ನಾಳೆ ಕರೆಂಟ್ ವ್ಯತ್ಯಯ,ನಿಮ್ಮ ಊರಲ್ಲಿಇರುತ್ತಾ ನೋಡಿ?
1 min readಸೆ.03 ರಂದು ವಿದ್ಯುತ್ ವ್ಯತ್ಯಯ****ಚಿತ್ರದುರ್ಗ, ಸೆಪ್ಟೆಂಬರ್ 02: ಚಿತ್ರದುರ್ಗ ನಗರ ಉಪವಿಭಾಗ ಕಾರ್ಯ ಮತ್ತು ಪಾಲನ ಘಟಕ-4ರ ವ್ಯಾಪ್ತಿಯಲ್ಲಿ ಮಲ್ಲಾಪುರದ ಹತ್ತಿರ ಎನ್.ಹೆಚ್-13 ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸದ ಅಡ್ಡಲಾಗಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರ ಮಾಡುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕಾಮಗಾರಿ ಸ್ಥಳದಲ್ಲಿ ವಿದ್ಯುತ್ ಪೂರೈಸಲ್ಪಡುವ ಎಫ್-2 ಸಿ.ಜೆ.ಹಳ್ಳಿ, ಎಫ್-9 ಸೀಬಾರ, ಎಫ್-14 ಪಿ.ಕೆ.ಹಳ್ಳಿ, ಎಫ್-6 ಜಿ.ಆರ್.ಹಳ್ಳಿ ಈ ಮಾರ್ಗಗಳ ಪ್ರದೇಶಗಳಲ್ಲಿ ಸೆಪ್ಟೆಂಬರ್ 03 ರಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್ ನಿಲುಗಡೆಗೊಳಿಸುವ ಗ್ರಾಮಗಳು: ಚಿತ್ರದುರ್ಗ ನಗರ ಉಪವಿಭಾಗದ ಘಟಕ-4ರ ಗ್ರಾಮೀಣ ಪ್ರದೇಶದ ವ್ಯಾಪ್ತಿಯ ಮಲ್ಲಾಪುರ, ಮಲ್ಲಾಪುರ ಗೊಲ್ಲರಹಟ್ಟಿ, ಜಿ.ಆರ್.ಹಳ್ಳಿ, ಪಿ.ಕೆ.ಹಳ್ಳಿ, ತಮಟಕಲ್ಲು, ಗೊಲ್ಲರಹಟ್ಟಿ, ಸೀಬಾರ ಗ್ರಾಮಗಳ ಎನ್‍ಜೆವೈ ಹಾಗೂ ಐಪಿ ಫೀಡರ್‍ಗಳಲ್ಲಿ ಹೊಂದಿಕೊಂಡ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ಗ್ರಾಹಕರು ಸಹಕರಿಸಬೇಕು ಎಂದು ಬೆವಿಕಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ತಿಮ್ಮಣ್ಣ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.