ಸುದರ್ಶನ್ ಗೆ ಚಿನ್ನದ ಪದಕ
1 min readಸುದರ್ಶನ್ ಗೆ ಚಿನ್ನದ ಪದಕ
ಮಾಸ್ಟರ್ ಕರಾಟೆ ಓಪನ್ ಚಾಂಪಿಯನ್ಶಿಪ್
ಚಿತ್ರದುರ್ಗ ಹೊಯ್ಸಳ:
ಚಿತ್ರದುರ್ಗ :
ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದ ಡಾ.ಬಿ ಆರ್ ಅಂಬೇಡ್ಕರ್ ಪ್ರೌಢಶಾಲೆಯ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸುದರ್ಶನ್ ಗೆ ಕರಾಟೆ ಓಪನ್ ಚಾಂಪಿಯನ್ಶಿಪ್ ನಲ್ಲಿ ಬಂಗಾರದ ಪದಕ ಲಭಿಸಿದೆ.
ಕೊಯಿಮುತ್ತೂರ್ ನಲ್ಲಿ ನಡೆದಂತಹ ಕರಾಟೆ ಓಪನ್ ಚಾಂಪಿಯನ್ಶಿಪ್ ಅಂಡ್ ಮಾಸ್ಟರ್ ಆಂತಮ್ಸ್ ಟ್ರೋಫಿಯಲ್ಲಿ 16ನೇ ವಯಸ್ಸಿನ ವಿಭಾಗದಲ್ಲಿ ಭಾಗವಹಿಸಿ ಬಂಗಾರದ ಪದಕವನ್ನು ಪಡೆದಿದ್ದಾರೆ.
ಸೋಲಾಪುರ ಗ್ರಾಮ ಪಂಚಾಯಿತಿ ಸದಸ್ಯ ಮಂಜುಳಾ ಸ್ವಾಮಿಯವರ ಮಗನಾದ ಸುದರ್ಶನ್ ರವರು ಸಾಧನೆ ಮಾಡಿರುವುದಕ್ಕೆ ಗ್ರಾಮಸ್ಥರು ಹಾಗೂ ಶಿಕ್ಷಕ ವರ್ಗದವರು ಶುಭ ಹಾರೈಸಿದ್ದಾರೆ.