ಜನರು ಒಮ್ಮೆಯಾದರೂ ಹಳಕಟ್ಟಿ ಬದುಕಿನ ಪರಿಚಯ ಮಾಡಿಕೊಳ್ಳಬೇಕು:ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
1 min readಹೊಸದುರ್ಗ : ಶರಣರ
ವಚನಗಳ ಸಂಗ್ರಹ, ಸಂಪಾದನೆ,
ಪ್ರಕಟಣೆಯಲ್ಲೇ ಆನಂದ ಅನುಭವಿಸಿದ ಅಪರೂಪದ ಶರಣ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಬುಧವಾರ ಸಾನಿಧ್ಯ ವಹಿಸಿ ಮಾತನಾಡಿದ ಅವರು ಹಣ, ಆಸ್ತಿ, ಪದವಿ, ಪ್ರಶಸ್ತಿ,ಮನೆ, ಮಡದಿ, ಭೋಗ ಇವುಗಳ ಸುತ್ತಲೇ ಸುತ್ತುವ ಜನರು ಒಮ್ಮೆಯಾದರೂ ಹಳಕಟ್ಟಿ
ಯವರ ಹೋರಾಟದ ಬದುಕಿನ ಪರಿಚಯ ಮಾಡಿಕೊಳ್ಳಬೇಕು. ಕಾರಣ ಅದು ಸಾಧನೆ ಮಾಡುವವರಿಗೆ ಒಂದು ಸ್ಫೂರ್ತಿಯ ಸೆಲೆ’ ಎಂದು
ಸಲಹೆ ನೀಡಿದರು.
ವಚನಶಾಸ್ತ್ರ ಪಿತಾಮಹ ಫ.ಗು.ಹಳಕಟ್ಟಿ ಕುರಿತು ಉಪನ್ಯಾಸ ನೀಡಿದ ಬೆಂಗಳೂರಿನ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಶರಣ ಚಳವಳಿ ಜಗತ್ತಿಗೆ ಮಾರ್ಗದರ್ಶನ ನೀಡುವಂಥ ಅನರ್ಘ್ಯ ಸಂಪತ್ತು. ಇಂಥ
ಸಂಪತ್ತನ್ನು ಒಂದು ಕಡೆ ಸಂಪಾದಿಸಿದ ಕವಿ ಫ.ಗು. ಹಳಕಟ್ಟಿಯವರ ಬಗೆಗೆ ಓದಿದಾಗ ವಿಶಿಷ್ಟವಾದ ಅನುಭವದ ಜತೆಗೆ ಅವರ ಪರಿಶ್ರಮದ ಬಗ್ಗೆ ದಿಗ್ಭ್ರಮೆಯೂ ಆಗುತ್ತದೆ ಎಂದರು.
ಹಳಕಟ್ಟಿಯವರು ತಮ್ಮ ಉತ್ತ
ರಾರ್ಧ ಬದುಕನ್ನು ವಚನ ಸಾಹಿತ್ಯದ ಸಂಗ್ರಹ, ಸಂಪಾ
ದನೆ, ಪ್ರಕಟಣೆಗಾಗಿ ವಿನಿಯೋಗಿಸಿದುದು ನಂಬಲು ಅಸಾಧ್ಯ
ವಾದ ಸಂಗತಿ. ಅವರ ಸಮಗ್ರ 15 ಸಂಪುಟಗ
ಳನ್ನು ಓದದೇ
ಇದ್ದರೂ ಪ್ರತಿ ಪುಟ
ವನ್ನು ತಿರುವಿ ಹಾಕುವ ಕೆಲಸವನ್ನಾದರೂ ಮಾಡಬೇಕು.
ಶರಣ ಚಳವಳಿಗೆ ಇರುವ ಶಕ್ತಿ ಹಳಕಟ್ಟಿಯಂಥ ಶರಣರನ್ನು ಸೃಷ್ಟಿಸಿತು. ಶರಣರಿಗೂ ಹಳಕಟ್ಟಿಯವರಿಗೂ ಒಳಗಿನಿಂದ ಜೀವ-ಕರುಳ ಸಂಬಂಧವಿದೆ’
ಎಂದು ವಿವರಿಸಿದರು.