ತುರುವನೂರು ಕಾಲೇಜನ್ನು ಘಟಕ ಕಾಲೇಜು ಆಗಿ ಸರ್ಕಾರದ ಅಧಿಕೃತ ಆದೇಶ: ಶಾಸಕ ಟಿ.ರಘುಮೂರ್ತಿ.
1 min readಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ನಾಡಿನ ಸಂತರಿಗೆ, ರೈತರಿಗೆ,ವಿದ್ಯಾರ್ಥಿ ಸಂಘಟನೆಗಳಿಗೆ, ಸಂಘಟನೆಗಳಿಗೆ ಎಲ್ಲಾ ಹೋರಟಗಾರರಿಗೆ ನಾನು ಋಣಿ ಶಾಸಕ ಟಿ.ರಘುಮೂರ್ತಿ.
“ತುರುವನೂರಿನ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಆದೇಶವನ್ನು ಪರಿವರ್ತಿಸಿ, ಘಟಕ ಕಾಲೇಜನ್ನಾಗಿ ಮಾರ್ಪಾಡಿಸಲು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ”
ತುರುವನೂರು ಕಾಲೇಜು ಸ್ಥಳಾಂತರ ಆದೇಶವನ್ನು ಪರಿವರ್ತಿಸಿ, ಹಾಲಿ ಕಾಲೇಜನ್ನು, ಘಟಕ ಕಾಲೇಜನ್ನಾಗಿ ಮಾಡಲು ನಿರ್ಧರಿಸಿರುವುದು ಸಂತೋಷದ ವಿಷಯ.
ತುರುವನೂರು ಕಾಲೇಜನ್ನು ಘಟಕ ಕಾಲೇಜನ್ನಾಗಿ ಪರಿವರ್ತಿಸಿ ಆದೇಶಿಸಿದ ರಾಜ್ಯ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ರವರಿಗೆ ಹಾಗೂ ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ್ ಅವರಿಗೆ ನನ್ನ ಹೃದಯಸ್ಪರ್ಶಿ ಕೃತಜ್ಞತೆಗಳು ತಿಳಿಸಿದ್ದಾರೆ.
ತುರುವನೂರು ಕಾಲೇಜು ಸ್ಥಳಾಂತರವನ್ನು ವಿರೋಧಿಸಿ, ಹಾಗೂ ಕಾಲೇಜು ಸ್ಥಳಾಂತರ ಆದೇಶವನ್ನು ಹಿಂಪಡೆಯುವಂತೆ ಹಮ್ಮಿಕೊಂಡಿದ್ದ ಹೋರಾಟಕ್ಕೆ ಕೈಜೋಡಿಸಿ, ಹೋರಾಟಕ್ಕೆ ಆತ್ಮ ಸ್ಥೈರ್ಯ ತುಂಬಿದ ಶಾಸಕಾಂಗ ಹಾಗೂ ವಿರೋಧ ಪಕ್ಷದ ನಾಯಕರಾದ ಗೌರವಾನ್ವಿತ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.
ಇನ್ನು ಬಹುಮುಖ್ಯವಾಗಿ ಕಾಲೇಜು ಸ್ಥಳಾಂತರವನ್ನು ಒಕ್ಕೊರೊಲಿನಿಂದ ಖಂಡಿಸಿ ಹಾಗೂ ಕ್ಷೇತ್ರದ ಶೈಕ್ಷಣಿಕ ಬೆಳವಣಿಗೆಗೆ ಸದಾ ನಿಮ್ಮೊಂದಿಗೆ ನಾವಿದ್ದೇವೆ ಎಂದು ತಮ್ಮ ಎಲ್ಲಾ ಹೋರಾಟಗಳ ಬೆನ್ನಿಗೆ ನಿಂತು, ಕಾಲೇಜು ಉಳಿಸಿಕೊಳ್ಳಲು ಅವಿರತವಾಗಿ ಶ್ರಮಿಸಿದ ನಾಡಿದ ಶರಣು ಸಂತರು, ಮಠಾಧಿಪತಿಗಳು, ದಲಿತ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟದ ಸ್ವಾಮಿಗಳಿಗೆ ನನ್ನ ಶಿರಷ್ಟಾಂಗ ನಮಸ್ಕಾರಗಳು.
ಕಾಲೇಜು ಉಳಿವು ಹಾಗೂ ಕ್ಷೇತ್ರದ ಶೈಕ್ಷಣಿಕ ಹೊರಾಟಕ್ಕೆ
ಸದಾ ನಮ್ಮೊಂದಿಗೆ ನಿಂತು ಪ್ರಸ್ತುತ ಕಾಲೇಜನ್ನು ಘಟಕ ಕಾಲೇಜನ್ನಾಗಿ ಮಾಡಲು ಒಕ್ಕೊರಲಿನಿಂದ ಒತ್ತಾಯಿಸಿದ
ಹಾಲಿ ಸಂಸದರು, ಸಚಿವರು, ಶಾಸಕರು,
ಮತ್ತು ಮಾಜಿ ಸಂಸದರು ಸಚಿವರು ಹಾಗೂ ಶಾಸಕರು,
ಹಾಗೂ ಜನಪ್ರತಿನಿಧಿಗಳು, ಹಿರಿಯ ಮುಖಂಡರು, ರೈತ ಹೋರಟಗಾರರು, ಕನ್ನಡಪರ ಸಂಘಟನೆಗಳು, ಪತ್ರಕರ್ತರು, ಕವಿಗಳು, ಸಾಹಿತಿಗಳು, ಪ್ರಗತಿಪರ ಹೋರಾಟಗಾರರು, ಮಹಿಳ ಸಂಘಟನೆಗಳು, ನಿವೃತ್ತ ಪ್ರಾಂಶುಪಾಲರು, ವಿದ್ಯಾರ್ಥಿ ಸಂಘಟನೆಗಳು, ಎಬಿವಿಪಿ ಸಂಘಟನೆ, ಅಹಿಂದ ಸಂಘಟನೆಗಳು, ಪೋಷಕರು ಸೇರಿದಂತೆ ಹಲವು ಜನಪರ ಹೋರಾಟಗಾರರು ಶ್ರಮಿಸಿದ್ದಾರೆ ಅವರಿಗೆ ನನ್ನ ಧನ್ಯವಾದಗಳು.
ಕಾಲೇಜು ಉಳಿವಿಗಾಗಿ ಹೋರಾಡಿದ ರಾಜ್ಯದ ಜನಪ್ರತಿನಿಧಿಗಳು, ರಾಜ್ಯದ ಮಟ್ಟದ ಸರ್ಕಾರಿ ಅಧಿಕಾರಿಗಳು, ಜಿಲ್ಲೆಯ ಸರ್ವಪಕ್ಷದ ನಾಯಕರು,
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಕಾಲೇಜು ಉಳಿವಿಗಾಗಿ ಪ್ರತ್ಯೇಕವಾಗಿ ಹಾಗೂ ಪರೋಕ್ಷವಾಗಿ ಹೋರಾಡಿದ ಕ್ಷೇತ್ರದ ನನ್ನೆಲ್ಲ ನಾಗರೀಕ ಬಂಧುಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ತಿಳಿಸಿದ್ದಾರೆ.