May 20, 2024

Chitradurga hoysala

Kannada news portal

ಯೋಜನಾ ನಿರ್ವಹಣೆಗೆ ತಾಯಿ ಮಕ್ಕಳ ಗಣಕೀಕೃತ ಮಾಹಿತಿ ಅಗತ್ಯ:DHO ಡಾ.ಜಿ.ಪಿ.ರೇಣುಪ್ರಸಾದ್

1 min read

ಯೋಜನಾ ನಿರ್ವಹಣೆಗೆ ತಾಯಿ ಮಕ್ಕಳ ಗಣಕೀಕೃತ ಮಾಹಿತಿ ಅಗತ್ಯ :

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್

CHITRADURGAHOYSALA NEWS/

ಚಿತ್ರದುರ್ಗ:

ತಾಯಿ ಮಕ್ಕಳ ವಿವಿಧ ಆರೋಗ್ಯ ಸೇವೆಗಳ ಗಣಕೀಕೃತ ಮಾಹಿತಿ ಯೋಜನಾ ನಿರ್ವಹಣೆಗೆ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಖಾಸಗಿ ನಸಿರ್ಂಗ್ ಹೋಮ್‍ಗಳ ವೈದ್ಯಾಧಿಕಾರಿಗಳಿಗೆ ಹೆಲ್ತ್ ಇನ್ಫಾರ್ಮಶನ್ ಮ್ಯಾನೇಜ್ಮೆಂಟ್ ಸಿಸ್ಟಮ್, ಯೂವಿನ್ ಪೋರ್ಟಲ್, ಆರ್‍ಸಿಎಚ್ ಪೋರ್ಟಲ್ ಉಪಯುಕ್ತತೆ, ಬಳಸುವ ವಿಧಾನ, ವಿವಿಧ ಹಂತದ ಸೇವಾ ದಾಖಲಾತಿಗಳನ್ನು ಗಣಕೀಕರಣಗೊಳಿಸುವ ಬಗ್ಗೆ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಉಪ ಕೇಂದ್ರ ಮಟ್ಟ, ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟ, ಸಮುದಾಯ ಆರೋಗ್ಯ ಕೇಂದ್ರದಿಂದ ತಾಲ್ಲೂಕು ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಯ ವಿವಿಧ ಸೇವೆಗಳನ್ನು ಹೆಲ್ತ್ ಇನ್ಫಾರ್ಮಶನ್ ಮ್ಯಾನೇಜ್ಮೆಂಟ್ ಸಿಸ್ಟಮ್‍ನಲ್ಲಿ ಗಣಕಿ ಕರಣಗೊಳಿಸಿ ದತ್ತಾಂಶಗಳ ಕ್ರೂಢೀಕೃತ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸಲಾಗುತ್ತಿತ್ತು. ಈಗ ಖಾಸಗಿ ನಸಿರ್ಂಗ್ ಹೋಮ್‍ಗಳಿಗೂ ವಿವಿಧ ಹಂತಗಳಲ್ಲಿ ತರಬೇತಿ ನೀಡಿ ಏಕೀಕೃತ ಗಣಕಿಕೃತ ದತ್ತಾಂಶಗಳ ಕ್ರೂಢೀಕರಣಗೊಳಿಸಿ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತಿದೆ. ತಾಯಿ ಮಕ್ಕಳ ವಿವಿಧ ಆರೋಗ್ಯ ಸೇವೆಗಳ ಗಣಕೀಕೃತ ಮಾಹಿತಿ ಯೋಜನಾ ನಿರ್ವಹಣೆಗೆ ಅಗತ್ಯವಾಗಿದೆ ಎಂದರು.
ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಅಭಿನವ ಮಾತನಾಡಿ, ಆ್ಯಪ್‍ಗಳ ಬಳಕೆ ಸೇವಾ ಮಾಹಿತಿಗಳನ್ನು ಹೇಗೆ ತುಂಬುವುದು, ಖಾಸಗಿ ನಸಿರ್ಂಗ್ ಹೋಮ್‍ಗಳಿಗೆ ಎಕ್ಸಿಸೆಬಿಲಿಟಿ ಯೂಸರ್ ಐಡಿ ಪಾಸ್‍ವರ್ಡ್‍ಗಳ ಬಳಕೆ, ಇದರಿಂದಾಗುವ ಉಪಯೋಗಗಳಳ ಬಗ್ಗೆ ತರಬೇತಿ ಕಾರ್ಯಗಾರದಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ತೋಯಿಜಾಕ್ಷಿ ಬಾಯಿ, ಡಾ.ರವಿಕುಮಾರ್, ಜಿಲ್ಲಾ ಎಂಐಎಸ್ ವ್ಯವಸ್ಥಾಪಕ ಕುಮಾರ್, ಯೂ ವಿನ್ ಪೋರ್ಟಲ್ ವ್ಯವಸ್ಥಾಪಕ ವೀರೇಶ್ ಕರಕಪ್ಪ ಮೇಟಿ, ನಗರ ವ್ಯವಸ್ಥಾಪಕ ಅರ್ಜುನ್ ಹಾಗೂ ಎಲ್ಲಾ ತಾಲೂಕುಗಳ ವ್ಯವಸ್ಥಾಪಕರು, ಖಾಸಗಿ ನಸಿರ್ಂಗ್ ಹೋಮ್‍ಗಳ ವೈದ್ಯಾಧಿಕಾರಿಗಳು ಇದ್ದರು.

About The Author

Leave a Reply

Your email address will not be published. Required fields are marked *