May 2, 2024

Chitradurga hoysala

Kannada news portal

ಐದು ಲಕ್ಷ ರೂ ಬೆಲೆ ಬಾಳುವ 50 ವಿವಿಧ ಕಂಪನಿಗಳ ಮೊಬೈಲ್ ಫೋನ್ ಗಳು ಪತ್ತೆ ವಾರಸುದಾರರಿಗೆ ಹಸ್ತಾಂತರ: ಎಸ್.ಪಿ – ಧರ್ಮೇಂದರ್‌ ಕುಮಾರ್ ಮೀನಾ

1 min read

ಐದು ಲಕ್ಷ ರೂ ಬೆಲೆ ಬಾಳುವ 50 ವಿವಿಧ ಕಂಪನಿಗಳ ಮೊಬೈಲ್ ಫೋನ್ ಗಳು ಪತ್ತೆ ವಾರಸುದಾರರಿಗೆ ಹಸ್ತಾಂತರ:

ಎಸ್.ಪಿ – ಧರ್ಮೇಂದರ್‌ ಕುಮಾರ್ ಮೀನಾ

ಚಿತ್ರದುರ್ಗ ಹೊಯ್ಸಳ ಸುದ್ದಿ:

ಚಿತ್ರದುರ್ಗ:

ಜಿಲೆಯಲ್ಲಿ ಕಳೆದು ಹೋದ ಸಾರ್ವಜನಿಕರ ಮೊಬೈಲ್ ಗಳನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಧರ್ಮೇಂದರ್‌ ಕುಮಾರ್ ಮೀನಾ, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಚಿತ್ರದುರ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ.ಕುಮಾರಸ್ವಾಮಿ, ಕೆ.ಎಸ್.ಪಿ.ಎಸ್ ಹಾಗೂ ಡಿ.ಸಿ.ಆರ್.ಬಿ. ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಲೋಕೇಶ್ವರಪ್ಪ.ಎನ್. ರವರ ನೇತೃತ್ವದಲ್ಲಿ, ಚಿತ್ರದುರ್ಗ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು CEIR ತಂತ್ರಾಂಶದ ಸಹಾಯದಿಂದ ಪತ್ತೆ ಮಾಡಿದ್ದಾರೆ.

ದಿನಾಂಕ: 01.09.2023 ರಿಂದ ಇಲ್ಲಿಯವರೆಗೆ ಅಂದಾಜು ಮೌಲ್ಯ 5,00,000/-ಲಕ್ಷ ರೂ ಬೆಲೆ ಬಾಳುವ 50 ವಿವಿಧ ಕಂಪನಿಗಳ ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿದ್ದು, ಪತ್ತೆಯಾಗಿರುವ ಮೊಬೈಲ್ ಗಳನ್ನು ಮಂಗಳವಾರ ವಾರಸುದಾರರಿಗೆ ಹಸ್ತಾಂತರಿಸಿದ್ದರು.

ಮೊಬೈಲ್ ಪತ್ತೆಗೆ ಶ್ರಮಿಸಿದ ಸಿ.ಇ.ಎನ್‌ ಅಪರಾಧ ಪೊಲೀಸ್ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಎನ್.ವೆಂಕಟೇಶ್ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ಮಲ್ಲಿಕಾರ್ಜುನಯ್ಯ, ಸಿಪಿಸಿ-2067 ಭೀಮನಗೌಡ ಪಾಟೀಲ್‌, ಸಿಪಿಸಿ- 2659 ಗಗನ್ ದೀಪ್ ಪವಾರ್, ಮಪಿಸಿ-2625 ಶಾಂತಲಾ ಇವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು,ಶಾಘಿಸಿರುತ್ತಾರೆ.

About The Author

Leave a Reply

Your email address will not be published. Required fields are marked *