಾರಣದಿಂದಲೇ ಅವರು ಸದಾ ಸ್ಮರಣೆಗೆ ಯೋಗ್ಯರು ಎಂದು ಅಭಿಪ್ರಾಯಪಟ್ಟರು.
ಬೋಧಕರಾದ ಕೆ. ಸುರೇಶ್ ಕುಮಾರ್ ಮತನಾಡಿ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಗೆ ಅದಕ್ಕೆ ತನ್ನದೇ ಆದ ಒಂದು ದಿಕ್ಸೂಚಿ ಇತ್ತು. ಹಾಗಾಗಿ ಅದರಂತೆ ಎಲ್ಲರ ಸಂಘಟಿತ ಹೋರಾಟದ ಫಲವಾಗಿ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು. ಅದನ್ನು ನಾವು ಉಳಿಸಿಕೊಂಡು ಹೋಗಬೇಕಿದೆ ಎಂದರು. ಕಛೇರಿಯ ಲೆಕ್ಕ ವಿಭಾಗದ ಟಿ.ಎನ್ .ಲಿಂಗರಾಜು ಮಾತನಾಡಿ ನಮ್ಮ ನಡುವಿನ ಸಮಾಜ ಸುಧಾರಕನ್ನ ನೆನೆಯುವ ಇದೊಂದು ಸುಸಂದರ್ಭ.ಆದರ್ಶ ಮಹನೀಯರ ಜಯಂತಿ ಮಹೋತ್ಸವಗಳು ಕಾಟಾಚಾರದ ಕಾರ್ಯಕ್ರಮಗಳಾಗಬಾರದು.ಅವರ ತ್ಯಾಗಕ್ಕೆ ನಮ್ಮ ಸಮರ್ಪಣಾಭಾವವಿರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಆಟೋಮೊಬೈಲ್ ವಿಭಾಗದ ಸೋಮಶೇಖರ್ ಮಾಶ್ಯಾಳ್,ರುದ್ರಮೂರ್ತಿ ಎಂ.ಜೆ ಹಾಗೂ ನಿರಂಜನ ಅವರುಗಳು ಉಪಸ್ಥಿತರಿದ್ದರು.ಇದಕ್ಕೂ ಮುನ್ನ ಕಾಲೇಜಿನ ಆವರಣದಲ್ಲಿ ಸ್ವಚ್ಛತೆ ಹಾಗೂ ಶ್ರಮದಾನ ಮಾಡಲಾಯಿತು.