May 20, 2024

Chitradurga hoysala

Kannada news portal

ಬಾಯಿ ಚಪ್ಪಲಕ್ಕೆ ತಿಂದರೆ ದೇಹಾರೋಗ್ಯದಲ್ಲಿ ಅನಾರೋಗ್ಯಕ್ಕೆ ಕಾರಣ: ಜನ್ಮದಿನದ ಪ್ರಯುಕ್ತ ಪ್ರಕೃತಿ ಚಿಕಿತ್ಸಾ ಆರೋಗ್ಯ ಉಚಿತ ತಪಾಸಣಾ ಶಿಬಿರ:ಡಾ.ಗಂಗಾಧರ ವರ್ಮ

1 min read

ಬಾಯಿ ಚಪ್ಪಲಕ್ಕೆ ತಿಂದರೆ ದೇಹಾರೋಗ್ಯದಲ್ಲಿ ಅನಾರೋಗ್ಯಕ್ಕೆ ಕಾರಣ:

ಜನ್ಮದಿನದ ಪ್ರಯುಕ್ತ ಪ್ರಕೃತಿ ಚಿಕಿತ್ಸಾ ಆರೋಗ್ಯ ಉಚಿತ ತಪಾಸಣಾ ಶಿಬಿರ:ಡಾ.ಗಂಗಾಧರ ವರ್ಮ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ

ದೇಹದ ಹಸಿವಿನ ಬಾಧೆಯನ್ನು ನಿವಾರಿಸಿಕೊಳ್ಳಲು ಹೊಟ್ಟೆಗೆ ಅಗತ್ಯ ಎನಿಸುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಬಾಯಿ ಚಪ್ಪಲಕ್ಕೆ ಮಿತಿಮೀರಿ ತಿಂದರೆ ದೇಹಾರೋಗ್ಯದಲ್ಲಿ ವ್ಯತ್ಯಾಸವಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಆಯುಷ್ ಇಲಾಖೆ ತಜ್ಞ ವೈದ್ಯರಾದ ಡಾ. ಗಂಗಾಧರ ವರ್ಮ ಅವರು ಅಭಿಪ್ರಾಯಪಟ್ಟರು.

ಅವರು ನಗರದ ವೀರಶೈವ ಸಮಾಜ, ಚಿತ್ರದುರ್ಗ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ದಾವಣಗೆರೆ ಹಾಗೂ ಚಿತ್ರದುರ್ಗ ಯೋಗಾಸನ ಕ್ರೀಡಾ ಮತ್ತು ಸಂಸ್ಕೃತಿಕ ಸಂಸ್ಥೆ ಇವುಗಳ ಸಹಯೋಗದಲ್ಲಿ ಇಲ್ಲಿನ ಯೋಗಚಾರ್ಯ ಬಿರುದಾಂಕಿತ ಚಿನ್ಮಯಾನಂದ ಅವರ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ಪ್ರಕೃತಿ ಚಿಕಿತ್ಸೆ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು ಆಧುನಿಕ ಯುಗದಲ್ಲಿ ಆಹಾರ ಪದ್ಧತಿಯಲ್ಲಿಯೂ ಬದಲಾವಣೆಯಾಗಿ ನಮ್ಮ ಪೂರ್ವಿಕರು ಉಪಯೋಗಿಸಿದ್ದ ಆಹಾರ ಕ್ರಮವನ್ನು ಬಿಟ್ಟ ಕಾರಣ ಇಂದು ನಮ್ಮಲ್ಲಿ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂದು ಬಹುತೇಕರು ಅರಾಮದಾಯಕ ಜೀವನ ಶೈಲಿಗೆ ಮಾರುಹೋಗಿ ಶ್ರಮಾಧಾರಿತ ಕಠಿಣ ಕೆಲಸಗಳನ್ನು ಬಿಟ್ಟ ಕಾರಣದಿಂದ ಆರೋಗ್ಯ ಸಮಸ್ಯೆ ಹೆಚ್ಚಿದೆ ಎಂದರು. ನಿತ್ಯ ನಮ್ಮ ಕೆಲಸಗಳ ನಡುವೆ ವಾಯು ವಿಹಾರ,ಧ್ಯಾನ,ಯೋಗ,ಪ್ರಾಣಾಯದಂತಹ ಉಪಕ್ರಮಗಳನ್ನು ರೂಢಿಸಿಕೊಂಡು, ಹಿತ-ಮಿತ ಆಹಾರ ಮತ್ತು ಅದಕ್ಕೆ ತಕ್ಕ ಪೌಷ್ಟಿಕತೆ ಯಿಂದ ಕೂಡಿರುವ ಪದಾರ್ಥಗಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗ ಆಗಮಿಸಿದ್ದ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ, ಹುರುಳಿ ಎಂ. ಬಸವರಾಜ್ ಅವರು ಮಾತನಾಡಿ ಇಂದು ಆರೋಗ್ಯ ಸುಸ್ಥಿಯಲ್ಲಿಟ್ಟುಕೊಳ್ಳುವುದೇ ಒಂದು ಸಾಹಸವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಚಿನ್ಮಯಾನಂದ ಅವರು ಯೋಗ ತರಬೇತಿ ನೀಡುವುದರ ಜೊತೆಗೆ ಇಂತಹ ಉಚಿತ ಆರೋಗ್ಯ ತಪಾಸಣಾ ಅದು ಪ್ರಕೃತಿ ಚಿಕಿತ್ಸಾ ಪದ್ಧತಿಯಂತ ಶಿಬಿರಗಳನ್ನು ಆಯೋಜಿಸುವ ಮೂಲಕ ತಮ್ಮ ಜನ್ಮದಿನವನ್ನು ಆಚರಿಸುವ ಕ್ರಮಕ್ಕೆ ಮುಂದಾಗಿರುವುದು ಅನುಕರಣೀಯ. ಶ್ರೀಯುತರು ಮಲ್ಲಾಡಿಹಳ್ಳಿ ರಾಘವೇಂದ್ರ ಶ್ರೀಗಳ ಶಿಷ್ಯರು. ಅವರ ಜೀವನವನ್ನು ತಮ್ಮ ಮಾರ್ಗದರ್ಶನವಾಗಿ ಇಟ್ಟುಕೊಂಡಿದ್ದಾರೆ. ಇವರ ಸಮಾಜಮುಖಿ ಸೇವೆ ಕಂಡು ಮೊನ್ನೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ
ಸಂದಾಯವಾಗಿರುವುದು ಅಭಿನಂದನೀಯ ಎಂದರು.

ಈ ಸಂದರ್ಭದಲ್ಲಿ ವೀರಶೈವ ಸಮಾಜ ಅಧ್ಯಕ್ಷರಾದ ಎಸ್. ವಿ. ನಾಗರಾಜಪ್ಪ, ಕಾರ್ಯದರ್ಶಿ ಎನ್. ಬಿ.ವಿಶ್ವನಾಥ್ ,ಖಜಾಂಚಿ ಷಡಕ್ಷರಯ್ಯ ಸೇರಿದಂತೆ ಚಿನ್ಮಯಾನಂದ ಅವರ ಅಭಿಮಾನಿ ಬಳಗದ ಸದಸ್ಯರು ಸೇರಿದ್ದರು. ವಿವಿಧ ಸಂಘಟನೆಗಳವರಿಂದ ಚಿನ್ಮಯಾನಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಯೋಗ ಶಿಕ್ಷಕ ಮುರಳಿ ಸ್ವಾಗತಿಸಿದರು ಶ್ರೀಮತಿ ನಿರ್ಮಲ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ನಾಗರತ್ನ ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದ ನಂತರದಲ್ಲಿ ದಾವಣಗೆರೆ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ವಿದ್ಯಾ ಗಂಗಾಧರ್ ವರ್ಮ ಅವರ ನೇತೃತ್ವದ ತಂಡ ವಿವಿಧ ಕಾಯಿಲೆಗಳ ಸುಮಾರು 91 ಜನರಿಗೆ ತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿ ಔಷಧಿಗಳನ್ನು ನೀಡಿದರು.

About The Author

Leave a Reply

Your email address will not be published. Required fields are marked *