ನಾಯಕನಹಟ್ಟಿ ಪಪಂ ಮುಖ್ಯಾಧಿಕಾರಿ ಎಸಿಬಿ ಬಲೆಗೆ
1 min readಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪ.ಪಂ ಮುಖ್ಯಾಧಿಕಾರಿ ಮುಖ್ಯಾಧಿಕಾರಿ, ಹಾಗೂ ಅಕೌಂಟೆಂಟ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮುಖ್ಯಾಧಿಕಾರಿ ಭೂತಪ್ಪ ಎಸಿಬಿ ಬಲೆಗೆ
ಚಿತ್ರದುರ್ಗ,ಆ.27:
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭೂತಪ್ಪ ಹಾಗೂ ಅಕೌಂಟ್ಸ್ ಕನ್ಸಲ್‍ಟೆಂಟ್ ಸರ್ಪರಾಜ್ ಆಗಸ್ಟ್ 27 ರಂದು ಕಚೇರಿಯಲ್ಲಿ ರೂ.5000 ಲಂಚ ಸ್ವೀಕರಿಸುತ್ತಿರುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕಾರ್ಯಾಲಯಕ್ಕೆ ಅವಶ್ಯವಿರುವ ಅಲ್ಯೂಮಿನಿಂ ಗ್ಲಾಸ್ ಪಾರ್ಟಿಶಿಯನ್ ಸಾಮಗ್ರಿಗಳನ್ನು ಪೂರೈಸಲು ಪಟ್ಟಣ ಪಂಚಾಯಿತಿಯಿಂದ ರೂ.99643 ಗಳಿಗೆ ವೈ.ಆರ್ ನಾಗೇದ್ರ ಇವರಿಗೆ ಕಾರ್ಯಾದೇಶ ನೀಡಿದ್ದು ಸಾಮಗ್ರಿಗಳನ್ನು ಸರಬರಾಜು ಮಾಡಿದ್ದು ಆ ಮೊತ್ತದಲ್ಲಿ 60000 ರೂ ಗಳನ್ನು ಜಮಾಮಾಡಲಾಗಿತ್ತು. ಉಳಿದ ಬಾಕಿ ಮೊತ್ತ 39,643 ರೂ ಗಳನ್ನು ಪಾವತಿಸಲು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸರ್ಫರಾಜ್ ಅವರು ಮೂಲಕ 5000 ರೂ ಗಳನ್ನು ಲಂಚಕ್ಕೆ ಬೇಡಿಕೆ ಇಟ್ಟಿದ್ದು ಅಂಗಡಿ ಮಾಲಿಕ ಆಗಸ್ಟ್ 27 ರಂದು ಎಸಿಬಿಗೆ ನೀಡಿದ ದೂರಿನ ಮೇರೆಗೆ ಡಿವೈಎಸ್‍ಪಿ ಪರಮೇಶ್ವರ್ ಹೆಚ್.ಎಸ್ ಇನ್ಸ್‍ಸ್ಪೆಕ್ಟರ್ ಪ್ರಹ್ಲಾದ್ ಆರ್ ಚನ್ನಗಿರಿ ಮತ್ತು ಚೈತನ್ಯ ಸಿ.ಜೆ ಹಾಗೂ ಸಿಬ್ಬಂದಿಗಳು ನೇತೃತ್ವದಲ್ಲಿ ದಾಳಿ ನಡೆಸಿ ಹ ಆರೋಪಿಗಳನ್ನು ವಶಪಡಿಸಿ ದಸ್ತಗಿರಿ ಮಾಡಲಾಗಿರುತ್ತದೆ.