April 17, 2024

Chitradurga hoysala

Kannada news portal

ಪರಿಶ್ರಮದಿಂದ ಪ್ರಗತಿ ಸಾಧ್ಯ : ಡಾಕ್ಟರೇಟ್ ಪಡೆದ ಚಿನ್ನದ ಹುಡುಗಿ

1 min read

ಪರಿಶ್ರಮದಿಂದ ಪ್ರಗತಿ ಸಾಧ್ಯ

ಚಿತ್ರದುರ್ಗ ಹೊಯ್ಸಳ ನ್ಯೂಸ್/ 

ವರದಿ: ವಿಜಯಕುಮಾರ್, ತೂಡರನಾಳ್

ಹಿರಿಯೂರು:

ಸತತ ಪರಿಶ್ರಮದಿಂದ ಪ್ರಗತಿ ಸಾಧಿಸಲು ಸಾಧ್ಯ ಎಂದು ಆರ್ಯವೈಶ್ಯ ಯುವ ಜನ ಸಂಘ ಹಾಗೂ ವಾಸವಿ ಕ್ಲಬ್ ಅಧ್ಯಕ್ಷರಾದ ವಿ. ಜಗದೀಶ್ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಿಂದ ‌ಪಿ ಎಚ್ ಡಿ ಪದವಿ ಪಡೆದು, ‘ಡಾಕ್ಟರೇಟ್ ಪಡೆದ ಚಿನ್ನದ ಹುಡುಗಿ’ ಎಂದು ಹೆಸರಾಗಿರುವ ಹಿರಿಯೂರಿನ ಡಾ. ಎಂ .ಆರ್ ಅಮೃತ ಲಕ್ಷ್ಮಿ ಯವರಿಗೆ ಆತ್ಮೀಯವಾಗಿ ಸನ್ಮಾನಿಸಿ ಅವರು ಮಾತನಾಡಿದರು.

ಆಸಕ್ತಿ ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಯಾವುದೇ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಬಹುದು ಅದರಲ್ಲೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ್ದಲ್ಲಿ ಜೊತೆ ಜೊತೆಯಾಗಿ ದೇಶದ ಪ್ರಗತಿಯು ಸಾಧ್ಯ ಎಲ್ಲಾ ವಿದ್ಯಾರ್ಥಿಗಳು ಅಮೃತ ಲಕ್ಷ್ಮಿ ಅವರಂತೆ ಆಸಕ್ತಿವಹಿಸಿ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

ಅಮೃತ ಲಕ್ಷ್ಮಿಯವರು ಬಹುಮುಖ ಪ್ರತಿಭೆಯಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಪರಿಶ್ರಮದಿಂದ ಸಾಧನೆ ಮಾಡಿರುತ್ತಾರೆ. ಎಸ್ ಎಸ್ ಎಲ್ ಸಿ ಯಲ್ಲಿ ಜಿಲ್ಲೆಗೆ ಟಾಪರ್ ಆಗಿದ್ದರು ಬಿಎಸ್ ಸಿ ಮತ್ತು ಎಂ ಎಸ್ ಸಿ ಎರಡರಲ್ಲೂ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಳ್ಳುವ ಮೂಲಕ ಹಿರಿಯೂರಿನ ಚಿನ್ನದ ಹುಡುಗಿ ಎಂದು ಹೆಸರಾಗಿದ್ದಾರೆ.ಅಲ್ಲದೆ ವಿದ್ಯಾರ್ಥಿಗಳಿಗೆ ಮಾದರಿ ಯಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಪ್ರತಾಪ್ ಪುನೀತ್ ರವೀಂದ್ರನಾಥ್, ಪ್ರಕಾಶ್ ಮಿರಜ್ಕರ್ ಮತ್ತಿತರರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *