ಸಂವಿಧಾನದ ಆಶಯ ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಎಸ್.ನಾಗಭೂಷಣ
1 min read![](https://www.chitradurgahoysala.com/wp-content/uploads/2023/11/IMG_20231106_125635-1024x768.jpg)
ಸಂವಿಧಾನದ ಆಶಯ ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಎಸ್.ನಾಗಭೂಷಣ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಿತ್ರದುರ್ಗ –
ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮಕ್ಕಳು ಭಾಗಿಯಾಗುವ ಮೂಲಕ ತಮ್ಮ ಸ್ನೇಹಿತರಿಗೆ ನೆರವಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ ತಿಳಿಸಿದರು.
ಯುನಿಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಪೀಪಲ್ ಸಂಸ್ಥೆ, ಸ್ಲೈಟ್ಸ್ ಸಂಸ್ಥೆ, ಪರಿವರ್ತನ ಸಂಸ್ಥೆ ಹಾಗೂ ಅಕ್ಷರ ಗ್ರಾಮೀಣ ವಿಕಾಸ ಸಂಸ್ಥೆ, ಮೊಳಕಾಲ್ಮೂರು ಇವರ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಸಂಸತ್ ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮಗೆ ನೀಡಿದ ಸಂವಿಧಾನದಲ್ಲಿ ಮಕ್ಕಳಿಗಾಗಿ ವಿಶೇಷ ಹಕ್ಕುಗಳನ್ನು ನೀಡಿದ್ದಾರೆ ಸಂವಿಧಾನದ ಆಶಯ ಸಾಕಾರಗೊಳಿಸುವುದು ದೇಶದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಈ ಗುರುತರ ಕಾರ್ಯದಲ್ಲಿ ಸಮುದಾಯದ ಬಹು ಮುಖ್ಯ ಭಾಗವಾಗಿರುವ ಮಕ್ಕಳು ಭಾಗಿಯಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ. ಸವಿತ ಮಾತನಾಡಿ ಪ್ರತಿಯೊಬ್ಬ ಮಕ್ಕಳಿಗೆ ಜೀವಿಸುವ ಬದುಕುವ ಹಕ್ಕಿದೆ ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಮಕ್ಕಳು ಬಾಲ್ಯವಿವಾಹ ಲೈಂಗಿಕ ಶೋಷಣೆ ಬಾಲಕಾರ್ಮಿಕದಂತಹ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುತ್ತಾರೆ ಇಂತಹ ಮಕ್ಕಳ ರಕ್ಷಣೆಗಳಿಗಾಗಿಯೇ ಸರ್ಕಾರ 1098 ಉಚಿತ ಸಹಾಯವಾಣಿ ತೆರೆದಿದೆ ಇದರ ಮೂಲಕ ನಿಮ್ಮ ಸಮಸ್ಯೆಗಳನ್ನು ಹೇಳಿದರೆ ತಕ್ಷಣವೇ ನಮ್ಮ ಇಲಾಖೆಯ ಸಿಬ್ಬಂದಿ ನಿಮ್ಮ ಸಹಾಯಕ್ಕೆ ಧಾವಿಸಲಿದೆ ಎಂದು ತಿಳಿಸಿದರು.
ಪೀಪಲ್ ಸಂಸ್ಥೆ ಕಾರ್ಯದರ್ಶಿ ಎಲ್.ಮಂಜುನಾಥ್ ಮಾತನಾಡಿ ನಮ್ಮ ಪ್ರತಿನಿಧಿಸುವ ಜನಪ್ರತಿನಿಧಿಗಳು ಮಕ್ಕಳ ಸಮಸ್ಯೆಗಳನ್ನು ಕುರಿತು ಶಾಸನ ಸಭೆಗಳಲ್ಲಿ ಮಾತನಾಡಿದ ಉದಾಹರಣೆಗಳಿಲ್ಲ ಬರೀ ಅನುದಾನಗಳ ಬಗ್ಗೆಯೇ ಹೆಚ್ಚು ಕಾಳಜಿತೋರುತ್ತಾರೆ ಇಂತಹ ಜನಪ್ರತಿನಿಧಿಗಳಿಗೆ ಆಯಾ ತಾಲ್ಲೂಕಿನ ಮಕ್ಕಳು ನಮ್ಮ ಸಮಸ್ಯೆಗಳ ಬಗ್ಗೆ ವಿಧಾನಸಭೆ ಪರಿಷತ್ತುಗಳ ಕಲಾಪಗಳಲ್ಲಿ ಧ್ವನಿ ಎತ್ತಬೇಕೆಂದು ಒತ್ತಾಯಿಸಿ ಮನವಿ ನೀಡಬೇಕೆಂದು ತಿಳಿಸಿದರು.
ಸಾಂಸ್ಕೃತಿಕ ಸಂಘಟಕ ಹಾಗೂ ಗಾಯಕ ಡಿ.ಒ. ಮುರಾರ್ಜಿ ಮಾತನಾಡಿದರು.ಪರಿವರ್ತನ ಸಂಸ್ಥೆ ಕಾರ್ಯದರ್ಶಿ ಕೆ. ಕಲ್ಲೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಕ್ಕಳಾದ ಮೇಘರಾಜ, ಇಂಚರ, ಸಹ ಶಿಕ್ಷಕ ಡಿ. ಕಲ್ಲೇಶ್, ಉಪಸ್ಥಿತರಿದ್ದರು.ಗಾಯಕ ಎಂಕೆ.ಹರೀಶ್ ನಿರೂಪಿಸಿ, ಹೆಚ್. ಮಲ್ಲಿಕಾರ್ಜುನ್ ಸ್ವಾಗತಿಸಿ, ಬಾಲಮಂದಿರದ ಸೌಜನ್ಯ ಪ್ರಾರ್ಥಿಸಿದರು.